ಸಿದ್ದಾಪುರ, ಸೆ. ೧೯: ತಿತಿಮತಿ ದೇವಮಚ್ಚಿ ರಕ್ಷಿತ ಅರಣ್ಯ ವಲಯ ಅಂಚಿನಲ್ಲಿರುವ ಬಾಡಗ ಬಾಣಂಗಾಲ ಹುಂಡಿ ಗ್ರಾಮದ ಮುಂತಾದೆಡೆಗಳಲ್ಲಿ ನಿರಂತರ ಕಾಡಾನೆಗಳು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಬೆಳೆಗಾರರಿಗೆ ಯಾವುದೇ ಮಾಹಿತಿ ನೀಡದೇ ದಿಢೀರ್ ಕಾರ್ಯಾಚರಣೆಗೆ ಮುಂದಾಗಿ ಇದೀಗ ಕಟಾವಿಗೆ ಬಂದ ಫಸಲು ಮಣ್ಣು ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ವೀರಾಜಪೇಟೆ ತಾಲೂಕು ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಕಾಫಿ ಬೆಳೆಗಾರರು ಪಿ.ಎನ್. ಚಂಗಪ್ಪ ರವರು ಮಾತನಾಡಿ ಕಾಫಿ ಬೆಳೆಗಾರರು ಸೇರಿದಂತೆ ಕಾರ್ಮಿಕರು ಸತತ ಹಲವು ವರ್ಷಗಳಿಂದ ಕಾಡಾನೆಗಳ ಉಪಟಳವನ್ನು ಅನುಭವಿಸಿಕೊಂಡು ನಷ್ಟವನ್ನು ಅನುಭವಿಸಿದ್ದಾರೆ. ಅರಣ್ಯದಂಚಿನಿAದ ಕಾಡಾನೆಗಳು ಕಾಫಿ ತೋಟಗಳಿಗೆ ಲಗ್ಗೆಯಿಟ್ಟು ಫಸಲು ನೀಡುವಂತಹ ೩೫-೪೦ ವರ್ಷ ಪ್ರಾಯದ ಗಿಡಗಳನ್ನು ಧ್ವಂಸ ಮಾಡಿ ಫಸಲು ನಾಶವಾಗಿದೆ. ಇಲಾಖೆಯು ಕಾಫಿ ತೋಟದಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡನ್ನು ಕಾಡಿಗಟ್ಟುವ ಕಾರ್ಯಾಚರಣೆ ಸತತವಾಗಿ ಮಾಡಿಕೊಂಡು ಬಂದಿದೆ. ಆದರೆ ಬೀಡುಬಿಟ್ಟಿರುವ ಕಾಡಾನೆಗಳನ್ನು ಪಟಾಕಿ ಸಿಡಿಸಿ ದಿಢೀರನೆ ಕಾರ್ಯಾಚರಣೆ ನಡೆಸುತ್ತಿರುವುದು ಅವೈಜ್ಞಾನಿಕವಾಗಿದೆ ಎಂದರು. ಅಲ್ಲದೇ ಬೀಡುಬಿಟ್ಟ ಸ್ಥಳವನ್ನು ಹೊರತುಪಡಿಸಿ ಸನಿಹದ ತೋಟದ ಮಾಲೀಕರುಗಳಿಗೆ ಮಾಹಿತಿ ನೀಡದಿರುವುದು ವಿಪರ್ಯಾಸ. ಇದೀಗ ಕಾಡಾನೆಗಳನ್ನು ಕಾಡಿಗಟ್ಟಲು ದಿಢೀರ್ ಕಾರ್ಯಾಚರಣೆ ನಡೆಸುವುದರಿಂದ ಕಾಡಾನೆಗಳು ರೋಷಗೊಂಡು ಫಲವತ್ತಾದ ಕಾಫಿ ಗಿಡಗಳನ್ನು ಮನಬಂದAತೆ ಧ್ವಂಸಗೊಳಿಸಿದೆ. ಕಾಫಿ ಬೆಳೆಗಾರರು ಕಾಡಾನೆ ಉಪಟಳ ಮತ್ತು ಇಲಾಖೆಯ ಕಾರ್ಯಾಚರಣೆ ಯಿಂದಾಗಿ ಕಂಗಲಾಗಿದ್ದಾರೆ ಎಂದು ನೊಂದು ನುಡಿದರು.
ಕಾಫಿ ಬೆಳೆಗಾರ ನಂದ ಅಪ್ಪಯ್ಯ ಮಾತನಾಡಿ ಬಾಡಗ ಬಾಣಂಗಾಲ ಗ್ರಾಮದ ಹುಂಡಿ ಭಾಗದಲ್ಲಿ ಕಾಫಿ ತೋಟಗಳಲ್ಲಿ ಮರಿ ಆನೆಗಳು ಸೇರಿದಂತೆ ಇಪ್ಪತ್ತಕ್ಕೂ ಅಧಿಕ ಕಾಡಾನೆಗಳು ಬೀಡುಬಿಟ್ಟು ಕಾಫಿ ತೋಟದಲ್ಲಿ ದಾಂಧಲೆ ನಡೆಸುತ್ತಿದೆ. ಅಲ್ಲದೇ ತೋಟ ಕೆಲಸಕ್ಕೆ ತೆರಳುವ ಕಾರ್ಮಿಕರು ಕಾಡಾನೆ ಹಾವಳಿ ಯಿಂದಾಗಿ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಸಕಾಲದಲ್ಲಿ ತೋಟದಲ್ಲಿ ನಡೆಯಬೇಕಾಗಿದ್ದ ಕೆಲಸ ಕಾರ್ಯಗಳಿಗೆ ಹಿನ್ನೆಡೆ ಉಂಟಾಗಿದೆ. ಅರಣ್ಯ ಇಲಾಖೆಯು ಕಾಡಾನೆ ಸಮಸ್ಯೆಯನ್ನು ಗಂಭೀüರವಾಗಿ ಪರಿಗಣಿಸಬೇಕು. ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು. ತೋಟಗಳಲ್ಲಿ ಬೀಡುಬಿಟ್ಟಿ ರುವ ಕಾಡಾನೆಗಳನ್ನು ದಿಢೀರ್ ಕಾರ್ಯಾಚರಣೆ ಮಾಡುವುದರಿಂದ ಕಾಫಿ ಬೆಳೆಗಾರರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಾಡಗ ಬಾಣಂಗಾಲ ಗ್ರಾಮ ಕಾಫಿ ಬೆಳೆಗಾರರಾದ ಪಿ.ಎನ್. ಸುಬ್ಬಯ್ಯ, ಜೋಸೆಫ್ ಚೆರಿಯನ್, ಹನಿ ಫಾರಂ ಎಸ್ಟೇಟ್ ವ್ಯವಸ್ಥಾಪಕ ಕೆ.ಎ ಬೋಪಯ್ಯ ಹಾಜರಿದ್ದರು.
- ಚಿತ್ರ - ವರದಿ : ವಾಸು ಎ.ಎನ್.