ಸುಂಟಿಕೊಪ್ಪ, ಸೆ. ೨೨: ಅಂದಗೋವೆÀ ಗ್ರಾಮದ ಚಿಕ್ಕಂಡ ಮೇದಪ್ಪ ಅವರ ಗದ್ದೆಗೆ ನುಗ್ಗಿ ಎರಡು ಕಾಡಾನೆಗಳು ಕೃಷಿ ಫಸಲಗಳನ್ನು ತಿಂದು ನಾಶಪಡಿಸಿವೆ.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಅಂದಗೋವೆ ಗ್ರಾಮದ ಚಿಕ್ಕಂಡ ಮೇದಪ್ಪ ಅವರ ಮನೆ ಸಮೀಪ ರಾತ್ರಿ ವೇಳೆ ಕಾಡಾನೆಗಳು ಸೋಲಾರ್ ಲೈಟ್, ಹಾನಿ ಮಾಡಿ ನಂತರ ಎರಡು ಎಕರೆ ನಾಟಿ ಮಾಡಿದ್ದ ಗದ್ದೆಗಳಿಗೆ ನುಗ್ಗಿದ ಕಾಡಾನೆಗಳು ಬೆಳೆದು ನಿಂತ ಪೈರುಗಳನ್ನು ತಿಂದು ಹಾಕಿವೆ.

ತೋಟ ಕೆಲಸಕ್ಕೆ ತೆರಳುವ ಕಾರ್ಮಿಕರು ಆನೆಗೆ ಹೆದರಿ ಮನೆಯಲ್ಲಿ ಕೂರುವಂತಾಗಿದೆ. ಇದರಿಂದ ತೋಟ, ಗದ್ದೆಗಳÀಲ್ಲಿ ಸಕಾಲದಲ್ಲಿ ನಡೆಯಬೇಕಾದ ಕೆಲಸ ಕಾರ್ಯಗಳಿಗೆ ಹಿನ್ನೆಡೆ ಉಂಟಾಗಿದೆ. ಅರಣ್ಯ ಇಲಾಖೆಯವರು ಕಾಡಾನೆಯಿಂದ ಕೃಷಿಕರಿಗಾಗುವ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮೇದಪ್ಪ ಒತ್ತಾಯಿಸಿದ್ದಾರೆ.