ಮಡಿಕೇರಿ, ಸೆ. ೨೨: ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿರ Äವುದರಿಂದ ಸಾರ್ವಜನಿಕರು, ವಾಹನ ಸವಾರರು ಹಾಗೂ ಜನಪ್ರತಿನಿಧಿಗಳಿಂದ ಹಲವಾರು ದೂರುಗಳು ಬಂದಿದ್ದು, ಅದರಂತೆ ಸರ್ವೋಚ್ಚ ನ್ಯಾಯಾಲಯದ ಹಾಗೂ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ಸಂತಾನ ಹರಣ ಶಸ್ತç ಚಿಕಿತ್ಸೆ ಮಾಡಿಸಲು ಕ್ರಮವಹಿಸಲಾಗಿದೆ. ಆದ್ದರಿಂದ ಸಾಕು ನಾಯಿಗಳನ್ನು ಬೀದಿಯಲ್ಲಿ ಬಿಡದಂತೆ ನಗರಸಭೆ ಪೌರಾಯುಕ್ತರು ಕೋರಿದ್ದಾರೆ.