ಮಡಿಕೇರಿ, ಸೆ. ೧೯: ಸಮಾನತೆಯ ಸಮಾಜ ನಿರ್ಮಾಣ ವಾದಲ್ಲಿ ಮಾತ್ರ ದಾರ್ಶನಿಕರ ಕನಸು ನನಸಾಗುತ್ತದೆ. ಈ ನಿಟ್ಟಿನಲ್ಲಿ ಯುವಜನತೆ ಜಾತಿ ಅಲ್ಲ ಪ್ರೀತಿ, ಸಹಬಾಳ್ವೆ ಮುಖ್ಯ ಎಂಬುದು ಅರಿತು ಸಮಾಜದಲ್ಲಿ ಮುನ್ನಡೆಯಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಕರೆ ನೀಡಿದರು.
ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಮಡಿಕೇರಿ ನಗರ ಘಟಕ ವತಿಯಿಂದ ನಾರಾಯಣ ಗುರು ಜನ್ಮ ದಿನಾಚರಣೆ ಪ್ರಯುಕ್ತ ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ನಾರಾಯಣ ಗುರುಗಳು ಜಾತಿ ವ್ಯವಸ್ಥೆ ವಿರುದ್ಧ ಮಡಿಕೇರಿ, ಸೆ. ೧೯: ಸಮಾನತೆಯ ಸಮಾಜ ನಿರ್ಮಾಣ ವಾದಲ್ಲಿ ಮಾತ್ರ ದಾರ್ಶನಿಕರ ಕನಸು ನನಸಾಗುತ್ತದೆ. ಈ ನಿಟ್ಟಿನಲ್ಲಿ ಯುವಜನತೆ ಜಾತಿ ಅಲ್ಲ ಪ್ರೀತಿ, ಸಹಬಾಳ್ವೆ ಮುಖ್ಯ ಎಂಬುದು ಅರಿತು ಸಮಾಜದಲ್ಲಿ ಮುನ್ನಡೆಯಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಕರೆ ನೀಡಿದರು.
ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಮಡಿಕೇರಿ ನಗರ ಘಟಕ ವತಿಯಿಂದ ನಾರಾಯಣ ಗುರು ಜನ್ಮ ದಿನಾಚರಣೆ ಪ್ರಯುಕ್ತ ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ನಾರಾಯಣ ಗುರುಗಳು ಜಾತಿ ವ್ಯವಸ್ಥೆ ವಿರುದ್ಧ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್, ಪ್ರತಿಯೊಬ್ಬರು ಸುಶಿಕ್ಷಿತರಾಗಬೇಕು. ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಹಲವು ಯೋಜನೆ ರೂಪಿಸಿದೆ. ಆದರೆ, ಇದರ ಸದ್ಬಳಕೆ ಸಮರ್ಪಕ ವಾಗಿ ಆಗುತ್ತಿಲ್ಲ. ಯುವಜನತೆ ತಾಂತ್ರಿಕಯುಗದಲ್ಲಿ ಮೊಬೈಲ್ಗಳಿಗೆ ದಾಸರಾಗುತ್ತಿರುವುದು ಆತಂಕಕಾರಿ ವಿಚಾರ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ರಾಜ್ಯಪಾಲ ಬಿ.ಕೆ. ರವೀಂದ್ರ ರೈ ಮಾತನಾಡಿ, ಶಿಕ್ಷಣದಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಕೊರೊನಾ ಸಂದರ್ಭದಲ್ಲಿ ದ.ಸಂ.ಸ. ಸಂಘಟನೆ ಬಡವರ್ಗದವರಿಗೆ ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದಿದೆ. ಹೀಗೆ ಸಂಘಟನೆ ಸೇವೆ ಮುಂದುವರೆಯಲಿ ಎಂದು ಹಾರೈಸಿದರು. ನಮ್ಮ ಕೊಡಗು ತಂಡದ ಸ್ಥಾಪಕಾಧ್ಯಕ್ಷ ಹಾಗೂ ಲೇಖಕ ನೌಷದ್ ಜನ್ನತ್ ಮಾತನಾಡಿ, ನಾರಾಯಣ ಗುರು ಹಿಂದುಳಿದವರ, ಶೋಷಿತರ ವಿರುದ್ಧ ಮೇಲ್ವರ್ಗದವರು ನಡೆಸುತ್ತಿದ್ದ ದೌರ್ಜನ್ಯ ವಿರುದ್ಧ ಹೋರಾಡಿದ್ದಾರೆ. ದೇವಾಲಯಕ್ಕೆ ಕೆಳಸಮುದಾಯಗಳಿಗೆ ಪ್ರವೇಶ ನೀಡದ ಸಂದರ್ಭ, ಶೋಷಿತರನ್ನು ಸಂಘಟಿಸಿ ದೇವಾಲಯ ನಿರ್ಮಿಸಿರುವುದು ಅವರ ಕ್ರಾಂತಿಕಾರಕ ಬದಲಾವಣೆಗಳಲ್ಲಿ ಒಂದಾಗಿವೆ. ನಾರಾಯಣ ಗುರುಗಳ ತತ್ವ ಸಿದ್ಧಾಂತ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿ ದಿಸೆಯಲ್ಲಿ ಸರಿಯಾದ ಗುರಿಯಲ್ಲಿ ಸಾಗಿದರೆ ಯಶಸ್ಸು ಸಾಧ್ಯ ಎಂದು ಹೇಳಿದರು. ಸಂಘಟನೆಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಪ್ರಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿರಂತರವಾಗಿ ೩೨ ವರ್ಷಗಳಿಂದ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗಿದೆ ಎಂದರು.
ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿದರು. ದ.ಸಂ.ಸ. ನಗರ ಸಂಚಾಲಕ ಸಿ.ಪಿ. ಸಿದ್ದೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ಕೊರೊನಾ ಸೋಂಕಿನಿAದ ಮೃತಪಟ್ಟವರ ದೇಹವನ್ನು ಪಿ.ಪಿ.ಇ. ಕಿಟ್ ಮೂಲಕ ಪ್ಯಾಕ್ ಮಾಡುತ್ತಿದ್ದ ರಾಬರ್ಟ್ ಹಾಗೂ ಸೈಯ್ಯದ್ ಸೇರಿದಂತೆ ಶೈಕ್ಷಣಿಕ ಸಾಲಿನಲ್ಲಿ ಶೇ. ೭೦ಕ್ಕಿಂತ ಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸಲಾಯಿತು.