ಮಡಿಕೇರಿ, ಸೆ. ೨೩; ಸಂಯುಕ್ತ ಕಿಸಾನ್ ಮೋರ್ಚಾ ತಾ. ೨೭ ರಂದು ಭಾರತ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಡಿಕೇರಿಯ ಕೂರ್ಗ್ ಕಮ್ಯುನಿಟಿ ಹಾಲ್ನಲ್ಲಿ ಭೂಮಿ ಮತ್ತು ವಸತಿ ವಂಚಿತರ ಸಮಿತಿ, ಡಿ.ಎಸ್.ಎಸ್, ಕರ್ನಾಟಕ ರಾಜ್ಯ ರೈತ ಸಂಘ, ಕಾಂಗ್ರೆಸ್, ಜೆಡಿಎಸ್, ಎಸ್.ಡಿ.ಪಿ.ಐ, ಆರ್ವೈಎಫ್ಐ, ದಲಿತ ಹಿತರಕ್ಷಣಾ ಒಕ್ಕೂಟ, ಬಿಎಸ್ಪಿ, ಸಿಪಿಐಎಂಎಲ್ (ರೆಡ್ ಸ್ಟಾರ್), ಆಮ್ಆದ್ಮಿ ಪಕ್ಷದ ಜಿಲ್ಲಾ ಪ್ರತಿನಿಧಿಗಳು ಭಾಗವಹಿಸಿದ್ದರು.
ಭೂಮಿ ಮತ್ತು ವಸತಿ ವಂಚಿತರ ಸಮಿತಿಯ ಜಿಲ್ಲಾಧ್ಯಕ್ಷÀ ಅಮೀನ್ ಮೊಹ್ಸಿನ್ ಸ್ವಾಗತ ಭಾಷಣ ಮಾಡಿ ಸಭೆಯ ಉದ್ದೇಶವನ್ನು ತಿಳಿಸಿದರು. ಡಿ.ಎಸ್. ನಿರ್ವಾಣಪ್ಪ ಕ್ರಾಂತಿ ಗೀತೆ ಹಾಡಿ ಪ್ರಾಸ್ತಾವಿಕ ಭಾಷಣ ಮಾಡಿ ಪ್ರಸಕ್ತ ರೈತರ ಹೋರಾಟಕ್ಕೆ ಬೆಂಬಲ ನೀಡುವುದು ಆದ್ಯ ಕರ್ತವ್ಯ ಎಂದು ತಿಳಿಸಿದರು, ಈ ಸಂದರ್ಭ ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾ ಅಧ್ಯಕ್ಷ ತನ್ನೀರ ಮೈನಾ, ಕೆ.ಆರ್.ಆರ್.ಎಸ್.ನ ಸುಜೈ ಬೋಪಯ್ಯ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಕಾವೇರಿ ಕೊಡಗು ಜಿಲ್ಲಾ ಭೂಮಿ ಮತ್ತು ವಸತಿ ವಂಚಿತರ ಸಮಿತಿ , ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಕೊಡಗು ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಎಸ್ಡಿಪಿಐನ ಸಮೀರ್ ಹಾಗೂ ಇತರರು ವಿಷಯ ಮಂಡಿಸಿದರು.
ತಾ. ೨೭ ರಂದು ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ಗೆ ಸಂಪೂರ್ಣ ಬೆಂಬಲ ನಿರ್ಣಯವನ್ನು ಕೈಗೊಳ್ಳಲಾಯಿತು.ಕÀರ್ನಾಟಕ ರಾಜ್ಯ ರೈತ ಸಂಘದ ಪಿ.ಎಂ. ಮಾದಪ್ಪ, ಪಿ.ಟಿ.ಸುಬ್ಬಯ್ಯ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಎಲ್ಲಪ್ಪ, ಕಾಂಗ್ರೆಸ್ ಮುಖಂಡ ಪ್ರಕಾಶ್ ಆಚಾರ್ಯ, ಮಡಿಕೇರಿ ನಗರ ಎಸ್ಡಿಪಿಐ ಅಧ್ಯಕ್ಷರು ನೂರುದ್ದೀನ್, ಮಡಿಕೇರಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಂಸ, ದಲಿತ ಹಿತರಕ್ಷಣಾ ಸಮಿತಿಯ ಹೊನ್ನಪ್ಪ, ಬಿಎಸ್ಪಿ ಜಿಲ್ಲಾ ಉಸ್ತುವಾರಿ ಜಯಪ್ಪ ಹಾನಗಲ್ ಹಾಗೂ ಇತರರು ಇದ್ದರು.