ಮಡಿಕೇರಿ, ಸೆ. ೨೩: ಕೊರೊನಾ ಹಾವಳಿ ಕೊಡಗಿನಲ್ಲಿ ಹತೋಟಿಗೆ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ಈ ಬಾರಿ ಮಂಟಪಗಳ ಶೋಭಾಯಾತ್ರೆಯನ್ನು ಕೊರೊನಾ ನಿಯಮ ಪಾಲನೆ ಯೊಂದಿಗೆ ಕೊಂಚ ಸಂಭ್ರಮ ದೊಂದಿಗೆ ಆಚರಿಸಲು ಜಿಲ್ಲಾಡಳಿತದ ವತಿಯಿಂದ ಮುಂದಿನ ವಾರ ನಡೆಯಲಿರುವ ದಸರಾ ಸಮಿತಿ ಸಭೆಯಲ್ಲಿ ಮನವಿ ಮಾಡಲು ದಶಮಂಟಪ ಸಮಿತಿ ನಿರ್ಧರಿಸಿದೆ.
ರಾಜ್ದರ್ಶನ್ ಸಭಾಂಗಣ ದಲ್ಲಿಂದು ದಶಮಂಟಪ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಸಾಂಪ್ರದಾಯಿಕ ಕರಗ ಉತ್ಸವ ನಾಡಿನ ಒಳಿತಿಗಾಗಿ ಧಾರ್ಮಿಕ ವೈಭವದಿಂದ ನೆರವೇರಬೇಕು; ಜೊತೆಗೆ ಕೊರೊನಾ ಹಾವಳಿ ಜಿಲ್ಲೆಯಲ್ಲಿ ಕಡಿಮೆಯಾ ಗುತ್ತಿರುವ ಹಿನ್ನೆಲೆಯಲ್ಲಿ ಕರಾಳ ಛಾಯೆಯನ್ನು ಹೋಗ ಲಾಡಿಸುವ ನಿಟ್ಟಿನಲ್ಲಿ ಕೊರೊನಾ ನಿಯಮ ಪಾಲನೆಯೊಂದಿಗೆ ಟ್ರಾö್ಯಕ್ಟರ್ಗಳಲ್ಲಿ ಕೊಂಚ ಸಂಭ್ರಮ ದೊಂದಿಗೆ ಮಂಟಪಗಳ ಶೋಭಾ ಯಾತ್ರೆಗೆ ಅವಕಾಶ ನೀಡಬೇಕೆಂದು ಜಿಲ್ಲಾಡಳಿತದ
(ಮೊದಲ ಪುಟದಿಂದ) ಸಭೆಯಲ್ಲಿ ಬೇಡಿಕೆ ಮುಂದಿಡಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಉಮೇಶ್ ಸುಬ್ರಮಣಿ ಪ್ರಸಕ್ತ ವರ್ಷ ಸರ್ಕಾರ ದಸರಾ ಉತ್ಸವಕ್ಕೆ ಎಷ್ಟು ಅನುದಾನ ನೀಡಲಿದೆ ಎಂಬ ಬಗ್ಗೆ ತಿಳಿದಿಲ್ಲ. ಆದರೆ ೨೦೧೮ರಲ್ಲಿ ಅಂದಿನ ಉಸ್ತುವಾರಿ ಸಚಿವರು ಘೋಷಿಸಿದ್ದ ೫೦ ಲಕ್ಷ ಹಣ ಇನ್ನೂ ಕೂಡ ಬಿಡುಗಡೆಯಾಗಿಲ್ಲ. ಆದ್ದರಿಂದ ಆ ಅನುದಾನವನ್ನು ಪಡೆದುಕೊಳ್ಳುವುದರ ಜೊತೆಗೆ ಈ ಬಾರಿಯೂ ಅನುದಾನವನ್ನು ಸರ್ಕಾರದಿಂದ ತರಿಸಿಕೊಳ್ಳುವ ದಿಸೆಯಲ್ಲಿ ದಶಮಂಟಪ ಸಮಿತಿ ದಸರಾ ಸಮಿತಿಯೊಂದಿಗೆ ಸೇರಿ ಪ್ರಯತ್ನಿಸಲಿದೆ ಎಂದು ಹೇಳಿದರು. ನಾಡಿದ್ದು, ಭಾನುವಾರ ಕರಗ ಸಮಿತಿಗಳ ಸಭೆ ನಡೆಯಲಿದ್ದು, ಕರಗ ಉತ್ಸವದ ಬಗ್ಗೆ ಚರ್ಚಿಸಲಾಗುವುದೆಂದರು.
ದAಡಿನ ಮಾರಿಯಮ್ಮ ದೇವಾಲಯದ ಕರಗ ಸಮಿತಿಯವರಿಗೆ ಇಂದಿನ ಸಭೆಗೆ ಮಾಹಿತಿ ನೀಡಿಲ್ಲ ಎಂದು ಕೆ.ಎಸ್. ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು. ದಂಡಿನ ಮಾರಿಯಮ್ಮ ದೇವಾಲಯ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದೇವೆ ಎಂದು ದಶಮಂಟಪ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಹೇಳಿದರು. ಈ ವೇಳೆ ಕೆಲಕಾಲ ಚರ್ಚೆ - ವಿಚರ್ಚೆ ನಡೆದು ಬಳಿಕ ಪರಿಸ್ಥಿತಿ ತಿಳಿಯಾಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ದಶ ದೇವಾಲಯಗಳ ಪ್ರಮುಖರುಗಳು ದಸರಾ ಸಂಬAಧ ಹಲವು ಸಲಹೆ ಸೂಚನೆಗಳನ್ನು ನೀಡಿದರು.
ವೇದಿಕೆಯಲ್ಲಿ ದಶಮಂಟಪ ಸಮಿತಿ ಗೌರವಾಧ್ಯಕ್ಷ ಜಿ.ವಿ. ರವಿಕುಮಾರ್, ಉಪಾಧ್ಯಕ್ಷ ಕವನ್, ಮಹಾಪೋಷಕರಾದ ಮಧುರಯ್ಯ, ಕಾರ್ಯದರ್ಶಿ ಕೆ.ಟಿ. ಪ್ರಶಾಂತ್, ಕಂಚಿಕಾಮಾಕ್ಷಿ ದಸರಾ ಮಂಟಪ ಸಮಿತಿ ಅಧ್ಯಕ್ಷರುಗಳಾದ ಭೌತಮ್, ರಾಘವೇಂದ್ರ, ಸಲಹೆಗಾರ ರಘು ಉಪಸ್ಥಿತರಿದ್ದರು.