ಮಡಿಕೇರಿ, ಸೆ. ೨೨: ಮಡಿಕೇರಿ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಸಭೆ ತಾ. ೨೪ ರಂದು (ನಾಳೆ) ಮಧ್ಯಾಹ್ನ ೧೨ ಗಂಟೆಯಿAದ ೧ ಗಂಟೆವರೆಗೆ ಮಡಿಕೇರಿ ಉಪ ವಿಭಾಗ ಕಚೇರಿ ಆವರಣದಲ್ಲಿ ಮಡಿಕೇರಿ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮಡಿಕೇರಿ ಉಪ ವಿಭಾಗ ವ್ಯಾಪ್ತಿಯ ಸಾರ್ವಜನಿಕರು /ವಿದ್ಯುತ್ ಗ್ರಾಹಕರ ವಿದ್ಯುಚ್ಛಕ್ತಿಗೆ ಸಂಬAಧಿಸಿದ ಸಮಸ್ಯೆ ಅಥವಾ ದೂರುಗಳು ಇದ್ದಲ್ಲಿ ಈ ಸಭೆಯಲ್ಲಿ ಚರ್ಚಿಸಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ಸಭೆಗೆ ಹಾಜರಾಗುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಅವರು ಕೋರಿದ್ದಾರೆ.