ಮಡಿಕೇರಿ, ಸೆ. ೨೦ : ಕುಶಾಲನಗರದ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯ ನೃತ್ಯ ನಿರ್ದೇಶಕಿ ಏಂಜಲ್ ರಶ್ಮಿ ಡಿಸೋಜ ಅವರು ರಾಷ್ಟಿçÃಯ ನಾಟ್ಯ ಕಲಾ ಮಯೂರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಸಿ. ಮುನಿಸ್ವಾಮಿ ಚಾರಿಟೇಬಲ್ ಫೌಂಡೇಶನ್ ಕುಂಬರಳ್ಳಿ ಸಹಯೋಗದಲ್ಲಿ ಓಂ ಶ್ರೀ ಸಾಯಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಆಯೋಜಿಸಿದ್ದ ರಾಷ್ಟಿçÃಯ ಅಖಿಲ ಭಾರತ ನೃತ್ಯೋತ್ಸವದಲ್ಲಿ ಪಾಲ್ಗೊಂಡ ಅವರು ಉತ್ತಮ ನೃತ್ಯ ನಿರ್ದೇಶಕಿ ಪ್ರಶಂಸೆಯೊAದಿಗೆ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.
ಏAಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡಾನ್ಸ್ ಸಂಸ್ಥೆಯ ವಿದ್ಯಾರ್ಥಿಗಳಾದ ಚೈತನ್ಯ ಡಿ, ವಿದ್ಯಾ ಜಿ.ಡಿ, ಸುಪ್ರೀತಾ ಟಿ.ಡಿ, ದೇವಿಕಾ ಎಂ.ಆರ್, ಲಕ್ಷಿö್ಮÃಶ್ರೀ ವಿ. ಹಾಗೂ ಖುಷಿ ಡಿ.ಕೆ. ನೃತ್ಯೋತ್ಸವದಲ್ಲಿ ಅತ್ಯುತ್ತಮ ನೃತ್ಯ ಪ್ರದರ್ಶನ ನೀಡಿ ರಾಷ್ಟಿçÃಯ ನಾಟ್ಯ ಕಲಾ ಸಿಂಚನ ಎಂಬ ಬಿರುದು ಪಡೆದರು.
ನೃತ್ಯ ನಿರ್ದೇಶಕ ಅರ್ಪಿತ್ ಅನೂಪ್ ಡಿಸೋಜ ಅವರು ವೈವಿಧ್ಯಮಯ ನೃತ್ಯ ನಿರ್ದೇಶಕ ಬಿರುದು ಗಳಿಸಿದರು.