ಗುಡ್ಡೆಹೊಸೂರು, ಸೆ. ೧೬: ಬಸವನಹಳ್ಳಿಯ ಲ್ಯಾಂಪ್ಸ್ ಸಹಕಾರ ಸಂಘಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಭೇಟಿ ನೀಡಿದರು. ಇಲ್ಲಿನ ಸಹಕಾರ ಸಂಘದ ವತಿಯಿಂದ ಸಮುದಾಯ ಭವನ ನಿರ್ಮಿಸುವ ಯೋಜನೆಯಿದ್ದು, ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದರು. ಈ ಸಂದÀರ್ಭ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ, ಉಪಾಧ್ಯಕ್ಷ ಮನು, ನಿರ್ದೇಶಕರು, ಐ.ಟಿ.ಡಿ.ಪಿ. ಅಧಿಕಾರಿಗಳು, ಕಂದಾಯ ಇಲಾಖಾಧಿಕಾರಿ ಗೌತಮ್ ಮುಂತಾದವರು ಹಾಜರಿದ್ದರು.