ಸಿದ್ದಾಪುರ, ಸೆ.೧೮: ಪ್ರವಾಹದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ವಿವಿಧ ಸಂಘಸAಸ್ಥೆಗಳ ಹಾಗೂ ದಾನಿಗಳ ಮೂಲಕ ನಿರ್ಮಿಸಿದ ಮನೆಗಳನ್ನು ಹಸ್ತಾಂತರಿಸಲಾಯಿತು.

೨೦೧೯ ರಲ್ಲಿ ಕಾವೇರಿ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದ ಕುಟುಂಬಗಳ ಪೈಕಿ ಮೊದಲ ಹಂತದಲ್ಲಿ ೧೪ ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರಿಸಲಾಯಿತು.

ಸಿದ್ದಾಪುರ ಮುಸ್ಲಿಂ ಅಸೋಸಿಯೇಷನ್, ಜಮೀಯತ್ ಉಲಮಾ ಇ ಹಿಂದ್, ಇಮ್ದಾದ್ ಚಾರಿಟೇಬಲ್ ಟ್ರಸ್ಟ್, ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಸೇರಿದಂತೆ ಇತರ ಸೇವಾ ಸಂಘಟನೆಗಳ ಸಹಕಾರದೊಂದಿಗೆ ಸಿದ್ದಾಪುರದ ಮೈಸೂರು ರಸ್ತೆಯ ಮುಲ್ಲೆತೋಡು ಬಳಿ ನಿರ್ಮಿಸಲಾಗಿರುವ ಮೊದಲನೇ ಹಂತದ ೧೪ ಮನೆಗಳ ಕೀಯನ್ನು ಜಮೀಯತ್ ಉಲಮಾ ಇ ಹಿಂದ್ ರಾಷ್ಟಿçÃಯ ಅಧ್ಯಕ್ಷ ಮೌಲಾನಾ ಅರ್ಶಾದ್ ಮದನಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಕೊಡಗು ಜಿಲ್ಲಾ ಖಾಝಿ ಎಂ.ಎA ಅಬ್ದುಲ್ಲಾ ಫೈಝಿ ಪ್ರಾರ್ಥನೆ ನೆರವೇರಿಸಿದರು. ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಟಿ.ಸಿ ಸಿರಾಜುದ್ದೀನ್ ಸಭಾ

(ಮೊದಲ ಪುಟದಿಂದ) ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಯು.ಎಂ ಮುಸ್ತಫ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಪ್ರಥಮ ಹಂತದಲ್ಲಿ ೧೪ ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ೧೬ ಕುಟುಂಬಗಳಿಗೆ ಮನೆಯನ್ನು ನಿರ್ಮಿಸಿ ಕೊಡುವುದಾಗಿ ಸಿದ್ದಾಪುರ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ರಹೂಫ್ ಹಾಜಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಮೀಯತ್ ಉಲಮಾ ಇ ಹಿಂದ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಫ್ತಿ ಸೈಯ್ಯದ್ ಮಾಸೂಮ್ ಸಾಖಿಬ್, ಕರ್ನಾಟಕ ಅಧ್ಯಕ್ಷ ಮೌಲಾನಾ ಅಬ್ದುಲ್ ರಹೀಮ್ ರಾಸೀದಿ, ಚೆಸ್ಕಾಂ ಅಧಿಕಾರಿ ಸುರೇಶ್, ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ತುಳಸಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಇಖಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿ.ಕೆ. ಬಸೀರ್ ಹಾಜಿ, ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಕಾರ್ಯದರ್ಶಿ ಲತೀಫ್ ಹಾಜಿ, ಸಿದ್ದಾಪುರ ಜುಮಾ ಮಸೀದಿ ಖತೀಬ್ ನೌಫಲ್ ಹುದವಿ, ಸಂಶುಲ್ ಉಲಮಾ ಅಕಾಡಮಿ ಟ್ರಸ್ಟ್ ಅಧ್ಯಕ್ಷ ಬಶೀರ್ ಹಾಜಿ, ಸಿದ್ದಾಪುರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್ ಮೇದಪ್ಪ, ಪಾಲಿಬೆಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಸಿ ವಿಶ್ವನಾಥ್, ಬೆಳೆಗಾರ ಸಚಿನ್ ಪೊನ್ನಣ್ಣ, ಗುತ್ತಿಗೆದಾರ ವಿಜೇಶ್, ಟ್ರಸ್ಟ್ ಕಾಫಿಯ ಉಮ್ಮರ್ ಹಾಜಿ, ಉದ್ಯಮಿಗಳಾದ ಕೆ.ಯು ಮುಸ್ತಫಾ, ಪಿ.ಎಂ. ಶಮೀರ್, ಕೆ.ಬಿ. ಹಸೈನಾರ್, ಸೂಫಿ, ಪ್ರಮುಖರಾದ ಮುಹಮ್ಮದ್ ಆಲಿ, ಕರೀಮ್, ಅಸ್ಕರ್, ನವಾಸ್ ಸೇರಿದಂತೆ ಮತ್ತಿತರರು ಇದ್ದರು.