ಮಡಿಕೇರಿ, ಸೆ. ೧೭: ರಾಜ್ಯದಲ್ಲಿ ಬಹು ಸಂಖ್ಯಾತರು ಹಾಗೂ ರಾಜಕೀಯವಾಗಿ ಪ್ರಬಲವಾಗಿರುವ ಜನಾಂಗಗಳಲ್ಲಿಯೂ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವುದು ಅತ್ಯಂತ ಶ್ಲಾಘನೀಯ ಮತ್ತು ಸಮಯೋಚಿತವಾಗಿರುತ್ತದೆ ಎಂದು ಮೇಲ್ಮನೆಯಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹೇಳಿದರು.
ಕಡಿಮೆ ಜನಸಂಖ್ಯೆ ಹೊಂದಿದ್ದು, ವಿಶ್ವದಲ್ಲೇ ಅತ್ಯಂತ ವಿಶಿಷ್ಟ ಹಾಗೂ ವಿಭಿನ್ನವಾದ ಸಂಸ್ಕೃತಿ, ಆಚಾರ - ವಿಚಾರ, ಸಂಪ್ರದಾಯಗಳನ್ನು ಹೊಂದಿರುವ ಹಾಗೂ ದೇಶಸೇವೆ ಮತ್ತು ಕ್ರೀಡಾಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿರುವ ಕೊಡವ ಜನಾಂಗದ ಅಭಿವೃದ್ಧಿಗಾಗಿ ಕೊಡವ ಜನಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕಾದ ಅನಿವಾರ್ಯತೆ ಇದೆ.
ಕೊಡವ ಜನಾಂಗದ ಶೇ. ೬೦ ಕ್ಕಿಂತಲೂ ಹೆಚ್ಚಿನವರು ಹಿಂದುಳಿದವ ರಾಗಿದ್ದು, ಶೇ. ೩೦ ಕ್ಕಿಂತಲೂ ಹೆಚ್ಚಿನವರು ಬಡತನ ರೇಖೆಯ ಕೆಳಗಿರುವವರಾಗಿದ್ದಾರೆ. ಅಳಿವಿನಂಚಿ ನಲ್ಲಿರುವ ಭಾಷೆಗಳ ಪಟ್ಟಿಯಲ್ಲಿ ಕೊಡವ ಭಾಷೆಯೂ ಸೇರಿಕೊಂಡಿ ರುವುದು ಆತಂಕದ ವಿಷಯವಾಗಿರುತ್ತದೆ.
ಆದುದರಿಂದ ಕೂಡಲೇ ಕೊಡವ ಜನಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಿ ಆ ಮೂಲಕ ಕೊಡವ ಜನಾಂಗದ ಅಭಿವೃದ್ಧಿಗೆ ಮುಂದಾಗಬೇಕೆAದು ಹಾಗೂ ಈಗಾಗಲೇ ಸ್ಥಾಪನೆ ಯಾಗಿರುವ ಒಕ್ಕಲಿಗರ ಅಭಿವೃದ್ಧಿ ನಿಗಮದ ಮೂಲಕ ಅರೆಭಾಷೆ ಗೌಡ ಜನಾಂಗದ ಅಭಿವೃದ್ಧಿಗೆ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.