ಮಡಿಕೇರಿ, ಸೆ.೨೦: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ರಾಜ್ಯ ಹೆದ್ದಾರಿ-೯೧ ಕೊಣನೂರು-ಮಾಕುಟ್ಟ ರಸ್ತೆಯ ಗುಡ್ಡೆಹೊಸೂರಿನಿಂದ ಕಬ್ಬಿನಗದ್ದೆವರೆಗಿನ ೨೭.೪೦ ಕಿ.ಮೀ. ರಿಂದ ೩೮.೦೦ ಕಿ.ಮೀ. ರವರೆಗೆ ಆಯ್ದ ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯಲಿದೆ. ಈ ನಿಟ್ಟಿನಲ್ಲಿ ಪ್ರಯಾಣಿಕರ ಮತ್ತು ಸಾರ್ವಜನಿಕರ ಸಂಚಾರದ ಹಿತದೃಷ್ಟಿಯಿಂದ ಗುಡ್ಡೆಹೊಸೂರಿನಿಂದ ಕಬ್ಬಿನಗದ್ದೆವರೆಗಿನ ರಸ್ತೆಯಲ್ಲಿ ತಾ. ೨೨ ರಿಂದ ನವೆಂಬರ್ ೨ ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶಿಸಿದ್ದಾರೆ.
ಸಾರ್ವಜನಿಕರು ಬದಲಿ ರಸ್ತೆಯಾದ ಕುಶಾಲನಗರ-ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆ, ರಂಗಸಮುದ್ರ ಮಾರ್ಗವಾಗಿ ಅಥವಾ ಕುಶಾಲನಗರ-ಸುಂಟಿಕೊಪ್ಪ, ಚೆಟ್ಟಳ್ಳಿ, ಒಂಟಿಯAಗಡಿ ಮಾರ್ಗವನ್ನು ಬಳಸಬೇಕಾಗಿ ಸೂಚಿಸಲಾಗಿದೆ.