ಮಡಿಕೇರಿ, ಸೆ. ೨೧: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಡೆಕೋಲು ಹಾಗೂ ಮೈಸೂರಿನಲ್ಲಿ ಅರೆಭಾಷೆ ಸಂಸ್ಕೃತಿ ಶಿಬಿರ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಂಡೆಕೋಲು ಗ್ರಾಮ ಗೌಡ ಸಮಿತಿ ವತಿಯಿಂದ ತಾ.೨೩ ರಂದು ಮಂಡೆಕೋಲಿನ ಅಮೃತ ಸಹಕಾರ ಸದನದಲ್ಲಿ ಉದ್ಘಾಟನೆಯಾಗಲಿದ್ದು, ತಾ. ೨೫ ರಂದು ಸಮಾರೋಪ ಸಮಾರಂಭ ನಡೆಯಲಿದೆ. ತಾ. ೨೪ ರಂದು ಮೈಸೂರು ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಕೊಡಗು ಗೌಡ ಸಮಾಜ ಮೈಸೂರು ಸಹಯೋಗದಲ್ಲಿ ಶಿಬಿರ ನಡೆಯಲಿದ್ದು, ತಾ. ೨೬ ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃ ನಾರಾಯಣ ಕಜೆಗದ್ದೆ ಮಾಹಿತಿ ನೀಡಿದ್ದಾರೆ.