ಮಡಿಕೇರಿ, ಸೆ. ೧೯: ಸಾಮಾಜಿಕ ಜಾಲತಾಣದಲ್ಲಿ ನಗರಸಭೆ ಹಾಗೂ ಪೌರಾಯುಕ್ತ ವಿರುದ್ಧ ಸುಳ್ಳು ಸಂದೇಶ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.
ತಾ. ೧೭ ರಂದು ಅಪರಿಚಿತ ವ್ಯಕ್ತಿ ನಗರಸಭೆ ಮತ್ತು ಪೌರಾಯುಕ್ತರ ಹೆಸರಿಗೆ ಅಗೌರವ, ತೇಜೋವಧೆ ತರಲು ಬೇತಾಳ ಎಂಬ ಅನಾಮದೇಯದ ಶೀರ್ಷಿಕೆ ಯೊಂದಿಗೆ ಕಥೆ ಸೃಷ್ಟಿಸಿ ನಗರದ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯಗೊಳಿಸಲು ಸುಳ್ಳು ಸಂದೇಶವನ್ನು ಹರಿಬಿಟ್ಟಿದ್ದಾರೆ ಎಂದು ರಾಮದಾಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.