ಮಡಿಕೇರಿ, ಸೆ. ೧೮: ಪ್ರಸಕ್ತ ಸಾಲಿನಲ್ಲಿ ಅಖಿಲ ಭಾರತ ನಾಗರಿಕ ಸೇವಾ ಹಾಕಿ ಪಂದ್ಯಾವಳಿಯು ತಾ. ೨೩ ರಿಂದ ೩೦ರ ವರೆಗೆ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಮರ್ಕಂಡೆಯ ಹಾಕಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಈ ಪಂದ್ಯಾವಳಿಗೆ ರಾಜ್ಯ ಮಟ್ಟದ ವಿಜೇತ ತಂಡವಾದ ಕೊಡಗು ಜಿಲ್ಲಾ ತಂಡದಿAದ ಸರಕಾರಿ ನೌಕರ ಕ್ರೀಡಾಪಟುಗಳಾದ ಶಿಕ್ಷಣ ಇಲಾಖೆಯ ಶಿವಕುಮಾರ್.ಎಸ್.ಎಸ್, ಅಶ್ವತ್ ಬಿ.ಎಲ್. ಮತ್ತು ದಯಾನಂದ ಪ್ರಕಾಶ್, ಕಂದಾಯ ಇಲಾಖೆಯ ಸೋಮಣ್ಣ ಕೆ.ಹೆಚ್, ಮತ್ತು ಪಳಂಗಪ್ಪ.ಸಿ.ಎ, ಆರೋಗ್ಯ ಇಲಾಖೆಯಿಂದ ನವೀನ್ ಕುಮಾರ್.ಕೆ.ಆರ್, ಪಶುಸಂಗೋಪನೆ ಇಲಾಖೆಯ ಚಂದ್ರಶೇಖರ್ ಮತ್ತು ರಮೇಶ್.ಎಚ್.ಈ, ನ್ಯಾಯಾಂಗ ಇಲಾಖೆಯ ನಾಗೇಶ್ ಕುಮಾರ್ ಟಿ.ಎಸ್, ತಂಡದ ವ್ಯವಸ್ಥಾಪಕರಾಗಿ ಶಿಕ್ಷಣ ಇಲಾಖೆಯ ಪೂರ್ಣೇಶ್ ಬಿ.ಟಿ. ಹಾಗೂ ತರಬೇತುದಾರರಾಗಿ ಶಿಕ್ಷಣ ಇಲಾಖೆಯ ಡ್ಯಾನಿ, ಈರಪ್ಪ ಸಿ.ಯು, ಇವರುಗಳು ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪೊನ್ನಚನ ಶ್ರೀನಿವಾಸ್ ತಿಳಿಸಿದ್ದಾರೆ.