ಕಣಿವೆ, ಸೆ. ೨೨: ಕೊರೊನಾ ಕಾರಣದಿಂದ ಕಳೆದ ಎರಡು ತಿಂಗಳುಗಳಿAದ ಸ್ಥಗಿತಗೊಂಡಿದ್ದ ದುಬಾರೆಯ ಕಾವೇರಿ ನದಿಯ ರಿವರ್ ರ್ಯಾಫ್ಟಿಂಗ್ (ಜಲಕ್ರೀಡೆ) ತಾ.೨೩ (ಇಂದಿನಿAದ) ಪುನರಾರಂಭಗೊಳ್ಳಲಿದೆ.
ಹಾಗೆಯೇ ವೈಟ್ ವಾಟರ್ ಗೇಂ ಕೂಡ ಆರಂಭಗೊಳಿಸಲು ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಾಹಿತಿ ಬಂದಿದೆ.
ಕೊರೊನಾ ಪ್ರಕರಣಗಳು ಇಳಿಮುಖಗೊಂಡದ್ದರಿAದ ರಿವರ್ ರ್ಯಾಫ್ಟಿಂಗ್ಗೆ ಜಿಲ್ಲಾಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆ. ಆದರೆ ಕಾವೇರಿ ನದಿಯಲ್ಲಿ ನೀರಿನ ಹರಿವು ಸದ್ಯದ ಸ್ಥಿತಿಯಲ್ಲಿ ಕ್ಷೀಣವಾಗಿರುವುದರಿಂದ ಏಳು ಕಿಮೀವರೆಗಿನ ರ್ಯಾಫ್ಟಿಂಗ್ ಅಸಾಧ್ಯವಾಗಿದ್ದು, ದುಬಾರೆಯ ಆವರಣದಲ್ಲಿನ ನೀರಿನಲ್ಲಿಯೇ ಸ್ಟಿಲ್ ವಾಟರ್ ರ್ಯಾಫ್ಟಿಂಗ್ ಮಾಡಲು ರ್ಯಾಫ್ಟಿಂಗ್ ಅಸೋಸಿಯೇಷನ್ ಪದಾಧಿಕಾರಿಗಳು ತೀರ್ಮಾನಿಸಿದ್ದಾರೆ.
ವಾರಾಂತ್ಯದ ದಿನಗಳಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರು ಒಂದಷ್ಟು ಪ್ರಮಾಣದಲ್ಲಿ ಧಾವಿಸುತ್ತಿರುವುದರಿಂದ ಪ್ರವಾಸೋದ್ಯಮ ಚಟುವಟಿಕೆಗಳು ಇನ್ನಷ್ಟೇ ಆರಂಭವಾಗಬೇಕಿದೆ. ದುಬಾರೆ ಸಂಪರ್ಕದ ಗುಡ್ಡೆಹೊಸೂರು ರಂಗಸಮುದ್ರ ಮಾರ್ಗದಲ್ಲಿ ಹೆದ್ದಾರಿಯ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿರುವುದರಿಂದ ಕೊಡಗರಹಳ್ಳಿ, ಕಂಬಿಬಾಣೆಗಾಗಿ ಚಿಕ್ಲಿಹೊಳೆ ಜಲಾಶಯದ ಮೂಲಕ ದುಬಾರೆಗೆ ತೆರಳಬೇಕಿದೆ.
ದುಬಾರೆಯಲ್ಲಿ ೩೪ ಮಂದಿ ಮಾಲೀಕರಿದ್ದು ೫೬ ಕ್ಕೂ ರ್ಯಾಫ್ಟ್ಗಳಿವೆ. ಈ ಕ್ರೀಡಾ ಚಟುವಟಿಕೆಯಿಂದಾಗಿ ಇಲ್ಲಿ ನೂರಕ್ಕೂ ಅಧಿಕ ಮಂದಿ ಉದ್ಯೋಗ ಕಂಡು ಕೊಂಡಿದ್ದಾರೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಿದ್ದ ಸಂದರ್ಭದಲ್ಲಿ ಪ್ರವಾಸಿಗರ ಹಿತರಕ್ಷಣೆಯ ದಿಸೆಯಿಂದ ಕೊರೊನಾ ಸೋಂಕಿತರ ಪ್ರಮಾಣ ತಗ್ಗುವವರೆಗೂ ಜಲಕ್ರೀಡೆಯನ್ನು ಸ್ಥಗಿತಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.
ಜಿಲ್ಲಾಧಿಕಾರಿ ಆದೇಶ
ಜಿಲ್ಲೆಯಲ್ಲಿ ಎಲ್ಲಾ ರೀತಿಯ ಜಲಕ್ರೀಡೆ ಹಾಗೂ ಸಂಬAಧಿತ ಚಟುವಟಿಕೆಗಳನ್ನು ನದಿಗಳಲ್ಲಿ ನೈಸರ್ಗಿಕ ತೊರೆಗಳಲ್ಲಿ ಹಾಗೂ ಕೆರೆಗಳಲ್ಲಿ ನಡೆಸಲು ಅನುಮತಿಸಿದೆ. ಆದಾಗ್ಯೂ ‘ಅಮ್ಯೂಸ್ಮೆಂಟ್ ಪಾರ್ಕ್ಗಳಲ್ಲಿ ಹಾಗೂ ಸ್ವಿಮ್ಮಿಂಗ್ ಪೂಲ್ಗಳಲ್ಲಿ ಕೇವಲ ಸ್ಪರ್ಧಾತ್ಮಕ ತರಬೇತಿ ಉದ್ದೇಶಕ್ಕೆ ಮಾತ್ರ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.