ಸುಂಟಿಕೊಪ್ಪ, ಸೆ. ೧೮: ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣ ಕೊಠಡಿ ಕಾಮಗಾರಿಗೆ ಗ್ರಹಣ ಹಿಡಿದ್ದಿದ್ದು ಅರ್ಧದಲ್ಲೇ ಕಟ್ಟಿ ನಿಲ್ಲಿಸಿದ ಕಬ್ಬಿಣದ ಗ್ರಿಲ್ ಅಡಿಪಾಯ ಹಾಳಾಗುತ್ತಿದ್ದು ಸರಕಾರ ಹಣ ನೀರು ಪಾಲಾಗಿದೆ.
೨೦೨೦ನೇ ಸಾಲಿನಲ್ಲಿ ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಈ ಹಿಂದಿನ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ ಹಾಗೂ ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ ಅವರುಗಳು ಅನುದಾನವನ್ನು ಜಂಟಿಯಾಗಿ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆಯಾಗೊಳಿಸಿದ್ದರು. ಆದರಂತೆ ಕೊಠಡಿ ಕಾಮಗಾರಿಯನ್ನು ಅಡಿಪಾಯ ಸಮತಟ್ಟು ಮಾಡಿ ಕಬ್ಬಿಣದ ಗ್ರಿಲ್ಗಳನ್ನು ನಿರ್ಮಿಸಲಾಗಿತ್ತು. ಏತನ್ಮಧ್ಯೆ ಕೊರೊನಾ ಮಹಾಮಾರಿ ಹೆಚ್ಚಾಗಿದ್ದರಿಂದ ಜಿಲ್ಲಾಡಳಿತದ ಸೂಚನೆಯಂತೆ ಕೆಲಸ ಸ್ಥಗಿತಗೊಳಿಸಲಾಯಿತು. ಈ ಕೊಠಡಿ ನಿರ್ಮಾಣಕ್ಕೆ ಮೀಸಲಿಟ್ಟ ಹಣವನ್ನು ಕೊರೊನಾ ನಿಯಂತ್ರಣಕ್ಕಾಗಿ ಬ¼ಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಪ್ರಾಥಮಿಕ ಶಾಲಾ ಆವರಣಕ್ಕೆ ಆಗಮಿಸುವ ಕಿಡಿಗೇಡಿಗಳು ಸಭಾಂಗಣ ನಿರ್ಮಾಣಕ್ಕೆ ಬಳಸಲಾಗಿರುವ ಕಬ್ಬಿಣದ ಗ್ರಿಲ್ಗಳಲ್ಲಿ ಆಟವಾಡಿ ಅವುಗಳ ತಳಪಾಯಕ್ಕೆ ಹಾನಿಗೊಳಿಸಿದ್ದಾರೆ. ಸಂಜೆ ವೇಳೆಗೆ ಆಗಮಿಸುವ ಕೆಲವರು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಕುರುಹುಗಳು ಶಾಲಾವರಣದಲ್ಲಿ ಕಂಡು ಬರುತ್ತಿದೆ. ಶಿಕ್ಷಕರು ಹಾಗೂ ಅಡುಗೆಯವರು ನಿತ್ಯ ಶುಚಿಗೊಳಿಸುವ ಕಾಯಕವಾಗಿದೆ. ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದೀಗ ಇಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಸಭಾಂಗಣದ ಕೊರತೆಯಿಂದ ತೊಡಕುವುಂಟಾಗಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೂಡಲೇ ಸಂಬAಧಿಸಿದವರು ಈ ಸಭಾಂಗಣ ಕಾಮಗಾರಿ ಪೂರ್ಣಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.