ಮಡಿಕೇರಿ, ಸೆ. ೨೨: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕ್ರೀಡಾ ವಸತಿ ನಿಲಯಗಳನ್ನು ಮೇಲ್ದರ್ಜೆಗೇರಿಸುವ ಹಾಗೂ ಕ್ರೀಡಾಂಗಣವನ್ನು ಆಧುನಿಕರಿಸುವ ಸಂಬAಧ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಕ್ರೀಡಾ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಭಾರತ ಹಾಕಿ ತಂಡದ ಮಾಜಿ ಉಪನಾಯಕ, ಜಿಲ್ಲೆಯ ಹಾತೂರುವಿನ ವಿ.ಆರ್. ರಘುನಾಥ್ ಸೇರಿದಂತೆ ಐವರನ್ನು ನೇಮಕ ಮಾಡಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು ೩೪ ಕ್ರೀಡಾ ವಸತಿ ನಿಲಯಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಿರ್ವಹಿಸಲಾಗುತ್ತಿದೆ.

(ಮೊದಲ ಪುಟದಿಂದ) ಕರ್ನಾಟಕದ ಕ್ರೀಡಾಪಟುಗಳಿಗೆ ಅಂರ‍್ರಾಷ್ಟಿçÃಯ ಗುಣಮಟ್ಟದ ತರಬೇತಿ ನೀಡುವ ಹಾಗೂ ಇಂದಿನ ಆಧುನಿಕತೆಗೆ ತಕ್ಕಂತೆ ವೈಜ್ಞಾನಿಕವಾಗಿ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸುವ ದೃಷ್ಟಿಯಿಂದ ರಾಜ್ಯದ ಕ್ರೀಡಾ ವಸತಿ ನಿಲಯಗಳಿಗೆ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಅತ್ಯಾಧುನಿಕ ರೀತಿಯಲ್ಲಿ ಒದಗಿಸುವುದು ಹಾಗೂ ಜಿಲ್ಲಾ ಕ್ರೀಡಾಂಗಣಗಳನ್ನು ಒಲಂಪಿಕ್ ಪಂದ್ಯಾವಳಿಗೆ ಕ್ರೀಡಾಪಟುಗಳನ್ನು ತಯಾರಿ ಮಾಡುವ ದರ್ಜೆಗೆ ಉನ್ನತೀಕರಿಸುವುದು ಇಂದಿನ ಅವಶ್ಯಕತೆಯಾಗಿದೆ.

ಅಲ್ಲದೇ, ಸ್ಥಳೀಯ ಶಾಸಕರು, ಕ್ರೀಡಾಪಟುಗಳು ಹಾಗೂ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳು ಸಹ ಕ್ರೀಡಾ ನಿಲಯಗಳನ್ನು ಮತ್ತು ಕ್ರೀಡಾಂಗಣಗಳನ್ನು ಆಧುನಿಕವಾಗಿ ಹಾಗೂ ವೈಜ್ಞಾನಿಕವಾಗಿ ಮೇಲ್ದರ್ಜೆಗೇರಿಸುವಂತೆ ಮನವಿ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕ್ರೀಡಾ ವಸತಿ ನಿಲಯಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಿಗೆ ಭೇಟಿ ನೀಡಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಜಿಲ್ಲಾವಾರು ಕಾರ್ಯಸಾಧು ವರದಿಯನ್ನು ಸಲ್ಲಿಸಲು ತಜ್ಞರ ಸಮಿತಿಯೊಂದನ್ನು ರಚಿಸಲಾಗಿದ್ದು, ೨ ತಿಂಗಳ ಕಾಲಮಿತಿಯೊಳಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಸಮಿತಿಯಲ್ಲಿ ವಿ.ಆರ್. ರಘುನಾಥ್, ಭಾರತ ಹಾಕಿ ತಂಡದ ಮಾಜಿ ಉಪ ನಾಯಕ ಹಾಗೂ ಅರ್ಜುನ ಪ್ರಶಸ್ತಿ ವಿಜೇತರು, ಹೊನ್ನಪ್ಪಗೌಡ, ಕಬ್ಬಡಿ ಕ್ರೀಡಾಪಟು ಹಾಗೂ ಅರ್ಜುನ ಪ್ರಶಸ್ತಿ ವಿಜೇತರು, ಎಸ್. ಅರವಿಂದ, ಕ್ರಿಕೆಟ್ ಕ್ರೀಡಾಪಟು ಹಾಗೂ ಕರ್ನಾಟಕ ರಣಜಿ ತಂಡದ ಬೌಲಿಂಗ್ ಕೋಚ್, ಬಿ.ಜಿ. ನಾಗರಾಜು, ಭಾರತೀಯ ಮಾಜಿ ಅಥ್ಲೆಟ್ ಹಾಗೂ ಏಕಲವ್ಯ ಪ್ರಶಸ್ತಿ ವಿಜೇತರು, ಡಾ. ಜಿತೇಂದ್ರ ಶೆಟ್ಟಿ, ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರುಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಂ. ಉಮೇಶ್ ಶಾಸ್ತಿç ಆದೇಶ ಹೊರಡಿಸಿದ್ದಾರೆ.