ಮಡಿಕೇರಿ, ಸೆ. ೨೨: ಕಾನೂನು ಮಾಪನಶಾಸ್ತç ಇಲಾಖೆ, ಮಡಿಕೇರಿ ಇವರ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರವನ್ನು ತಾ. ೨೩ ರಿಂದ ಅಕ್ಟೋಬರ್ ೩೧ ರವರೆಗೆ ವಿ.ಎಸ್.ಎಸ್.ಎನ್. ಬ್ಯಾಂಕ್ ಸುಂಟಿಕೊಪ್ಪದಲ್ಲಿ ಏರ್ಪಡಿಸಲಾಗಿದೆ. ಸಾರ್ವಜನಿಕರು ತಮ್ಮಲ್ಲಿ ಉಪಯೋಗಿಸುವ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸಲು ತಿಳಿಸಲಾಗಿದೆ.