ಚೆಟ್ಟಳ್ಳಿ, ಸೆ. ೨೩: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಕಸ ವಿಲೇವಾರಿಗೆ ಸೂಕ್ತ ಹಾಗೂ ಶಾಶ್ವತ ಜಾಗವನ್ನು ಗುರುತಿಸಲಾಗದೆ ಪಂಚಾಯಿತಿ ಕಟ್ಟಡದ ಬದಿಯಲ್ಲೇ ಹಲವು ವರ್ಷಗಳಿಂದ ಕಸವನ್ನು ಸುರಿಯ ಲಾಗುತ್ತಿದೆ. ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಜಾಗದಲ್ಲಿ ಸೇರಿರುವ ಸರಕಾರಿ ಪೈಸಾರಿ ಜಾಗವನ್ನು ಪಂಚಾಯಿತಿ ಹೆಸರಿಗೆ ಮಾಡುವ ಮೂಲಕ ಶಾಶ್ವತ ಕಸ ವಿಲೇವಾರಿಗೆ ಕಂದಾಯ ಇಲಾಖೆ ಹಾಗೂ ಚೆಟ್ಟಳ್ಳಿ ಪಂಚಾಯಿತಿಯೇ ನಿರ್ಲಕ್ಷö್ಯ ತೋರಿರುವ ಫಲವಾಗಿಯೇ ಇನ್ನೂ ಪರಿಹಾರ ಕಂಡಿಲ್ಲ.

ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಚೇರಳ ಗ್ರಾಮದ ಸರ್ವೆ ನಂ ೪೯/೧೩ರಲ್ಲಿ ಕೇಂದ್ರೀಯ ತೋಟಗಾರಿಕೆಯ ಸುಪರ್ದಿಯಲ್ಲಿರುವ ೨.೩೦ ಎಕರೆ ಸರಕಾರಿ ಪೈಸಾರಿಯಾಗಿದ್ದು ಅದರಲ್ಲಿ ೫೦ ಸೆಂಟು ಜಾಗ ಚೆಟ್ಟಳ್ಳಿ ಪಂಚಾಯಿತಿಯ ಶಾಶ್ವತ ಕಸವಿಲೇವಾರಿ ಘಟಕ ಸ್ಥಾಪಿಸಲು, ಉಳಿದ ಜಾಗವನ್ನು ನಿರಾಶ್ರಿತರ ಆಶ್ರಯಮನೆ ನಿರ್ಮಾಣಕ್ಕೆ ಮಂಜೂರು ಮಾಡಿಕೊಡಬೇಕೆಂದು ತಹಶೀಲ್ದಾರರಿಗೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಿAದ ಅರ್ಜಿ ಸಲ್ಲಿಸಲಾಗಿತ್ತು. ಕಂದಾಯ ಇಲಾಖೆಗೆ ತಲುಪಿದ ಅರ್ಜಿಯನ್ನು ಪರಿಶೀಲಿಸಿ ಜಿಲ್ಲಾಧಿಕಾರಿ ಕಚೇರಿಗೆೆ ಅರ್ಜಿ ಸಲ್ಲಿಸಿ ಹಲವು ತಿಂಗಳುಗಳೇ ಕಳೆದಿದೆ.

ಮುತುವರ್ಜಿ ವಹಿಸಬೇಕಾದವರಾರು?

ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕಸದ ಸಮಸ್ಯೆ ಇವತ್ತು ನಿನ್ನೆಯದಲ್ಲ; ಹಲವು ವರ್ಷಗಳ ಸಮಸ್ಯೆಯಾಗಿದೆ. ಈರಳೆವಳ ಮುಡಿಯ ಸರ್ವೆ ನಂ. ೨೮/೧ ಹಾಗೂ

(ಮೊದಲ ಪುಟದಿಂದ) ಶ್ರೀಮಂಗಲ ಗ್ರಾಮದ ಬೇರಂಗಿ ಬೆಟ್ಟದಲ್ಲಿ ಕಸವಿಲೇವಾರಿಗೆ ಪಂಚಾಯಿತಿಯೇ ಜಾಗ ಗುರುತಿಸಿತ್ತು. ಆದರೆ ಆ ಜಾಗ ಕಸವಿಲೇವಾರಿಗೆ ಸೂಕ್ತವಲ್ಲವೆಂದು ಕೈಬಿಡಲಾಯಿತು. ತದನಂತರ ಪರಿಶೀಲಿಸಿದಾಗ ಸುಂಟಿಕೊಪ್ಪ ಮುಖ್ಯರಸ್ತೆಯ ಬದಿಯ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದ ಒತ್ತುವರಿಯಲ್ಲಿರುವ ಪೈಸಾರಿ ಜಾಗವನ್ನು ಸಂಬAಧಪಟ್ಟ ಕಂದಾಯ ಇಲಾಖಾ ಅಧಿಕಾರಿಗಳು ಹಾಗೂ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಪರಿಶೀಲಿಸಿ ಜಾಗ ಒತ್ತುವರಿಯನ್ನು ತೆರವುಗೊಳಿಸಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಹೆಸರಿಗೆ ಮಾಡಿ ಕಸವಿಲೇವಾರಿಗೆ ಕ್ರಮಕೈಗೊಳ್ಳಲು ತೀರ್ಮಾನಿಸಲಾಯಿತು.

ಹಲವು ತಿಂಗಳ ಹಿಂದೆ ಅರ್ಜಿ ಸಲ್ಲಿಸಿ ಗ್ರಾಮ ಪಂಚಾಯಿತಿ ಸುಮ್ಮನಿದ್ದರೆ ಜಾಗ ಸಿಗುವುದೇ? ಕೊಡಗಿನ ಕೆಲವು ಪಂಚಾಯಿತಿಗೆ ಕಸವಿಲೇವಾರಿಗೆ ಜಾಗಕ್ಕಾಗಿ ಪಂಚಾಯಿತಿಯೇ ಶ್ರಮಿಸಿದ ಫಲವಾಗಿ ಕೆಲವೇ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆ ಕಂದಾಯ ಇಲಾಖೆ ಪಂಚಾಯಿತಿ ಹೆಸರಿಗೆ ಜಾಗ ಒದಗಿಸಿದೆ. ಆದರೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಂಬAಧಪಟ್ಟ ಅಧಿಕಾರಿಗಳನ್ನು ಕಂಡು ದಾಖಲಾತಿಯನ್ನು ಮಾಡಿಸುವವರು ಯಾರು? ಇದೆಲ್ಲ ಅಧಿಕಾರಿ ವರ್ಗದ ನಿರ್ಲಕ್ಷö್ಯವೆಂದು ಗ್ರಾಮ ಪಂಚಾಯಿತಿ ಸದಸ್ಯರೇ ದೂರುತ್ತಿದ್ದಾರೆ. ಕಂದಾಯ ಇಲಾಖಾಧಿಕಾರಿಗಳು ಕೂಡ ಮುತುವರ್ಜಿ ವಹಿಸಿದ್ದರೆ ಕಳೆದ ಒಂದೆರಡು ವರ್ಷಗಳ ಹಿಂದೆಯೇ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕಸವಿಲೇವಾರಿಗೆ ಶಾಶ್ವತ ಪರಿಹಾರವಾಗುತ್ತಿತ್ತು.

ಒಮ್ಮತವಿಲ್ಲ ಸದಸ್ಯರಿಂದ ಪರಿಹಾರ ಸಾಧ್ಯವೇ?

ಚೆಟ್ಟಳ್ಳಿ ಪಂಚಾಯಿತಿಯಲ್ಲಿ ಹತ್ತು ಹಲವು ಸಮಸ್ಯೆಗಳ ಜೊತೆಗೆ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಸದಸ್ಯರ ನಡುವೆ ಒಮ್ಮತವಿಲ್ಲದ ಅಧಿಕಾರ ವರ್ಗ ಮುತುವರ್ಜಿವಹಿಸಿದರೆ ಈ ಹಿಂದಿನ ಆಡಳಿತ ಮಂಡಳಿಯಲ್ಲೇ ಕಸವಿಲೇವಾರಿಗೆ ಸೂಕ್ತ ಜಾಗವನ್ನು ಕಂಡು ಹಿಡಿಯ ಬಹುದಿತ್ತು. ಮುಂದೆಯೂ ಆಡಳಿತ ಮಂಡಳಿ ಸದಸ್ಯರಲ್ಲಿ ಒಮ್ಮತ ಮೂಡದಿದ್ದರೆ ಇಂತಹ ಪಂಚಾಯಿತಿಯ ಸಮಸ್ಯೆಗಳನ್ನು ಆಡಳಿತದ ಅವಧಿ ಮುಗಿಯುವವರೆಗೂ ಪರಿಹರಿಸಲು ಸಾಧ್ಯವೇ ಇಲ್ಲ.

ಒಣಕಸ ವಿಲೇವಾರಿಗೆ ವಾಹನ - ಗೋದಾಮು

ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಸ ಸಂಗ್ರಹಕ್ಕೆ ಕಸ ವಿಲೇವಾರಿ ವಾಹನವಿದೆ ಆದರೆ ಚಾಲಕರಿಲ್ಲ. ಪಂಚಾಯಿತಿಯ ಡಿ ಗ್ರೂಪ್ ನೌಕರರೇ ಕಸ ಸಂಗ್ರಹದ ವಾಹನವನ್ನು ನಿರ್ವಹಿಸಬೇಕೆಂಬ ಮೇಲಧಿಕಾರಿಗಳ ಮೌಖಿಕ ಆದೇಶವಿದ್ದರೂ ಇಲ್ಲಿ ಸೂಕ್ತ ಡಿಗ್ರೂಪ್ ಸಿಬ್ಬಂದಿಗಳಿಲ್ಲ. ವ್ಯಾಪಾರ ಮಳಿಗೆಗಳಿಗೆ ಹಾಗೂ ಮನೆಗಳಿಗೆ ಕಸದ ಬಕೆಟನ್ನು ನೀಡಲು ಕಳೆದ ಬಾರಿಯೇ ಖರೀದಿಸಿಟ್ಟ ಬಕೇಟುಗಳು ಕಳೆದವಾರ ನೀಡಲಾಗಿದೆ. ಪ್ಲಾಸ್ಟಿಕ್ ಒಣಕಸವನ್ನು ಮಾರುಕಟ್ಟೆಯ ಹಿಂದೆ ನೂತನವಾಗಿ ನಿರ್ಮಿಸಿದ ಕಸಸಂಗ್ರಹÀದ ಗೋದಾಮಿನಲ್ಲಿ ಸಂಗ್ರಹಿಸಿಲಿಡಲಾಗಿ ಟನ್ನುಗಟ್ಟಲೆ ಸಂಗ್ರಹವಾದ ನಂತರ ಮೈಸೂರಿನ ಗ್ಲೋಬಲ್ ರಿಸರ‍್ಸ್ ಮೇನೇಜ್‌ಮೆಂಟಿಗೆ ನೀಡಲು ಪಂಚಾಯಿತಿ ತೀರ್ಮಾನಿಸಿದೆ.

ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಸಂಬAಧಪಟ್ಟ ಅಧಿಕಾರಿಗಳಿಗೆ ಚೆಟ್ಟಳ್ಳಿ ಪಂಚಾಯಿತಿ ಗುರುತಿಸಿದ ಕಸವಿಲೇವಾರಿಗೆ ಸಂಬAಧಿಸಿದ ಒತ್ತುವರಿಯಾದ ಸರಕಾರಿ ಜಾಗವನ್ನು ಶೀಘ್ರದಲ್ಲಿ ಸರಿಪಡಿಸಿಕೊಳ್ಳುವಂತೆ ಆದೇಶಿಸಬೇಕಿದೆ. -ವರದಿ: ಪುತ್ತರಿರ ಕರುಣ್‌ಕಾಳಯ್ಯ