ವೀರಾಜಪೇಟೆ: ವಿನಾಯಕ ಚತುರ್ಥಿ ದಿನದಂದು ಪ್ರತಿಷ್ಠಾಪನೆಗೊಂಡು ಮೂರು ದಿನಗಳ ಕಾಲ ಪೂಜೆಗೈದು ಸರಳ ರೀತಿಯಲ್ಲಿ ವಿಸರ್ಜನೆಗೊಂಡಿತ್ತು.
ವೀರಾಜಪೇಟೆ ನಗರದ ಮೂರ್ನಾಡು ರಸ್ತೆಯ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ ಮತ್ತು ಕದನೂರು ಶ್ರೀ ಸಿದ್ದಿ ವಿನಾಯಕ ಸೇವಾ ಸಮಿತಿಯ ವತಿಯಿಂದ ಪ್ರತಿಷ್ಠಾಪನೆಗೊಂಡ ಉತ್ಸವ ಮೂರ್ತಿಗಳನ್ನು ಮೂರು ದಿನಗಳ ಕಾಲ ತ್ರಿಕಾಲ ಪೊಜೆಯ ನಂತರ ವಿಸರ್ಜನೆಗೊಳಿಸಲಾಯಿತು. ಕಾವೇರಿ ಗಣೇಶೋತ್ಸವ ಸಮಿತಿಯ ವತಿಯಿಂದ ನಗರದ ಇತಿಹಾಸ ಪ್ರಸಿದ್ದ ಗೌರಿ ಕೆರೆಯಲ್ಲಿ ಉತ್ಸವ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಕದನೂರು ಭಾಗದ ಸಿದ್ದಿ ವಿನಾಯಕ ಸೇವಾ ಸಮಿತಿಯ ವತಿಯಿಂದ ತಮ್ಮ ಕದನೂರು ಹೊಳೆಯಲ್ಲಿ ಉತ್ಸವ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.ಕೂಡಿಗೆ: ಕೂಡಿಗೆ ಡೈರಿ ಕಾರ್ಮಿಕ ಸಂಘಟನೆ ವತಿಯಿಂದ ಗಣೇಶ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ವಿಶೇಷ ಪೂಜೆಯೊಂದಿಗೆ ಡೈರಿ ಆವರಣದಲ್ಲಿ ನಡೆಯಿತು.
ಡೈರಿ ಆವರಣದಲ್ಲಿ ಪೂಜಾ ಕಾರ್ಯಕ್ರಮ ನಡೆದ ನಂತರ ಗಣೇಶ ವಿಗ್ರಹವನ್ನು ಕುಳ್ಳಿರಿಸಿ ಸಮೀಪದ ಹಾರಂಗಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಈ ಸಂದರ್ಭ ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ಕುಮಾರ್, ಹಾಸನ ಡೈರಿ ಪ್ರಧಾನ ವ್ಯವಸ್ಥಾಪಕ ಜಿ.ಎಸ್. ಗೋವಿಂದರಾಜ್, ಮಾಜಿ ಒಕ್ಕೂಟದ ನಿರ್ದೇಶಕ ಕೆ.ಟಿ. ಅರುಣ್ಕುಮಾರ್, ಹಾರಂಗಿ ಭದ್ರತಾ ಪಡೆಯ ಪೊಲೀಸ್ ವೃತ್ತ ನಿರೀಕ್ಷಕ ಚಂದ್ರಶೇಖರ್, ಕೂಡಿಗೆ ಡೈರಿ ಮ್ಯಾನೇಜರ್ ನಂದೀಶ್, ಹಿರಿಯ ಅಧಿಕಾರಿ ವರ್ಗದವರು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.