ಗುಡ್ಡೆಹೊಸೂರು, ಸೆ. ೨೨: ಪೊನ್ನತ್ಮೊಟ್ಟೆ ನಿವಾಸಿ, ಪ್ರಸ್ತುತ ಕುಶಾಲನಗರದ ಮಾದಪಟ್ಟಣದಲ್ಲಿ ನೆಲೆಸಿದ್ದ ಭಾಗ್ಯ ನರ್ಸರಿ ಮಾಲೀಕ ಅರವಿಂದ್ (ಮಧು-೪೫) ತಾ. ೨೨ರಂದು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಗುಡ್ಡೆಹೂಸೂರಿನ ದಿನಸಿ ಅಂಗಡಿಗೆ ಬಂದಿದ್ದ ಸಂದರ್ಭ ಅರವಿಂದ್ ಕುಸಿದು ಬಿದ್ದಿದ್ದು ನಿತ್ರಾಣವಾಗಿದ್ದ ಅವರನ್ನು ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೨೩ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ.