ಚರಣ್‌ಜಿತ್ ಸಿಂಗ್ ಪಂಜಾಬ್ ನೂತನ ಸಿಎಂ

ನವದೆಹಲಿ, ಸೆ. ೧೯: ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ಬಳಿಕ ಪಂಜಾಬ್‌ನ ನೂತನ ಸಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಕಾಂಗ್ರೆಸ್ ಹೈಕಮಾಂಡ್, ಅಚ್ಚರಿಯ ಬೆಳವಣಿಗೆಯಲ್ಲಿ ಚರಣ್‌ಜಿತ್ ಸಿಂಗ್ ಛನ್ನಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಘೋಷಿಸಿದೆ. ಪಂಜಾಬ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಚಿವ ಹರೀಶ್ ರಾವತ್ ಟ್ವೀಟ್ ಮಾಡಿ ಪಂಜಾಬ್ ನೂತನ ಸಿಎಂ ಹೆಸರನ್ನು ಟ್ವೀಟ್‌ನಲ್ಲಿ ಘೋಷಿಸಿದ್ದಾರೆ. ಈ ಬಾರಿ ದಲಿತ ನಾಯಕನಿಗೆ ಮಣೆ ಹಾಕಿರುವ ಕಾಂಗ್ರೆಸ್ ಚಮ್ಕೂರ್ ಸಾಹಿಬ್ ಕ್ಷೇತ್ರದ ಚರಣ್‌ಜಿತ್ ಸಿಂಗ್‌ರನ್ನು ಸಿಎಂ ಪಟ್ಟಕ್ಕೆ ಆಯ್ಕೆ ಮಾಡಿದೆ.

ಇಂದು ಸಿಇಟಿ ಫಲಿತಾಂಶ

ಬೆAಗಳೂರು, ಸೆ. ೧೯: ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಆಗಸ್ಟ್ ೨೮, ೨೯ ಹಾಗೂ ೩೦ ರಂದು ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ತಾ. ೨೦ ರಂದು (ಇಂದು) ಪ್ರಕಟವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ದಾಖಲೆಯ ಕಡಿಮೆ ಕಾಲಾವಧಿಯಲ್ಲೇ ಫಲಿತಾಂಶ ಪ್ರಕಟವಾಗಲಿದೆ. ಇದಕ್ಕಾಗಿ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದಾರೆ ಎಂದಿದ್ದಾರೆ. ಇಂದು ಸಂಜೆ ೪ ಗಂಟೆ ನಂತರ hಣಣಠಿs://ಛಿeಣoಟಿಟiಟಿe.ಞಚಿಡಿಟಿಚಿಣಚಿಞಚಿ.gov.iಟಿ/ಞeಚಿ ಲಿಂಕ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಸೋನಿಯಾಗೆ ಕ್ಯಾ. ಅಮರೀಂದರ್ ಸಿಂಗ್ ಪತ್ರ

ಚಂಡೀಘಡ, ಸೆ. ೧೯: ರಾಜೀನಾಮೆ ಸಲ್ಲಿಸುವ ಮೊದಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್, ಕಳೆದ ಐದು ತಿಂಗಳ ರಾಜಕೀಯ ಘಟನೆಗಳಲ್ಲಿ ಅನುಭವಿಸಿರುವ ರಾಜಕೀಯ ಯಾತನೆಯನ್ನು ವ್ಯಕ್ತಪಡಿಸಿದ್ದಾರೆ. ಪಂಜಾಬ್‌ನ ರಾಷ್ಟಿçÃಯ ಅವಶ್ಯಕತೆಗಳು ಮತ್ತು ಅದರ ಪ್ರಮುಖ ಕಾಳಜಿಗಳ ಸಂಪೂರ್ಣ ತಿಳುವಳಿಕೆಯನ್ನು ಆಧರಿಸಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ. ಪಂಜಾಬ್ ಕಾಂಗ್ರೆಸ್ ಘಟಕದಲ್ಲಿನ ರಾಜಕೀಯ ವಿದ್ಯಮಾನಗಳಿಂದ ಪಂಜಾಬ್‌ನಲ್ಲಿ ಅಸ್ಥಿರತೆ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ನನ್ನ ವೈಯಕ್ತಿಕ ಯಾತನೆಯೊಂದಿಗೆ ರಾಜ್ಯದ ಅಭಿವೃದ್ಧಿ ಮತ್ತು ಶಾಂತಿಗೆ ಭಂಗ ತರುವುದಿಲ್ಲ ಎಂಬ ಭರವಸೆ ಇಟ್ಟುಕೊಂಡಿದ್ದೇನೆ. ಕಳೆದ ಕೆಲವು ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ಎಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿದ್ದಾಗಿ ಅವರು ತಿಳಿಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿಯಾಗಿ ತನ್ನ ಕೈಲಾದಷ್ಟು ಮಟ್ಟಿಗೆ ಉತ್ತಮ ರೀತಿಯಲ್ಲಿ ಜನರಿಗಾಗಿ ಕೆಲಸ ಮಾಡಿದ ತೃಪ್ತಿಯಿದೆ. ಅನೇಕ ಭೌಗೋಳಿಕ ರಾಜಕೀಯ ಮತ್ತಿತರ ಆಂತರಿಕ ಭದ್ರತೆಗೆ ಸಂಬAಧಿಸಿದAತೆ ಯಾವುದರೊಂದಿಗೆ ರಾಜೀಯಿಲ್ಲದೆ ಪರಿಣಾಮಕಾರಿಯಾಗಿ ನಿರ್ವಹಿಸಲು ಪ್ರಯತ್ನಿಸಿದ್ದು, ಕೋಮುಸೌಹಾರ್ದತೆಯೊಂದಿಗೆ ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಿರುವುದಾಗಿ ಅವರು ಹೇಳಿದ್ದಾರೆ.

ಅನ್ಯ ಧರ್ಮದ ಯುವತಿ ಜೊತೆ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ

ಬೆಂಗಳೂರು, ಸೆ. ೧೯: ಅನ್ಯ ಧರ್ಮದ ಯುವತಿ ಜೊತೆ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ತಕ್ಷಣ ಬಂಧಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಬೆಂಗಳೂರು ಪೊಲೀಸರು ಘಟನೆ ಬೆಳಕಿಗೆ ಬಂದ ಕೂಡಲೇ ತಕ್ಷಣ ಕಾರ್ಯಪ್ರವೃತ್ತವಾಗಿ ಇಬ್ಬರನ್ನು ಬಂಧಿಸಿ ಅವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳನ್ನು ತಮ್ಮ ಸರ್ಕಾರ ಎಂದಿಗೂ ಪ್ರೋತ್ಸಾಹಿಸುವುದಿಲ್ಲ. ಇಂತಹ ಕುಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಅನ್ಯ ಧರ್ಮದ ಯುವತಿ ಜೊತೆ ಪ್ರಯಾಣಿಸುತ್ತಿದ್ದ ನೆಪವೊಡ್ಡಿ ದುಷ್ಕರ್ಮಿಗಳ ಗುಂಪು ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿತ್ತು.

ಆತ್ಮಹತ್ಯೆ ಪ್ರಕರಣ : ಪತ್ನಿ ವಿರುದ್ಧ ಶಂಕರ್ ಗಂಭೀರ ಆರೋಪ

ಬೆಂಗಳೂರು, ಸೆ. ೧೯: ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ ಪ್ರಕರಣಕ್ಕೆ ಕೌಟುಂಬಿಕ ಕಲಹವೇ ಪ್ರಮುಖ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಮೃತ ಪತ್ನಿ ಭಾರತಿ ವಿರುದ್ಧ ಹಲ್ಲೆಗೆರೆ ಶಂಕರ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಘಟನೆ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿರುವ ಶಂಕರ್ ಅವರು, ೨೦೨೦ ಫೆಬ್ರವರಿಯಲ್ಲಿ ಆಂಧ್ರದ ಗೋರ್ಲಾಂಟದ ಶ್ರೀಕಾಂತ್ ಎಂಬವರ ಜತೆ ಸಿಂಧುರಾಣಿ ವಿವಾಹವಾಗಿತ್ತು. ಶ್ರೀಕಾಂತ್ ತನ್ನ ತಂದೆ-ತಾಯಿ ಜೊತೆ ಹಾಗೂ ಪತ್ನಿಯ ಜತೆ ಕಾಡುಗೋಡಿಯಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಸೀಮಂತಕ್ಕೆ ಬಂದ ಮಗಳು ಹೆರಿಗೆಯಾದರೂ ಗಂಡನ ಮನೆಗೆ ಹೋಗಲು ಒಪ್ಪುತ್ತಿರಲಿಲ್ಲ. ಇನ್ನು ೨೦೧೫ರಲ್ಲಿ ಸಿಂಚನಾ, ಪ್ರವೀಣ್ ಎಂಬಾತನ ಜತೆ ವಿವಾಹವಾಗಿದ್ದರು. ಇವರು ಜಕ್ಕೂರಿನಲ್ಲಿ ತಮ್ಮ ಕುಟುಂಬಸ್ಥರ ಜೊತೆ ನೆಲೆಸಿದ್ದರು. ಸಿಂಚನಾ ಕೂಡ ಮಗುವಿನ ಹೆರಿಗೆಗೆ ತವರು ಮನೆಗೆ ಬಂದು ಗಂಡನ ಮನೆಗೆ ಹೋಗಿರಲಿಲ್ಲ. ಇಬ್ಬರ ಹೆಣ್ಣು ಮಕ್ಕಳ ಜೀವನ ಒಂದೇ ರೀತಿಯಾಗಲು ತಾಯಿ ಭಾರತಿ ಕಾರಣ ಸೇರಿದಂತೆ ಇನ್ನಿತರ ಆರೋಪಗಳನ್ನು ಮಾಡಿದ್ದಾರೆ.

ರೇವ್ ಪಾರ್ಟಿ - ೧೧ ಮಂದಿಯ ಬಂಧನ

ಬೆAಗಳೂರು, ಸೆ. ೧೯: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಬಳಿಯ ಖಾಸಗಿ ರೆಸಾರ್ಟ್ನ ನಿರ್ಜನ ಪ್ರದೇಶದಲ್ಲಿ ತಡ ರಾತ್ರಿ ರೇವ್ ಪಾರ್ಟಿ ನಡೆದಿದ್ದು, ಪೊಲೀಸರು ದಾಳಿ ನಡೆಸಿ ೧೧ಕ್ಕೂ ಜನರನ್ನು ವಶಕ್ಕೆ ಪಡೆದಿದ್ದಾರೆ. ರೇವ್ ಪಾರ್ಟಿ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ ನಡೆಸಿದ್ದಾರೆ. ಪೊಲೀಸರು ದಾಳಿ ಮಾಡುತ್ತಿದ್ದಂತೆ ಡ್ರಗ್ಸ್ ನಶೆಯಲ್ಲಿದ್ದ ಕೆಲ ಯುವಕ, ಯುವತಿಯರು ಪರಾರಿಯಾಗಿದ್ದಾರೆ. ಈ ಪೈಕಿ ಸದ್ಯ ಡ್ರಗ್ಸ್ ನಶೆಯಲ್ಲಿದ್ದ ೧೧ಕ್ಕೂ ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ರೇವ್ ಪಾರ್ಟಿಯಲ್ಲಿ ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಭಾಗಿಯಾಗಿದ್ದು, ಮ್ಯೂಸಿಕ್ ಕಂಪೆನಿಯೊAದು ಈ ಪಾರ್ಟಿ ಆಯೋಜಿಸಿತ್ತು ಎನ್ನಲಾಗಿದೆ.

ವೀರಪ್ಪ ಮೊಯ್ಲಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

ನವದೆಹಲಿ, ಸೆ. ೧೯: ಮಾಜಿ ಮುಖ್ಯಮಂತ್ರಿ ಹಾಗೂ ಸಾಹಿತಿ ಎಂ. ವೀರಪ್ಪ ಮೊಯ್ಲಿ ಅವರಿಗೆ ೨೦೨೦ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ‘ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ’ ಕೃತಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿ ಘೋಷಣೆಯಾಗಿತ್ತು. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ. ವೀರಪ್ಪ ಮೊಯ್ಲಿಗೆ ೨೦೨೦ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಚಂದ್ರಶೇಖರ ಕಂಬಾರ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ಒಳಗೊಂಡಿದೆ.

ರೂ. ೨೫೦ ಕೋಟಿ ಮೌಲ್ಯದ ಡ್ರಗ್ಸ್ನೊಂದಿಗೆ ಬೋಟ್ ಎಟಿಎಸ್ ವಶಕ್ಕೆ

ಗಾಂಧಿನಗರ, ಸೆ. ೧೯: ಗುಜರಾತ್ ಕರಾವಳಿ ಗಾರ್ಡ್ ಮತ್ತು ರಾಜ್ಯ ಭಯೋತ್ಪಾದನಾ ನಿಗ್ರಹ ಜಂಟಿಯಾಗಿ ನಡೆಸಿದ ಕಾರ್ಯಾ ಚರಣೆಯೊಂದರಲ್ಲಿ ಗುಜರಾತ್ ಕರಾವಳಿಯ ಭಾರತೀಯ ಸಮುದ್ರದಲ್ಲಿ ಏಳು ಸಿಬ್ಬಂದಿ ಮತ್ತು ಭಾರೀ ಪ್ರಮಾಣದ ಹೆರಾಯಿನ್ ಹೊಂದಿದ್ದ ಇರಾನಿಯನ್ ದೋಣಿಯೊಂದನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಶನಿವಾರ ರಾತ್ರಿ ಕಾರ್ಯಾಚರಣೆ ವೇಳೆಯಲ್ಲಿ ಬೋಟ್‌ಅನ್ನು ವಶಕ್ಕೆ ಪಡೆಯಲಾಗಿದೆ. ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ರೂ. ೧೫೦ ರಿಂದ ೨೫೦ ಕೋಟಿ ಮೌಲ್ಯದ ಅಂದಾಜು ೩೦ ರಿಂದ ೫೦ ಕೆ.ಜಿ.ಯಷ್ಟು ಡ್ರಗ್ಸ್ನ್ನು ಸಾಗಟ ಮಾಡಲಾಗುತಿತ್ತು ಎಂದು ಅವರು ಹೇಳಿದ್ದಾರೆ. ಬೋಟ್‌ನಲ್ಲಿದ್ದ ಎಲ್ಲಾ ಏಳು ಮಂದಿ ಇರಾನಿ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮುದ್ರ ಮಾರ್ಗವಾಗಿ ಹೆರಾಯಿನ್‌ನ್ನು ಕಳ್ಳ ಸಾಗಣೆ ಬಗ್ಗೆ ದೊರೆತ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಯಿತು ಎಂದು ಗುಜರಾತ್ ಎಟಿಎಸ್ ಡಿಐಜಿ ಹಿಮಾಂಶು ಶುಕ್ಲಾ ಹೇಳಿದ್ದಾರೆ.