ಚೆಯ್ಯಂಡಾಣೆ, ಸೆ. ೨೦: ಎಸ್ಎಸ್ಎಫ್ ಧ್ವಜದಿನಾಚರಣೆ ಕಾರ್ಯಕ್ರಮವನ್ನು ಎಮ್ಮೆಮಾಡು ಸೆಂಟರ್ ಶಾಖೆ ವತಿಯಿಂದ ಎಮ್ಮೆಮಾಡಿನ ಆಸ್ಥಾನ ಮಂದಿರದಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸೆಕ್ಟರ್ ಮಾಜಿ ನೇತಾರ ಸೈಯದ್ ಸೈಫುದ್ದೀನ್ ಸಖಾಫಿ ಮತ್ತು ಎಸ್ಎಸ್ಎಫ್ ಜಿಲ್ಲಾ ಮಾಜಿ ಕಾರ್ಯದರ್ಶಿ ಅಶ್ರಫ್ ಬಲಿಯತ್ ಧ್ವಜಾರೋಹಣ ಮಾಡಿದರು. ಸೈಯ್ಯದ್ ಸೈಫುದ್ದೀನ್ ತಂಙಳ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಎಮ್ಮೆಮಾಡು ಶಾಖಾಧ್ಯಕ್ಷ ಹಾರಿಸ್ ಉಸ್ತಾದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್ವೈಎಸ್ ಶಾಖಾ ಕಾರ್ಯದರ್ಶಿ ಮುಜೀಬ್ ಮಾತನಾಡಿದರು. ಎಸ್ವೈಎಸ್ನ ಸದಸ್ಯ ಅಬ್ದುಲ್ಲ ಸಖಾಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಎಮ್ಮೆಮಾಡು ಜಮಾ ಅತ್ನ ಸದಸ್ಯರಾದ ಪುದಿಯಾರೆ ಅಬ್ದುಲ್ ಖಾದರ್ ಪಾಲ್ಗೊಂಡಿದ್ದರು. ಸ್ಥಳೀಯ ಎಸ್ ವೈಎಸ್ನ ನೇತಾರರು ಮತ್ತು ಎಸ್ಎಸ್ಎಫ್ನ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಜಾಷಂ ಮುಸ್ಲಿಯಾರ್ ಸ್ವಾಗತಿಸಿದರು.
ಚೆಯ್ಯಂಡಾಣೆ: ಎಸ್ಎಸ್ಎಫ್ ಸಾದಾತ್ ನಗರ ಶಾಖೆಯ ವತಿಯಿಂದ ಎಸ್ಎಸ್ಎಫ್ ಧ್ವಜ ದಿನಾಚರಣೆ ಆಚರಿಸಲಾಯಿತು. ಅಬೂತ್ವಾಹಿರ್ ಅನ್ವಾರಿ ಅಹ್ಸನಿ ಅಧ್ಯಕ್ಷತೆ ವಹಿಸಿದ್ದರು. ಸೈಯ್ಯದ್ ಸಮೀಹ್ ಅನ್ವಾರಿ ಅಹ್ಸನಿ ಧ್ವಜಾರೋಹಣ ಹಾಗೂ ಸಂದೇಶ ಭಾಷಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಾದಾತ್ ನಗರ ಮಸ್ಜಿದ್ ಇಮಾಮ್ ಅಬ್ದುಲ್ ರಶೀದ್ ಝೈನಿ ದುಆ ನೆರವೇರಿಸಿದರು. ವಿಷನ್ ಸದಸ್ಯರಾದ ಇಸ್ಮಾಯಿಲ್, ಶಾಖಾ ಕೋಶಾಧಿಕಾರಿ ಅಬ್ದುಲ್ ರಹೂಫ್ ಮಹಮದ್ ಶಾಫಿ ಹಾಗೂ ಕಾರ್ಯಕರ್ತರು ಹಾಜರಿದ್ದರು.