ಮಡಿಕೇರಿ, ಸೆ. ೨೧: ಕೋವಿಡ್ ೩ನೇ ಅಲೆಯು ಮಕ್ಕಳಿಗೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬ ಆರೋಗ್ಯ ತಜ್ಞರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ರಾಷ್ಟಿçÃಯ ಆರೋಗ್ಯ ಅಭಿಯಾನದಡಿ ‘ಆರೋಗ್ಯ ನಂದನ’ ಅಭಿಯಾನವನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ಈ ಅಭಿಯಾನದಡಿಯಲ್ಲಿ ಇದುವರೆಗೆ ಒಟ್ಟು ೩೬,೬೬೬ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ಅವರು ಮಾಹಿತಿ ನೀಡಿದ್ದಾರೆ.

ಆರೋಗ್ಯ ನಂದನ ಅಭಿಯಾನದಡಿಯಲ್ಲಿ ೦-೬ ವರ್ಷದ ಮಕ್ಕಳು ಸೇರಿದಂತೆ ೧ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ.ವರೆಗಿನ ವಿದ್ಯಾರ್ಥಿಗಳನ್ನೂ ವಿವಿಧ ರೀತಿಯ ತಪಾಸಣೆಗೆ ಒಳಪಡಿಸಲಾಗಿದೆ. ಕೋವಿಡ್ ಸೋಂಕು ತಗುಲಿದ ವ್ಯಕ್ತಿಗಳಿಗೆ ಇತರ ಕಾಯಿಲೆಗಳಿದ್ದಲ್ಲಿ, ಅಂತಹವರಿಗೆ ಸೋಂಕಿನ ತೀವ್ರತೆ, ರೋಗ ಲಕ್ಷಣಗಳು ಹೆಚ್ಚಿರುತ್ತದೆ ಎಂಬ ಕಾರಣ ಮಕ್ಕಳನ್ನು ಇತರ ಗಂಭೀರ ಕಾಯಿಲೆಗಳಿಗೂ ತಪಾಸಣೆ ನಡೆಸಲಾಗುತ್ತಿದೆ.

ಪೌಷ್ಠಿಕಾಂಶದ ಕೊರತೆಯ ಕಾಯಿಲೆ, ಮಧುಮೇಹ, ದೀರ್ಘಕಾಲದ ಲಿವರ್ ಕಾಯಿಲೆ ಹಾಗೂ ಶ್ವಾಸಕೋಶ ಕಾಯಿಲೆ, ಮೂತ್ರಪಿಂಡದ ಸಮಸ್ಯೆ, ರಕ್ತ ಕಾಯಿಲೆ ಹಾಗೂ ಕ್ಯಾನ್ಸರ್ ಕಾಯಿಲೆಗಳ ತಪಾಸಣೆಗೆ ಮಕ್ಕಳನ್ನು ಒಳಪಡಿಸಲಾಗುತ್ತಿದೆ.

ಇದಲ್ಲದೆ ೯ನೇ ತರಗತಿಯಿಂದ ದ್ವಿತೀಯ ಪಿ.ಯು.ವರೆಗಿನ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಿದ್ದು, ಇವರುಗಳಿಗೆ ಕೋವಿಡ್ ತಪಾಸಣೆ ಕೂಡ ನಡೆಸಲಾಗುತ್ತಿದೆ.

ಅಪೌಷ್ಠಿಕತೆಯಿಂದ ಬಳಲುತ್ತಿರುವ ೯೫ ಮಕ್ಕಳು

ಆರೋಗ್ಯ ಅಭಿಯಾನದಡಿ ಮಕ್ಕಳ ತಪಾಸಣೆ ನಡೆಸಲಾಗಿದ್ದು, ಇದುವರೆಗೆ ಜಿಲ್ಲೆಯ ೬೧ ಹೆಣ್ಣು ಮಕ್ಕಳು ಹಾಗೂ ೩೪ ಗಂಡು ಮಕ್ಕಳು ಸೇರಿ ಒಟ್ಟು ೯೫ ಮಕ್ಕಳು ಸಾಧಾರಣ ಅಪೌಷ್ಠಿಕತೆಯಿಂದ ಬಳಲುತ್ತಿರುವುದು ದೃಢಪಟ್ಟಿದೆ. ಇದಲ್ಲದೆ ೪ ಗಂಡು ಮಕ್ಕಳು ಹಾಗೂ ೧೪ ಹೆಣ್ಣು ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವು ದಾಗಿಯೂ ತಿಳಿದುಬಂದಿದೆ.

ತಪಾಸಣೆಗೊಳಪಡಿಸಿದವರ ಪೈಕಿ ೨ ಗಂಡು ಮಕ್ಕಳು ಹಾಗೂ ೧ ಹೆಣ್ಣು ಮಗು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದು, ೧ ಗಂಡು ಮಗುವಿಗೆ ದೀರ್ಘಕಾಲದ ಲಿವರ್ ಕಾಯಿಲೆ ಇರುವುದಾಗಿಯೂ ಗೊತ್ತಾಗಿದೆ. ಶ್ವಾಸಕೋಶ ಕಾಯಿಲೆ, ಮೂತ್ರಪಿಂಡದ ಸಮಸ್ಯೆ, ರಕ್ತ ಕಾಯಿಲೆ ಹಾಗೂ ಕ್ಯಾನ್ಸರ್ ಕಾಯಿಲೆಗಳ ಪ್ರಕರಣ ಇದುವರೆಗೂ ಕಂಡುಬAದಿಲ್ಲ.

ಒಟ್ಟು ೩೬,೬೬೬ ಮಕ್ಕಳ ತಪಾಸಣೆ

ಆಗಸ್ಟ್ ೧೮ ರಂದು ಆರೋಗ್ಯ ನಂದನ ಅನುಷ್ಠಾನ ಸಂಬAಧ ರಾಜ್ಯ ಸರಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕಳೆದ ಒಂದು ತಿಂಗಳಿನಿAದ ಮಕ್ಕಳನ್ನು ತಪಾಸಣೆಗೆ ಒಳಪಡಿಸುವ ಕಾರ್ಯ ಆರೋಗ್ಯ ಇಲಾಖೆಯಿಂದ ನಡೆಯುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರಗಳು ನಡೆಯುತ್ತಿವೆ.

ಮಡಿಕೇರಿ ತಾಲೂಕಿನ ೧೦,೭೧೩, ಸೋಮವಾರ ಪೇಟೆಯ ೧೩,೯೦೨ ಹಾಗೂ ವೀರಾಜಪೇಟೆಯ ೧೨,೦೫೧ ಮಕ್ಕಳನ್ನು ಸೇರಿ ಒಟ್ಟು ಜಿಲ್ಲೆಯ ೩೬,೬೬೬ ಮಕ್ಕಳನ್ನು ‘ಆರೋಗ್ಯ ನಂದನ’ ಕಾರ್ಯಕ್ರಮದಡಿ ಇದುವರೆಗೆ ತಪಾಸಣೆ ನಡೆಸಲಾಗಿದೆ. ಇದರಲ್ಲಿ ೦-೬ ವರ್ಷದ ೧೪,೩೭೫ ಮಕ್ಕಳು, ೧ ರಿಂದ ೮ ನೇ

(ಮೊದಲ ಪುಟದಿಂದ) ತರಗತಿಯ ೧೪,೫೪೭ ವಿದ್ಯಾರ್ಥಿಗಳು, ೯-೧೦ ತರಗತಿಯ ೫,೬೬೪ ವಿದ್ಯಾರ್ಥಿಗಳು ಹಾಗೂ ೧,೭೨೦ ಪಿ.ಯು ವಿದ್ಯಾರ್ಥಿಗಳು ಒಳಗೊಂಡಿದ್ದಾರೆ.

ಕೋವಿಡ್ ಪರೀಕ್ಷೆ- ಮಡಿಕೇರಿಯ ಇಬ್ಬರಿಗೆ ಪಾಸಿಟಿವ್

ಮಡಿಕೇರಿಯ ೨೨೫, ಸೋಮವಾರಪೇಟೆಯ ೨೮ ಹಾಗೂ ವೀರಾಜಪೇಟೆಯ ೩೬ ಮಂದಿ ಸೇರಿದಂತೆ ಒಟ್ಟು ೨೮೯ ಮಕ್ಕಳನ್ನು ಕೋವಿಡ್-೧೯ ಸಂಬAಧ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗೆ ಒಳಪಡಿಸಲಾಗಿದ್ದು, ಮಡಿಕೇರಿಯ ಇಬ್ಬರಲ್ಲಿ ಸೋಂಕು ದೃಢವಾಗಿದೆ. ೯-೧೦ನೇ ತರಗತಿಯ ವಿದ್ಯಾರ್ಥಿಗಳಲ್ಲಿಯೇ ಸೋಂಕು ದೃಢವಾಗಿದೆ.

- ಪ್ರಜ್ವಲ್ ಜಿ.ಆರ್.ಜಿಲ್ಲೆಯಾದ್ಯಂತ ಶಿಬಿರ ಯಶಸ್ವಿಗೊಳಿಸಲು ಆರ್.ಬಿ.ಎಸ್.ಕೆ. (ರಾಷ್ಟಿçÃಯ ಬಾಲ ಸ್ವಸ್ತಾ ಕಾರ್ಯಕ್ರಮ) ಅಡಿಯಲ್ಲಿ ವೈದ್ಯರು ಹಾಗೂ ಶುಶ್ರೂಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಠಿಕಾಂಶವುಳ್ಳ ಆಹಾರವನ್ನು ನೀಡಲಾಗುತ್ತದೆ. ತೀವ್ರ ಅಪೌಷ್ಠಿಕತೆ ಇದ್ದಲ್ಲಿ ಎನ್.ಆರ್.ಸಿ.(ನ್ಯೂಟ್ರಿಷಿಯನ್ ರೀಹೆಬಿಲಿಟೇಶನ್ ಸೆಂಟರ್)ನಲ್ಲಿ ೭ ರಿಂದ ೧೪ ದಿನಗಳ ಕಾಲ ದಾಖಲಿಸಿ ಸೂಕ್ತ ಚಿಕಿತ್ಸೆ ಹಾಗೂ ಪೌಷ್ಠಿಕಾಂಶ ಉಳ್ಳ ಆಹಾರ ನೀಡಲಾಗುತ್ತಿದೆ.

- ಡಾ. ವೆಂಕಟೇಶ್,

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಅಪೌಷ್ಠಿಕತೆಯುಳ್ಳ ಮಕ್ಕಳಿಗೆ ಪೌಷ್ಠಿಕಾಂಶ ಉಳ್ಳ ಆಹಾರ ಸರಬರಾಜು ಮಾಡುವುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜವಾಬ್ದಾರಿಯಾಗಿದ್ದು, ಪೌಷ್ಠಿಕಾಂಶ ಉಳ್ಳ ಆಹಾರವನ್ನು ಮಕ್ಕಳ ಪೋಷಕರು ಅಂಗನವಾಡಿ ಕೇಂದ್ರಗಳಿAದ ಪಡೆದುಕೊಂಡು ಹೋಗುತ್ತಾರೆ. ಸುಮಾರು ಒಂದು ತಿಂಗಳಿಗಾಗುವಷ್ಟು ಆಹಾರವನ್ನು ಪಡೆದುಕೊಳ್ಳುತ್ತಾರೆ. ಇದಲ್ಲದೆ ಅಪೌಷ್ಠಿಕ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ರೂ. ೨,೦೦೦ ಬೆಲೆಬಾಳುವ ಔಷಧಿಗಳನ್ನೂ ನೀಡಲಾಗುತ್ತಿದೆ.

-ಸಿ.ವಿ ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯಿಂದ ಪೌಷ್ಟಿಕಾಂಶ ಪೂರೈಕೆ

೬ ತಿಂಗಳಿನಿAದ ೩ ವರ್ಷದವರೆಗಿನ ತೀವ್ರ ಅಪೌಷ್ಠಿಕ ಮಕ್ಕಳಿಗೆ ದಿನಕ್ಕೆ ರೂ.೧೨ ರಂತೆ ತಿಂಗಳಿಗೆ ರೂ.೩೦೦ ರಷ್ಟು ಮೊತ್ತದ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತದೆ. ಇದರಲ್ಲಿ ೩ ಕೆ.ಜಿ. ಪುಷ್ಠಿ, ೭೦೦ ಗ್ರಾಂ ಹೆಸರು ಬೇಳೆ, ೫೫೦ ಗ್ರಾಂ ಶೇಂಗಾ ಬೀಜ ವಿತರಣೆಯಾಗುತ್ತದೆ. ಕ್ಷೀರಭಾಗ್ಯ ಯೋಜನೆಯಡಿ ೩೦೦ ಗ್ರಾಂ ಹಾಲಿನ ಪುಡಿ, ೨೦೦ ಗ್ರಾಂ ಸಕ್ಕರೆ ಹಾಗೂ ತೀವ್ರ ಅಪೌಷ್ಠಿಕ ಮಕ್ಕಳ ಯೋಜನೆಯಡಿ ೨೪೦ ಗ್ರಾಂ ಹಾಲಿನ ಪುಡಿ ಹಾಗೂ ೧೨ ಮೊಟ್ಟೆಗಳ ಸರಬರಾಜಾಗುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿದೇರ್ಶಕ ಸಿ.ವಿ ಸುರೇಶ್ ಅವರು ಮಾಹಿತಿ ನೀಡಿದ್ದಾರೆ.