ನಾಪೋಕ್ಲು, ಸೆ. ೨೧: ಕೊಡಗಿನ ಆಧಿಕವಿ, ಶ್ರೇಷ್ಠ ಕವಿ ಎಂದು ಖ್ಯಾತಿ ಪಡೆದಿರುವ ಕೊಡವ ಸಾಹಿತ್ಯಾಭಿವೃದ್ಧಿಗೆ ಶ್ರಮಿಸಿದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ ಐನ್ಮನೆಯನ್ನು ಸ್ಮಾರಕವನ್ನಾಗಿಸುವದರೊಂದಿಗೆ ಆ ಗ್ರಾಮವನ್ನು ಅಭಿವೃದ್ಧಿಪಡಿಸಬೇಕು ಎಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಸರಕಾರವನ್ನು ಒತ್ತಾಯಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ನಾಪೋಕ್ಲು ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಕೊಡವ ಸಮಾಜದ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಪ್ಪಚ್ಚ ಕವಿಯ ೧೫೩ನೇ ಹುಟ್ಟುಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರ ಸಾಹಿತಿ, ಕವಿಗಳು ಹುಟ್ಟಿ ಬೆಳೆದ ಮನೆ, ಅಪ್ಪಚ್ಚ ಕವಿಯ ೧೫೩ನೇ ಹುಟ್ಟುಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರ ಸಾಹಿತಿ, ಕವಿಗಳು ಹುಟ್ಟಿ ಬೆಳೆದ ಮನೆ, ಅದೇ ರೀತಿ ಅಪ್ಪಚ್ಚ ಕವಿಯ ಸಾಧನೆ ಯನ್ನು ಹೊರ ಜಗತ್ತಿಗೆ, ಯುವ ಪೀಳಿಗೆಗೆ ಪರಿಚಯಿಸುವ ಕೆಲಸವಾಗ ಬೇಕಿದೆ ಎಂದರು.
(ಮೊದಲ ಪುಟದಿಂದ) ಅಪ್ಪಚ್ಚ ಕವಿ ತನ್ನ ಕಿರಿ ವಯಸ್ಸಿನಲ್ಲಿಯೇ ಸಂಸ್ಕೃತ ಸೇರಿದಂತೆ ಕನ್ನಡ ಭಾಷೆಯಲ್ಲಿ ಅತ್ಯಂತ ಪಾಂಡಿತ್ಯವನ್ನು ಹೊಂದಿದ್ದರು. ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದ ಅಪ್ಪಚ್ಚ ಅವರಿಗೆ ರಘುನಾಥ ರಾಯ ಎಂಬ ಶಿಕ್ಷಣಾಧಿಕಾರಿ ಕೊಡವ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡುವಂತೆ ಸಲಹೆ ನೀಡಿದ ಪರಿಣಾಮ ಕೊಡವ ಭಾಷೆಯ ಸಾಹಿತ್ಯ ಇಂದು ಪ್ರಪಂಚದೆಲ್ಲೆಡೆ ಪರಿಚಯವಾಗಲು ಸಾಧ್ಯವಾಯಿತು ಎಂದರು.
ಅಪ್ಪಚ್ಚ ಕವಿಯ ಬಗ್ಗೆ ವಿಚಾರ ಮಂಡನೆ ಮಾಡಿದ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬೆಳಿಗ್ಗೆದ್ದು ನೆನೆಸಿಕೊಳ್ಳುವಂತಹ ಪ್ರಾತಃ ಸ್ಮರಣೀಯ ವ್ಯಕ್ತಿ ಅಪ್ಪಚ್ಚಕವಿ. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ, ಶ್ರಮ, ಕಷ್ಟ, ನಷ್ಟ ಯುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಅದಕ್ಕಾಗಿ ಅವರ ಐನ್ಮನೆ ಮತ್ತು ಅವರ ಗ್ರಾಮವನ್ನು ಸರಕಾರ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಬೇಕು. ಹಾಗೆಯೇ ಅವರಿಗೆ ಕರ್ನಾಟಕ ರತ್ನ ಬಿರುದು ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಅಪ್ಪನೆರವಂಡ ಐನ್ಮನೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಪ್ಪನೆರವಂಡ ಚುಮ್ಮಿ ದೇವಯ್ಯ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಅಪ್ಪನೆರವಂಡ ರಾಮು, ಡಾ. ಮನೋಜ್ ಇದ್ದರು.
ಕಾರ್ಯಕ್ರಮದ ಅಂಗವಾಗಿ ಬೇತು ಗ್ರಾಮದ ಮಹಿಳಾ ಉಮ್ಮತಾಟ್ ತಂಡದಿAದ ಉಮ್ಮತಾಟ್, ಚೆಕ್ಕೆರ ಪಂಚಮ್ ತ್ಯಾಗರಾಜ್ ತಂಡದಿAದ ಸಂಗೀತ ಕಾರ್ಯಕ್ರಮ ನಡೆಯಿತು. ಜಾನಪದ ತಜ್ಞ ಬೊಟ್ಟೋಳಂಡ ಕಾಶಿ ಅಚ್ಚಯ್ಯ ಅಪ್ಪಚ್ಚಕವಿ ರಚಿಸಿದ ಹಾಡು ಹಾಡುವದರ ಮೂಲಕ ಎಲ್ಲರನ್ನೂ ರಂಜಿಸಿದರು. ಬಟ್ಟೀರ ಡಯಾನ ಸಂಜೂ ಪ್ರಾರ್ಥನೆ. ಅಕಾಡೆಮಿ ರಿಜಾಸ್ಟಾçರ್ ಅಜ್ಜಿಕುಟ್ಟಿರ ಗಿರೀಶ್ ಸ್ವಾಗತ, ಅಕಾಡೆಮಿ ಸಂಚಾಲಕ ತೇಲಪಂಡ ಕವನ್ ಕಾರ್ಯಪ್ಪ ಮತ್ತು ಬಾಳೆಯಡ ದಿವ್ಯಾ ಮಂದಪ್ಪ ನಿರೂಪಿಸಿ, ನಾಪೋಕ್ಲು ಕೊಡವ ಸಮಾಜದ ಗೌರವ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ವಂದಿಸಿದರು.(ಮೊದಲ ಪುಟದಿಂದ) ಅಪ್ಪಚ್ಚ ಕವಿ ತನ್ನ ಕಿರಿ ವಯಸ್ಸಿನಲ್ಲಿಯೇ ಸಂಸ್ಕೃತ ಸೇರಿದಂತೆ ಕನ್ನಡ ಭಾಷೆಯಲ್ಲಿ ಅತ್ಯಂತ ಪಾಂಡಿತ್ಯವನ್ನು ಹೊಂದಿದ್ದರು. ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದ ಅಪ್ಪಚ್ಚ ಅವರಿಗೆ ರಘುನಾಥ ರಾಯ ಎಂಬ ಶಿಕ್ಷಣಾಧಿಕಾರಿ ಕೊಡವ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡುವಂತೆ ಸಲಹೆ ನೀಡಿದ ಪರಿಣಾಮ ಕೊಡವ ಭಾಷೆಯ ಸಾಹಿತ್ಯ ಇಂದು ಪ್ರಪಂಚದೆಲ್ಲೆಡೆ ಪರಿಚಯವಾಗಲು ಸಾಧ್ಯವಾಯಿತು ಎಂದರು.
ಅಪ್ಪಚ್ಚ ಕವಿಯ ಬಗ್ಗೆ ವಿಚಾರ ಮಂಡನೆ ಮಾಡಿದ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬೆಳಿಗ್ಗೆದ್ದು ನೆನೆಸಿಕೊಳ್ಳುವಂತಹ ಪ್ರಾತಃ ಸ್ಮರಣೀಯ ವ್ಯಕ್ತಿ ಅಪ್ಪಚ್ಚಕವಿ. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ, ಶ್ರಮ, ಕಷ್ಟ, ನಷ್ಟ ಯುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಅದಕ್ಕಾಗಿ ಅವರ ಐನ್ಮನೆ ಮತ್ತು ಅವರ ಗ್ರಾಮವನ್ನು ಸರಕಾರ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಬೇಕು. ಹಾಗೆಯೇ ಅವರಿಗೆ ಕರ್ನಾಟಕ ರತ್ನ ಬಿರುದು ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಅಪ್ಪನೆರವಂಡ ಐನ್ಮನೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಪ್ಪನೆರವಂಡ ಚುಮ್ಮಿ ದೇವಯ್ಯ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಅಪ್ಪನೆರವಂಡ ರಾಮು, ಡಾ. ಮನೋಜ್ ಇದ್ದರು.
ಕಾರ್ಯಕ್ರಮದ ಅಂಗವಾಗಿ ಬೇತು ಗ್ರಾಮದ ಮಹಿಳಾ ಉಮ್ಮತಾಟ್ ತಂಡದಿAದ ಉಮ್ಮತಾಟ್, ಚೆಕ್ಕೆರ ಪಂಚಮ್ ತ್ಯಾಗರಾಜ್ ತಂಡದಿAದ ಸಂಗೀತ ಕಾರ್ಯಕ್ರಮ ನಡೆಯಿತು. ಜಾನಪದ ತಜ್ಞ ಬೊಟ್ಟೋಳಂಡ ಕಾಶಿ ಅಚ್ಚಯ್ಯ ಅಪ್ಪಚ್ಚಕವಿ ರಚಿಸಿದ ಹಾಡು ಹಾಡುವದರ ಮೂಲಕ ಎಲ್ಲರನ್ನೂ ರಂಜಿಸಿದರು. ಬಟ್ಟೀರ ಡಯಾನ ಸಂಜೂ ಪ್ರಾರ್ಥನೆ. ಅಕಾಡೆಮಿ ರಿಜಾಸ್ಟಾçರ್ ಅಜ್ಜಿಕುಟ್ಟಿರ ಗಿರೀಶ್ ಸ್ವಾಗತ, ಅಕಾಡೆಮಿ ಸಂಚಾಲಕ ತೇಲಪಂಡ ಕವನ್ ಕಾರ್ಯಪ್ಪ ಮತ್ತು ಬಾಳೆಯಡ ದಿವ್ಯಾ ಮಂದಪ್ಪ ನಿರೂಪಿಸಿ, ನಾಪೋಕ್ಲು ಕೊಡವ ಸಮಾಜದ ಗೌರವ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ವಂದಿಸಿದರು.