ಪೊನ್ನಂಪೇಟೆ, ಸೆ. ೧೯: ಮಾಯಮುಡಿಯ 'ಐರನ್ ಸೈಟ್ ಶೂಟರ್ಸ್' ತಂಡದ ವತಿಯಿಂದ ಕೈಲ್ ಪೊಳ್ದ್ ಹಬ್ಬದ ಅಂಗವಾಗಿ ತೋಕ್ ನಮ್ಮೆ ಮತ್ತು ತೆಂಗಿನಕಾಯಿಗೆ ಗುಂಡು ಹೊಡೆಯುವ ೨ನೇ ವರ್ಷದ ರಾಜ್ಯಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸ್ಪರ್ಧೆಯ ಯೋಜನಾ ನಿರ್ದೇಶಕರೂ ಆಗಿರುವ ಮಾಯಮುಡಿಯ ‘ಐರನ್ ಸೈಟ್ ಶೂಟರ್ಸ್' ತಂಡದ ಮುಖ್ಯಸ್ಥ ಆಪಟ್ಟೀರ ಆರ್. ಅಯ್ಯಪ್ಪ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೨೬ ರಂದು ಆಯೋಜಿಸಲಾಗಿರುವ ಈ ಸ್ಪರ್ಧೆಯು ಗೋಣಿಕೊಪ್ಪ ಸಮೀಪದ ಮಾಯಮುಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ಶೂಟಿಂಗ್ ಸ್ಪರ್ಧೆಯಲ್ಲಿ ೦.೨೨ ರೈಫಲ್‌ನಲ್ಲಿ ಮಾತ್ರ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಬಾರಿಯ ವಿಶೇಷ ಆಕರ್ಷಣೆಯಾಗಿ ೦.೨೨ ರೈಫಲ್‌ನಿಂದ ಕೋಳಿ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಹೆಚ್ಚುವರಿಯಾಗಿ ಆಯೋಜಿಸಲಾಗಿದೆ. ತೆಂಗಿನಕಾಯಿಗೆ ೫೦ ಮೀಟರ್ ಅಂತರದಲ್ಲಿ ಮತ್ತು ಕೋಳಿ ಮೊಟ್ಟೆಗೆ ೨೫ ಮೀಟರ್ ಅಂತರದಲ್ಲಿ ಗುಂಡು ಹೊಡೆದು ಸ್ಪರ್ಧಿಗಳು ತಮ್ಮ ನೈಪುಣ್ಯತೆ ಪರೀಕ್ಷಿಸಿಕೊಳ್ಳಬಹುದು ಎಂದು ವಿವರಿಸಿರುವ ಅಯ್ಯಪ್ಪ ಅವರು, ಎರಡು ಪ್ರತ್ಯೇಕ ಸ್ಪರ್ಧೆಯ ವಿಜಯಿ ಗಳಿಗೆ ತಲಾ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ನೀಡಲಾಗುವುದು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕ್ರಮವಾಗಿ ೧೫ ಸಾವಿರ, ೧೦ ಸಾವಿರ ಮತ್ತು ೭ ಸಾವಿರ, ಅಲ್ಲದೆ ಕೋಳಿಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕ್ರಮವಾಗಿ ೭ ಸಾವಿರ, ೫ ಸಾವಿರ ಮತ್ತು ೩ ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಪಾರಿತೋಷಕ ವಿತರಿಸಲಾ ಗುವುದು ಎಂದು ತಿಳಿಸಿದರು.
ಆಸಕ್ತರು ಯಾವುದೇ ವಯೋಮಿತಿಯ ನಿರ್ಬಂಧವಿಲ್ಲದೆ ಮುಕ್ತವಾಗಿ ಭಾಗವಹಿಸಬಹುದಾದ ಈ ಸ್ಪರ್ಧೆಯಲ್ಲಿ ಅಂದು ಬೆಳಿಗ್ಗೆ ೧೦ ಗಂಟೆಯೊಳಗಾಗಿ ಸ್ಪರ್ಧಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ ೯೬೧೧೮೭೦೮೧೩ ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸ್ಪರ್ಧೆಯ ಸಂಚಾಲಕರಾದ ಕಂಜಿತAಡ ಡಬ್ಲ್ಯೂ. ಪೊನ್ನಪ್ಪ ಮಾತನಾಡಿ, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯು ಕೊಡಗಿನ ಪುರಾತನ ಗ್ರಾಮೀಣ ಕ್ರೀಡೆಯಾಗಿದೆ. ಮಾಹಿತಿ ತಂತ್ರಜ್ಞಾನಗಳ ಆವಿಷ್ಕಾರದೊಂದಿಗೆ ಆಧುನಿಕ ಕ್ರೀಡೆಗಳು ಹೆಚ್ಚಾದ ಈ ಕಾಲಘಟ್ಟದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಪ್ರಾಶಸ್ತö್ಯ ಇಲ್ಲದಾಗಿದೆ. ಇದರಿಂದ ಬಹಳಷ್ಟು ಗ್ರಾಮೀಣ ಕ್ರೀಡೆಗಳು ಜನರಿಂದ ದೂರವಾಗುತ್ತಿದೆ. ಇದನ್ನು ಮನಗಂಡ ಮಾಯಮುಡಿಯ ಕ್ರೀಯಾಶೀಲ ಯುವಕರ ತಂಡವೊAದು ‘ಐರನ್ ಸೈಟ್ ಶೂಟರ್ಸ್' ಎಂಬ ಹೆಸರಿನ ಶೂಟರ್ಸ್ ತಂಡವನ್ನು ಕಳೆದ ವರ್ಷ ಅಸ್ತಿತ್ವಕ್ಕೆ ತಂದಿದೆ ಎಂದು ತಿಳಿಸಿದರು
ಈ ಸಂಸ್ಥೆ ವತಿಯಿಂದ ಮುಂದೆ ತೆಂಗಿನಕಾಯಿಗೆ ಗುಂಡು ಹೊಡೆ ಯುವ ಸ್ಪರ್ಧೆ ಮತ್ತು ತೋಕ್ ನಮ್ಮೆ (ಬಂದೂಕು ಉತ್ಸವ)ಗಳನ್ನು ನಿರಂತರ ವಾಗಿ ಆಯೋಜಿಸುವ ಗುರಿ ಹೊಂದ ಲಾಗಿದೆ ಎಂದರು.
ಗೋಷ್ಠಿಯಲ್ಲಿ ಆಪಟ್ಟೀರ ಟಾಟು ಮೊಣ್ಣಪ್ಪ ಉಪಸ್ಥಿತರಿದ್ದರು.