ಬೆಂಗಳೂರು, ಸೆ. ೧೮: ಕೊಡಗಿನಲ್ಲಿ ಶಿಥಿಲಾವಸ್ಥೆಯಿಂದ ಕೂಡಿದ ಪಶು ಆಸ್ಪತ್ರೆಯ ಕಟ್ಟಡಗಳ ಕಾಮಗಾರಿಗಾಗಿ ಸರಕಾರ ಯಾವ ಕ್ರಮ ಕೈಗೊಂಡಿದೆ. ಇದಕ್ಕಾಗಿ ಮೀಸಲಿಟ್ಟ ಅನುದಾನ ಎಷ್ಟು? ವಿಶೇಷ ಘಟಕ ಯೋಜನೆಯಡಿಯಲ್ಲಿ ಕೊಡಗು ಜಿಲ್ಲೆಗೆ ಎಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ? ಯಾವ ಯಾವ ಉದ್ದೇಶಕ್ಕಾಗಿ ಬಿಡುಗಡೆಗೊಳಿಸಲಾಗಿದೆ? ಪಶುಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ವಾಣಿಜ್ಯ ಬ್ಯಾಂಕ್‌ಗಳು ಸಾಲ ನೀಡದಿರುವುದರಿಂದ ಯೋಜನೆ ವಿಫಲಗೊಳ್ಳುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದಲ್ಲಿ ಈ ಬಗ್ಗೆ ಸರಕಾರ ಯಾವ ಕ್ರಮ ಕೈಗೊಂಡಿದೆ?

ರಾಜ್ಯ ಪಶು ಸಂಗೋಪನೆ ಸಚಿವರು ಈ ಕೆಳಗಿನಂತೆ ಉತ್ತರಿಸಿದರು

ಕೊಡಗು ಜಿಲ್ಲೆಯ ಆಸ್ಪತ್ರೆ ಕಟ್ಟಡಗಳು ಶಿಥಿಲಾವಸ್ಥೆಯಿಂದ ಕೂಡಿರುವುದು ಸರಕಾರದ ಗಮನಕ್ಕೆ ಬಂದಿರುತ್ತದೆ. ಪ್ರಸ್ತುತ ಸಾಲಿನ ಜಿಲ್ಲಾ ವಲಯದ ಆಯವ್ಯಯದಲ್ಲಿ ಜಿಲ್ಲೆಯ ಪಶುವೈದ್ಯಕೀಯ ಸಂಸ್ಥೆಗಳ ತುರ್ತು ದುರಸ್ತಿ ಕಾಮಗಾರಿಗಳಿಗೆ ರೂ. ೫೦ ಲಕ್ಷ ಅನುದಾನ ಮೀಸಲಿಡಲಾಗಿದೆ. ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ವಿಭಾಗಕ್ಕೆ ಕ್ರಮಕೈಗೊಳ್ಳಲು ತಿಳಿಸಲಾಗಿದೆ.

ವಿಶೇಷ ಘಟಕ ಯೋಜನೆಯಡಿಯಲ್ಲಿ ಕೊಡಗು ಜಿಲ್ಲೆಗೆ ರೂ. ೨,೧೧೪ ಲಕ್ಷ ಅನುದಾನ ನಿಗದಿಯಾಗಿರುತ್ತದೆ. ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ ಆಯ್ಕೆಯಾದ ಹೈನುಗಾರಿಕೆ ಫಲಾನುಭವಿಗಳಿಗೆ ೧ ಬಕೆಟ್ ಸಾಮರ್ಥ್ಯದ ಹಾಲು ಕರೆಯುವ ವಿದ್ಯುತ್ ಚಾಲಿತ ಯಂತ್ರ ಮತ್ತು ಎರಡು ರಬ್ಬರ್ ಮ್ಯಾಟ್‌ಗಳನ್ನು ವಿತರಿಸುವ ಉದ್ದೇಶಕ್ಕಾಗಿ ನಿಗದಿಪಡಿಸಲಾಗಿರುತ್ತದೆ. ಪಶುಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ವಾಣಿಜ್ಯ ಬ್ಯಾಂಕ್‌ಗಳು ಸಾಲ ನೀಡಿ ಯೋಜನೆ ಅನುಷ್ಠಾನಗೊಂಡಿರುತ್ತದೆ.

ರAಜನ್ ಅವರು ಮತ್ತೆ ಪ್ರಶ್ನಿಸುತ್ತಾರೆ

ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿ ಂಟಿimಚಿಟ Iಟಿಜuಛಿಣioಟಿ ಪಶುಪಾಲನಾ ಇಲಾಖೆಯಿಂದ ಕಾರ್ಯಕ್ರಮಗಳೇನು? ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಕಾಯ್ದೆ ೨೦೧೩ ರ ಅನ್ವಯ ಬಳಕೆಯಾಗದ ಮೊತ್ತ. ಲಸಿಕಾ ಕಾರ್ಯಕ್ರಮ ಯಾವ ರೀತಿಯಿದೆ? ಕರ್ನಾಟಕ ಕುರಿ ಮತ್ತು ಕುರಿ ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಪ್ರಗತಿ ಯಾವ ರೀತಿಯಿದೆ?

ಇದಕ್ಕೆ ಸಚಿವರು ಹೀಗೆ ಉತ್ತರಿಸಿದ್ದಾರೆ

ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿ ಪಶುಪಾಲನಾ ಇಲಾಖೆಯಿಂದ ಂಟಿimಚಿಟ Iಟಿಜuಛಿಣioಟಿ ಕಾರ್ಯಕ್ರಮದಡಿ ಒಂದು ಮಿಶ್ರ ತಳಿ ಹಸು-ಎಮ್ಮೆಯನ್ನು ಶೇ. ೩೩.೩೩ ಸಹಾಯಧನದಲ್ಲಿ ಪರಿಶಿಷ್ಟ ಜಾತಿ-ಪಂಗಡ ರೈತರಿಗೆ ಹಾಗೂ ಶೇ. ೨೫ ಸಹಾಯಧನದಲ್ಲಿ ಇತರ ರೈತರಿಗೆ ವಿತರಿಸಲಾಗುವುದು.

ಶೇ. ೫೦ರ ಸಹಾಯಧನದಲ್ಲಿ ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲಾಗುವುದು. ಆಸಕ್ತಿಯುಳ್ಳ ಎಲ್ಲಾ ರೈತರು ಸಂಬAಧಪಟ್ಟ ಪಶುವೈದ್ಯ ಆಸ್ಪತ್ರೆಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಹಾಲು ಕರೆಯುವ ಯಂತ್ರ ಮತ್ತು ಹಸುಗಳ ನೆಲಹಾಸು ಇವುಗಳನ್ನು ಶೇ. ೯೦ರ ಸಹಾಯಧನದೊಂದಿಗೆ ವಿತರಿಸಲಾಗುವುದು.

ಗುರುತಿಸಲ್ಪಟ್ಟ ಸಾಂಕ್ರಾಮಿಕ ರೋಗಗಳ ವಿರುದ್ಧ ಲಸಿಕೆ ಹಾಕುವುದು. ಕಾಲುಬಾಯಿ ಜ್ವರ ಮತ್ತು ಕಂದುರೋಗಗಳ ವಿರುದ್ಧ ಲಸಿಕಾ ಕಾರ್ಯಕ್ರಮಕ್ಕೆ ಶೇ. ೧೦೦ ಕೇಂದ್ರದ ಅನುದಾನ. ಆಸ್ಕಾಡ್ ಯೋಜನೆಯಡಿಯಲ್ಲಿ ಶೇ. ೬೦ ಕೇಂದ್ರದ ಪಾಲು ಹಾಗೂ ಶೇ. ೪೦ ರಾಜ್ಯದ ಪಾಲು ಅನುಪಾತದಲ್ಲಿ ಅನುದಾನ (ಗಳಲೇರೋಗ, ಚಪ್ಪೆರೋಗ, ಕರಳುಬೇನೆ, ನೆರಡಿ ರೋಗಗಳ ವಿರುದ್ಧ ಲಸಿಕೆ ಹಾಕುವುದು.)

ಪಿ.ಪಿ.ಆರ್. ರೋಗದ ವಿರುದ್ಧ ಲಸಿಕಾ ಕಾರ್ಯಕ್ರಮಕ್ಕೆ ಶೇ. ೬೦ ಕೇಂದ್ರದ ಪಾಲು ಹಾಗೂ ಶೇ. ೪೦ ರಾಜ್ಯದ ಪಾಲು ಅನುಪಾತದಲ್ಲಿ ಅನುದಾನ. ನಿಗಮದಲ್ಲಿ ನೋಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಪಂಗಡದ ಸದಸ್ಯರುಗಳಿಗೆ ೬+೧ ಕುರಿ-ಮೇಕೆ ಘಟಕ ವಿತರಿಸುವುದು. ವಲಸೆ ಕುರಿಗಾರರಿಗೆ ಸಂಚಾರಿ ಟೆಂಟ್, ಸೋಲಾರ್ ಟಾರ್ಚ್, ರಬ್ಬರ್ ಫ್ಲೋರ್ ಮ್ಯಾಟ್ ಮತ್ತು ರೇನ್ ಕೋಟ್ ಸೇರಿದಂತೆ ಪರಿಕರಗಳ ಕಿಟ್‌ಗಳ ವಿತರಣೆ ಮಾಡಲಾಗುವುದು. ಕುರಿಗಾರರಿಗೆ ವೈಜ್ಞಾನಿಕ ಕುರಿ ಸಾಕಾಣಿಕೆಯಲ್ಲಿ ತರಬೇತಿ ನೀಡಲಾಗುವುದು.