ಕುಶಾಲನಗರ, ಸೆ. ೧೮: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೭೧ನೇ ಹುಟ್ಟುಹಬ್ಬದ ಅಂಗವಾಗಿ ಕುಶಾಲನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಸೋಮವಾರಪೇಟೆ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಕಾರ್ಯಕರ್ತರ ಪೌರ ಕಾರ್ಮಿಕರಿಗೆ ಸಿಹಿ ವಿತರಣೆ ಮಾಡಿ ಅವರೊಂದಿಗೆ ಸಹಭೋಜನ ನಡೆಸಿದರು.

ಈ ಸಂದರ್ಭ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಮ್ಮ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಸೀಫ್, ಮಣಿ, ಹರಿಣಿ ಮತ್ತು ಪೌರ ಕಾರ್ಮಿಕರು ಇದ್ದರು.

ಕುಶಾಲನಗರ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಈ ಸಂದರ್ಭ ಬಿಜೆಪಿ ಪ್ರಮುಖರಾದ ಕೆ.ಜಿ. ಮನು, ಎಂ.ಡಿ. ಕೃಷ್ಣಪ್ಪ ಪುಂಡರಿಕಾಕ್ಷ ಅಮೃತ್‌ರಾಜ್, ವೈಶಾಖ್, ಇಂದಿರಾ ರಮೇಶ್, ಬೋಸ್ ಮೊಣ್ಣಪ್ಪ ನಾರಾಯಣ, ಪ್ರವೀಣ್ ಮತ್ತಿತರರಿದ್ದರು.ನಾಪೋಕ್ಲು : ಪ್ರಧಾನಿ ನರೇಂದ್ರ ಮೋದಿಯವರ ೭೧ ಹುಟ್ಟು ಹಬ್ಬದ ಅಂಗವಾಗಿ ಬಿ,ಜೆ..ಪಿ. ಕಾರ್ಯಕರ್ತರು ನಾಪೋಕ್ಲು ಸಮುದಾಯ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಹುಟ್ಟು ಹಬ್ಬವನ್ನು ಆಚರಿಸಿದರು.

ಈ ಸಂದರ್ಭ ರಾಜ್ಯ ಬಿ.ಜೆ.ಪಿ. ಕಾರ್ಯಕಾರಿಣಿ ಸದಸ್ಯ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಕಾಂಗೀರ ಸತೀಶ್, ತಾಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆ ಬಡುವಡ್ರ ಕವಿತಾ, ತಾಲೂಕು ರೈತ ಮೋರ್ಚಾದ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮುರುಳಿಧರ್ ಕರುಂಬಮ್ಮಯ್ಯ, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಉಮಾಪ್ರಭು, ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಕೋಡಿ ಪ್ರಸÀನ್ನ, ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್. ನಾಪೋಕ್ಲು ನೆಲಜಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಚಿಯಕಪೂವಂಡ ಅಪ್ಪಚ್ಚು, ತಾಲೂಕು ಶಕ್ತಿ ಕೇಂದ್ರದ ಉಪಾಧ್ಯಕ್ಷ ಕೆಲೇಟಿರ ದೀಪು ದೇವಯ್ಯ, ಶಿವಚಾಳಿಯಂಡ ಕಿಶೋರ್, ಚಿಯಕಪೂವಂಡ ಸತೀಶ್ ದೇವಯ್ಯ, , ಬಿ.ಎಂ. ಪ್ರತೀಪ್, ಕಂಗಾAಡ ಜಾಲಿ ಪೂವಪ್ಪ, ಮತ್ತಿತರರು ಇದ್ದರು.ವೀರಾಜಪೇಟೆ : ಒಬಿಸಿ ಮೋರ್ಚಾ ಜಿಲ್ಲಾ ಮತ್ತು ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೭೧ನೇ ಹುಟ್ಟುಹಬ್ಬದ ಪ್ರಯುಕ್ತ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ಭಾರತೀಯ ಜನತಾ ಪಕ್ಷದ ನಗರಾಧ್ಯಕ್ಷ ಟಿ.ಪಿ. ಕೃಷ್ಣ ಇಡೀ ಪ್ರಪಂಚ ಭಾರತದ ಕಡೆ ಮೆಚ್ಚುಗೆಯಿಂದ ನೋಡುವಂತೆ ಮಾಡಿದವರು ಪ್ರಧಾನಿ ನರೇಂದ್ರ ಮೋದಿಯವರು, ಕೋವಿಡ್‌ನಂತಹ ವಿಷಮ ಪರಿಸ್ಥಿತಿಯಲ್ಲಿಯೂ ಆರ್ಥಿಕ ಹಿಂಜರಿತವಿದ್ದರೂ ವಿಶ್ವ ಆರೋಗ್ಯ ಸಂಸ್ಥೆ ನರೇಂದ್ರ ಮೋದಿಯವರನ್ನು ರಾಯಭಾರಿಯನ್ನಾಗಿ ಮಾಡಿರುವುದು ದೇಶಕ್ಕೆ ಹೆಮ್ಮೆ ಎಂದರು.

ಹಿAದುಳಿದ ವರ್ಗಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಗಣೇಶ್ ಮಾತನಾಡಿ ನಮ್ಮ ದೇಶ ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ವಿವಿಧ ರಂಗಗಳಲ್ಲಿ ಆಗಬಹುದಾಗಿದ್ದ ತೊಂದರೆಗಳನ್ನು ತಡೆಗಟ್ಟಲು ಪ್ರಧಾನಿಯವರು ಸಾಕಷ್ಟು ಶ್ರಮಿಸಿದ್ದಾರೆ ಎಂದರು.

ಈ ಸಂದರ್ಭ ಒಬಿಸಿ ಮೋರ್ಚಾದ ತಾಲೂಕು ಉಪಾಧ್ಯಕ್ಷ ಚಂದ್ರ, ಒಬಿಸಿ ಮೋರ್ಚಾದ ನಗರದ ಅಧ್ಯಕ್ಷ ಸುರೇಶ್, ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬೊಪ್ಪಂಡ ಸುನೀತಾ ಜೂನಾ, ಬಿಜೆಪಿ ತಾಲೂಕು ಸದಸ್ಯ ಅಂಜಪರವAಡ ಅನಿಲ್ ಮಂದಣ್ಣ ಹಾಗೂ ಬಿ.ಜಿ. ಸಾಯಿನಾಥ್ ನಾಯಕ್, ತಾಲೂಕು ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನವೀನ್, ಒಬಿಸಿ ಮೋರ್ಚಾದ ತಾಲೂಕು ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.