ಶನಿವಾರಸAತೆ, ಸೆ. ೨೨: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಾಲಪುರ ಅಂಗಡಿಯ ಮಾಲೀಕ ಸರಕಾರದ ಯಾವುದೇ ರಹದಾರಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಲ್ಲದೆ, ಮದ್ಯ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್. ಪರಶಿವ ಮೂರ್ತಿ ಅವರಿಗೆ ದೊರೆತ ಖಚಿತ ವರ್ತಮಾನದ ಮೇರೆ ಅವರ ಮಾರ್ಗದರ್ಶನದ ಮೇಲೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಹೆಚ್.ಡಿ. ಯತೀಶ್ನನ್ನು ಬಂಧಿಸಿದ್ದಾರೆ.
ಶನಿವಾರಸAತೆ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಜಯಕುಮಾರ್, ಶಶಿಧರ್, ಸಿಬ್ಬಂದಿಗಳಾದ ಪ್ರದೀಪ್ಕುಮಾರ್, ಲೋಕೇಶ್, ಚಾಲಕ ಕುಮಾರ್ ದಾಳಿಯಲ್ಲಿ ಪಾಲ್ಗೊಂಡಿದ್ದರು.