ಶನಿವಾರಸಂತೆ, ಸೆ. ೧೮: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತೆ ಗ್ರಾಮದಲ್ಲಿ ಆದರ್ಶ ಗ್ರಾಮ ಯೋಜನೆಯಡಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತು.

ನಿರ್ಮಿತಿ ಕೇಂದ್ರ ನಿರ್ಮಿಸಲಿರುವ ಕಾಮಗಾರಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಾವನಾ, ಸದಸ್ಯರಾದ ದಾಕ್ಷಾಯಿಣಿ, ಬಿ.ಕೆ. ದಿನೇಶ್, ಲೀನಾ, ಹನೀಫ್ ಜಂಟಿಯಾಗಿ ಭೂಮಿ ಪೂಜೆ ನೆರವೇರಿಸಿದರು.

ಸರಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ರಾಧಾ, ಶಿಕ್ಷಕಿ ಚಂದ್ರಕಲಾ, ಅಂಗನವಾಡಿ ಶಿಕ್ಷಕಿ ವಿಮಲಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಣೇಶ್, ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಭುವನೇಶ್, ಪ್ರಮುಖರಾದ ಗಣೇಶ್, ನಾಗೇಶ್ ಇದ್ದರು.