ಮಡಿಕೇರಿ, ಸೆ. ೧೮ : ಮಡಿಕೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಸಂಬAಧಿಸಿದAತೆ ಶೀಘ್ರದಲ್ಲಿಯೇ ಆದೇಶ ಹೊರ ಬೀಳಲಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾಹಿತಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆಸುವ ಕುರಿತು ತಾನು ಸಂಬAಧಿಸಿದ ಮಂತ್ರಿಗಳೊAದಿಗೆ ಮಾತನಾಡಿದ್ದು, ಅತೀ ಶೀಘ್ರದಲ್ಲಿ ಆದೇಶ ಬರಲಿದೆ ಎಂದು ಅವರು ಹೇಳಿದರು. ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವವನ್ನು ಈ ಬಾರಿ ಸರಳವಾಗಿ ಆಚರಿಸು ವಂತಾಗಬೇಕು. ದೇವರ ಉತ್ಸವವನ್ನು ಯಾವುದೇ ಕಾರಣಕ್ಕೂ ಕೈಬಿಡುವಂತಿಲ್ಲ. ಆದರೆ ಹೆಚ್ಚಿನ ಜನಜಂಗುಳಿಯನ್ನು ಸೇರಿಸಿ ಬಹಳ ದುಬಾರಿಯಾಗಿ ಮಾಡುವಂತಾಗ ಬಾರದು ಏಕೆಂದರೆ ಆರೋಗ್ಯವೇ ಮುಖ್ಯವಾಗಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳುವಂತಹ ನಿಟ್ಟಿನಲ್ಲಿ ಬಹಳ ಸರಳವಾಗಿ ಉತ್ಸವ ಆಚರಣೆಯಾಗಬೇಕೆಂದು ರಂಜನ್ ಹೇಳಿದರು.

ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಕಾಲೋನಿಗಳಿಗೆ ಭೇಟಿ ನೀಡಿ ಅಲ್ಲಿನ ಮೂಲ ಸೌಕರ್ಯಗಳ ಕೊರತೆಗಳನ್ನು ನೀಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಲೆ ಕಡಿಮೆಯಾಗಲಿದೆ

ಪೆಟ್ರೋಲ್ ಹಾಗೂ ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸಲು ಸರ್ಕಾರ ವಿರೋಧ ವ್ಯಕ್ತಪಡಿಸು ತ್ತಿರುವ ಕುರಿತು ಪ್ರತಿಕ್ರಿಯಿಸಿದ ರಂಜನ್

(ಮೊದಲ ಪುಟದಿಂದ) ಪೆಟ್ರೋಲ್ ಹಾಗೂ ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಿದರೆ ಸರ್ಕಾರಕ್ಕೆ ಬರುವ ಆದಾಯ ಕಡಿಮೆಯಾಗಲಿದೆ ಎಂಬ ಕಾರಣಕ್ಕಾಗಿ ಸರ್ಕಾರಗಳು ವಿರೋಧ ವ್ಯಕ್ತಪಡಿಸುತ್ತಿದೆ ಎಂದು ನುಡಿದರು.

ಕೊರೊನಾ ಸಂದರ್ಭ ಆರ್ಥಿಕ ಪರಿಸ್ಥಿತಿ ಕುಸಿದ ಕಾರಣ ಅದನ್ನು ಸರಿದೂಗಿಸಲು ಪೆಟ್ರೋಲ್, ಗ್ಯಾಸ್ ಡೀಸೆಲ್ ಹಾಗೂ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ ಎಂದು ಹೇಳಿದ ಅಪ್ಪಚ್ಚು ರಂಜನ್ ಸದ್ಯದಲ್ಲಿಯೇ ಇವುಗಳ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಈ ಹಿಂದೆ ಆಡಳಿತ ನಡೆಸಿದವರು ಬೇರೆ ದೇಶಗಳಂತೆ ಅರಬ್ ದೇಶಗಳಿಂದ ತೈಲ ಬಾವಿಯನ್ನು ಖರೀದಿ ಮಾಡಿದಿದ್ದರೆ; ನಮಗೆ ಬೇಕಾದಾಗ ತೈಲವನ್ನು ಪಡೆದುಕೊಳ್ಳಬಹುದಿತ್ತು. ಬೆಲೆ ಏರಿಕೆಯಾದಾಗ ನಮ್ಮದೇ ತೈಲ ಬಾವಿಯಿಂದ ತೈಲವನ್ನು ಬಳಸಿಕೊಳ್ಳಬಹುದಿತ್ತು. ಆದರೆ ಆ ಕೆಲಸ ಆಗಲಿಲ್ಲ. ಆದ್ದರಿಂದ ಇಂದು ತೊಂದರೆಯಾಗಿದೆ ಎಂದರು.

ದೇವಾಲಯ ಮುಟ್ಟಲು ಬಿಡುವುದಿಲ್ಲ

ನಂಜನಗೂಡಿನಲ್ಲಿ ನಡೆದ ದೇಗುಲಗಳ ತೆರವು ಪ್ರಕರಣದ ಕುರಿತು ಮಾತನಾಡಿದ ರಂಜನ್, ಸುಪ್ರೀಂ ಕೋರ್ಟ್ ಆದೇಶವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಅಧಿಕಾರಿಗಳು ದೇವಾಲಯಗಳನ್ನು ತೆರವು ಮಾಡಿಸಿದ್ದಾರೆ. ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಬೆಳೆದ ಪಕ್ಷವಾಗಿದ್ದು, ಪ್ರಮಾದವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಕೊಡಗಿನಲ್ಲಿ ಇಂತಹ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ. ಇಲ್ಲಿನ ಒಂದೇ ಒಂದು ದೇವಾಲಯವನ್ನು ಕೂಡ ಮುಟ್ಟಲು ಬಿಡುವುದಿಲ್ಲ ಎಂದು ಅಪ್ಪಚ್ಚು ರಂಜನ್ ನುಡಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ವೈದ್ಯಕೀಯ ಕಾಲೇಜಿನ ಡೀನ್ ಡಾ. ಕಾರ್ಯಪ್ಪ, ಅಧೀಕ್ಷಕ ಡಾ. ಮಂಜುನಾಥ್, ಪ್ರಾಂಶುಪಾಲ ವಿಶಾಲ್‌ಕುಮಾರ್, ಆಡಳಿತಾಧಿಕಾರಿ ಡಾ. ನಂಜುಡೇಗೌಡ, ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್, ಬಿಜೆಪಿ ನಗರಸಭಾ ಸದಸ್ಯರುಗಳು ಮತ್ತಿತರರು ಇದ್ದರು.