ಮಡಿಕೇರಿ, ಸೆ. ೨೦: ನಗರದ ಕಾವೇರಿ ಹಿಯರಿಂಗ್ ಕ್ಲೀನಿಕ್ ಮತ್ತು ಇನ್ನರ್‌ವೀಲ್ ಕ್ಲಬ್ ಸಹಯೋಗದೊಂದಿಗೆ ಅಮೃತ ಇಎನ್‌ಟಿ ಮತ್ತು ವರ್ಜಿಗೊ ಕ್ಲಿನಿಕ್‌ನಿಂದ ತಾ. ೨೪ ರಂದು ಎಲ್ಲಾ ವಯಸ್ಸಿನವರಿಗೆ ಕಾಫಿ ಕೃಪಾ ಕಟ್ಟಡ ಅಮೃತ ಇಎನ್‌ಟಿ ಮತ್ತು ವರ್ಟಿಗೋ ಕ್ಲೀನಿಕ್ ಸಮೀಪ ಉಚಿತ ಶ್ರವಣ ಪರೀಕ್ಷೆ ಏರ್ಪಡಿಸಲಾಗಿದೆ ಎಂದು ಡಾ. ಮೋಹನ್ ಅಪ್ಪಾಜಿ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ವಿಶ್ವ ಕಿವುಡುತನ ದಿನಾಚರಣೆ ಪ್ರಯುಕ್ತ ಉಚಿತ ಶ್ರವಣ ಪರೀಕ್ಷಾ ಶಿಬಿರ ನಡೆಯಲಿದ್ದು, ಇದರೊಂದಿಗೆ ೪೦ ವರ್ಷ ಮೇಲ್ಪಟ್ಟವರಿಗೆ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆಯನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ ೯ ಗಂಟೆಗೆ ಶಿಬಿರ ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ ೨ ಗಂಟೆವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ೮೭೯೨೮೭೪೦೩೦ ಹಾಗೂ ೦೮೨೭೨-೨೨೧೪೬೦ ದೂರವಾಣಿಯನ್ನು ಸಂಪರ್ಕಿಸಬಹುದೆAದು ಅವರು ತಿಳಿಸಿದರು.
ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶಫಾಲಿ ರೈ ಮಾತನಾಡಿ, ಪ್ರತಿಬಾರಿಯಂತೆ ಈ ಬಾರಿಯೂ ಶಿಬಿರಕ್ಕೆ ಇನ್ನರ್‌ವೀಲ್ ಕ್ಲಬ್ ಕೈಜೋಡಿಸುತ್ತಿದ್ದು, ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಶ್ರವಣ ದೋಷ ತಜ್ಞ ಕಾವೇರಿ ಹಿಯರಿಂಗ್ ಕ್ಲೀನಿಕ್‌ನ ಎಂ.ಎ. ಅಚ್ಚಯ್ಯ ಮಾತನಾಡಿ, ಶ್ರವಣದೋಷವನ್ನು ಆರಂಭದಲ್ಲೇ ಚಿಕಿತ್ಸೆ ಪಡೆದರೆ ಸರಿಪಡಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಶಿಬಿರವನ್ನು ಏರ್ಪಡಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಇನ್ನರ್‌ವೀಲ್ ಕ್ಲಬ್ ಕಾರ್ಯದರ್ಶಿ ಶಮ್ಮಿಪ್ರಭು ಉಪಸ್ಥಿತರಿದ್ದರು.