ಕೊಡಗಿನ ಸಿದ್ದಾಪುರದಲ್ಲಿ ಸೇನಾಧಿಕಾರಿಗಳಿಗೆ ಮಂಜೂರಾಗಿರುವ ಜಮೀನನ್ನು ಅವರ ಕುಟುಂಬದವರು ಮಾರಿದ ನಂತರ ಅಲ್ಲಿ ಸಂಘಟನೆಯೊAದು ಮನೆಗಳನ್ನು ಕಟ್ಟಿ ಆ ಬಡಾವಣೆಗೆ ಹೊಸ ಹೆಸರಿಟ್ಟಿರುವ ವಿಷಯದ ಬಗ್ಗೆ ಉಂಟಾದ ವಿವಾದದ ಬಗ್ಗೆ ಈ ಬರಹ.

ಂಡಿmಥಿ ಟಚಿಟಿಜ gಡಿಚಿಟಿಣ ಆದ ಜಾಗವನ್ನು ಮಾರಬಾರದು / ಬಹುದಾ?? ಇತ್ಯಾದಿ ವಿಷಯಗಳ ಬಗ್ಗೆ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡಿದ್ದಾರೆ. ಕೆಲವು ಸ್ನೇಹಿತರು ವಾಟ್ಸಪ್ ಮೂಲಕವೂ ಅವರ ಅಭಿಪ್ರಾಯವನ್ನು ನನಗೆ ಕಳುಹಿಸಿದ್ದರು. ಈ ವಿಷಯದ ಬಗ್ಗೆ ಸಂಬAಧ ಪಟ್ಟವರಿಂದ ಮತ್ತು ತಿಳಿದವರಿಂದ ಮಾಹಿತಿಯನ್ನು ಕಲೆ ಹಾಕಿ ಇಲ್ಲಿ ಬರೆಯುತ್ತಿದ್ದೇನೆ.

೧. ಮಿಲಿಟರಿ ಗ್ರಾಂಟಿನಲ್ಲಿ ಮಂಜೂರಾದ ಜಾಗದ ವಿಚಾರವಾಗಿ ಜಾಗ ಮಂಜೂರಾದ ಪತ್ರದಲ್ಲಿ ಎಲ್ಲ ವಿವರಗಳಿರುತ್ತದೆ (ಉಡಿಚಿಟಿಣ oಡಿಜeಡಿ). ಸಾಮಾನ್ಯವಾಗಿ ಕೃಷಿ ಚಟುವಟಿಕೆಗೆ ನಿವೃತ್ತರಾದ ಸೈನಿಕರಿಗೆ ಮಂಜೂರಾದ ಜಾಗವನ್ನು ಹದಿನೈದು ವರ್ಷಗಳ ಕಾಲ ಮಾರುವಂತಿಲ್ಲ. ಂWಊಔ (ಂಡಿmಥಿ Weಟಜಿಚಿಡಿe ಊousiಟಿg ಂssoಛಿiಚಿಣioಟಿ) ಜಾಗವನ್ನು/ಮನೆಯನ್ನು ಐದು ವರ್ಷಗಳ ಕಾಲ ಮಾರುವಂತಿಲ್ಲ. ಈ ವಿವರಗಳನ್ನು ಜಾಗವನ್ನು ಸೈನಿಕರಿಗೆ ಹಸ್ತಾಂತರಿಸುವ ಪತ್ರದಲ್ಲಿ ಸ್ಪಷ್ಟವಾಗಿ ಬರೆಯಲ್ಪಟ್ಟಿರುತ್ತದೆ.

೨. ಮಿಲಿಟರಿ ಗ್ರಾಂಟ್ ಮೂಲಕ ಮಂಜೂರಾದ ಜಾಗವನ್ನು ಅದರ ನಿಯಮಾವಳಿಯ ಅವಧಿ ಮುಗಿದ ನಂತರ ಮಾರುವುದು ಕಾನೂನಾತ್ಮಕವಾಗಿ ತಪ್ಪಾಗುವುದಿಲ್ಲ.. ಆದರೆ ಭಾವನಾತ್ಮಕವಾಗಿ ಇದು ಮನಸ್ಸಿಗೆ ನೋವು ಕೊಡುವ ವಿಚಾರ. ಒಮ್ಮೆ ನೀವು ಇತರರಿಗೆ ಮಾರಿ, ಜಾಗ ಅವರ ಹೆಸರಿಗೆ ಹಸ್ತಾಂತರವಾದ ನಂತರ ಅದು ಅವರ ಖಾಸಗಿ ಸೊತ್ತು. ಅವರು ಅದರಲ್ಲಿ ಬೇಕಾದದ್ದು ಮಾಡಿಕೊಳ್ಳಬಹುದೆಂಬ ಅರಿವು ಮಾರುವ ಮೊದಲು ಇರಲಿಲ್ಲವೇ??

೩. ಸೇಲ್ ಡೀಡ್ ಮತ್ತು ನೋಂದಣಿ ಕರಾರಿನಲ್ಲಿ ಮಾರುವಾಗ ಖರೀದಿಸುವ ವ್ಯಕ್ತಿಯಿಂದ ಹಣ ಸಂದಾಯವಾದ ನಂತರ ಆ ಆಸ್ತಿಯನ್ನು ಅವನು ಅನುಭವಿಸಲು ತಾನು ತೊಂದರೆ ಕೊಡುವುದಿಲ್ಲವೆಂದು ಮಾರಿದ ವ್ಯಕ್ತಿ ಪ್ರತಿ ಹಾಳೆಯಲ್ಲಿಯೂ ಸಹಿ ಹಾಕಿರುತ್ತಾರೆ. ಈ ವಿಚಾರಗಳ ಬಗ್ಗೆ ಜಾಗ್ರತೆ ಮಾರುವ ಮೊದಲು ಇರಬೇಕಿತ್ತು.

೪. ಕೊಡಗಿನಲ್ಲಿ ವಂಶದಿAದ ವಂಶಕ್ಕೆ ಬಂದ ಪಾರಂಪರಿಕ ಜಮ್ಮಾ ಆಸ್ತಿ ಕೂಡ ಯಾವ ಮಿಲಿಟರಿ ಗ್ರಾಂಟಿಗೆ ಕಮ್ಮಿಯಿಲ್ಲ. ಕೊಡಗು ರಾಜರು ಆಯಾ ಕುಟುಂಬಕ್ಕೆ ಈ ಭೂಮಿಯನ್ನು ಮಂಜೂರು ಮಾಡುವ ಹಿಂದೆಯೂ ಆ ಕುಟುಂಬದ ಹುಡುಗರು ಅವರ ಸೇನೆಯಲ್ಲಿ ಕೆಲಸಮಾಡಬೇಕೆನ್ನುವ ಆಶಯವಿತ್ತು. ಇಂದು ಅನೇಕ ಕುಟುಂಬಗಳ ಜಮ್ಮ ಆಸ್ತಿ ಯಾರದೋ ದುಡ್ಡಿಗೆ ಯಾರ್ಯಾರ ಪಾಲಾಗಿದೆ. ನಾಳೆ ಅಲ್ಲಿ ಅವರು ತಮಗಿಷ್ಟ ಬಂದದ್ದನ್ನು ಮಾಡುವಾಗ ನಮಗೆ ಪ್ರಶ್ನಿಸುವ ಹಕ್ಕಿದೆಯಾ?

೫. ಈ ಘಟನೆ ನಡೆದ ಕೊಡಗಿನ ಸಿದ್ದಾಪುರಕ್ಕೂ ನನಗೂ ಬಹಳ ಹತ್ತಿರದ ಸಂಬAಧವಿದೆ. ಜಮ್ಮಾ ಆಸ್ತಿಯನ್ನು ಅನೇಕ ಮೂಲನಿವಾಸಿಗಳು ಇತರರಿಗೆ ಮಾರಿ, ತಮ್ಮ ಹುಟ್ಟೂರಿನ ಜemogಡಿಚಿಠಿhಥಿ ತಮ್ಮ ಕಣ್ಣ ಮುಂದೆ ಹಾಳಾಗುವುದನ್ನು ನೋಡುತ್ತಿದ್ದಾರೆ. ಹೆಚ್ಚಿನವರಿಗೆ ಬುದ್ಧಿ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಹುತ್ತರಿಗೆ ಕದಿರು ಕುಯ್ಯುತ್ತಿದ್ದ ಗದ್ದೆಗಳೂ ಲೇಔಟ್ ಆಗುತ್ತಿದೆ. ಶತಮಾನಗಳಿಂದ ಗ್ರಾಮ ದೇವರ ಉತ್ಸವ ಹೋಗುತ್ತಿದ್ದ ಜಾಗಗಳೂ ಈಗ ಅನ್ಯರ ಪಾಲಾಗಿವೆ. ದುರಾದೃಷ್ಟವೇನೆಂದರೆ ನಾವು ಮಾಡುವ ಅನಾಹುತದ ಪರಿಣಾಮಗಳನ್ನು ನಮ್ಮ ಮುಂದಿನ ತಲೆಮಾರು ಅನುಭವಿಸುತ್ತದೆ.

೬. ಜಮ್ಮ ಆಸ್ತಿಯನ್ನು ಕಂಡವರಿಗೆ ಮಾರಿ, ಪಟ್ಟಣ ಸೇರಿ ಅಲ್ಲಿ ಕುಳಿತು ಕೀಬೋರ್ಡ್ ಕುಟ್ಟುತ್ತಾ, ಪರಿಸರ ಮತ್ತು ಸಂಸ್ಕೃತಿಯ ಬಗ್ಗೆ ಭಾಷಣ ಮಾಡುವವರನ್ನು ಕಂಡಾಗ ನನಗೆ ವಿಪರೀತ ಸಿಟ್ಟು ಬರುತ್ತದೆ. ನಮ್ಮ ಕೃಷಿ ಪ್ರಧಾನ ಸಂಸ್ಕೃತಿಯ ಸ್ವಾಭಿಮಾನವನ್ನು ನಾವು ಹುಟ್ಟಿ ಬೆಳೆದ ಮಣ್ಣಿನೊಂದಿಗೆ ಗುರುತಿಸಿಕೊಳ್ಳುವಷ್ಟು ಪರಿಜ್ಞಾನ ಬೇಡವೆ?!

- ಮೇಜರ್ ಡಾ. ಕುಶ್ವಂತ್ ಕೋಳಿಬೈಲು, ಮಡಿಕೇರಿ