ನಾಪೋಕ್ಲು, ಸೆ. ೧೬: ಸಮೀಪದ ಇತಿಹಾಸ ಪ್ರಸಿದ್ಧ ಕೊಳಕೇರಿ ಮಖಾಂ ವಾರ್ಷಿಕ ಉರೂಸ್ ೨೦೨೨ ಫೆ. ೬ ರಿಂದ ೮ ರವರೆಗೆ ನಡೆಯಲಿದೆ ಎಂದು ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್ ಪ್ರಕಟಣೆಯಲ್ಲಿ ತಿಳಿಸಿದೆ.
ನಾಪೋಕ್ಲು ಸಮೀಪದ ಚೆರಿಯಪರಂಬಿನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಶಹೀದ್ ಅಬ್ದುಲ್ ರಹ್ಮಾನ್ ವಲಿಯುಲ್ಲಾಹಿ ಹಾಗೂ ಅವರ ಸಮೀಪದಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ಪ್ರಸಿದ್ಧ ಮಖಾಂ ಉರೂಸ್ ೨೦೨೨ ಫೆ. ೧೮ ರಿಂದ ೨೨ ರವರೆಗೆ ನಡೆಯಲಿದೆ ಎಂದು ಚೆರಿಯಪರಂಬು ಜಮಾಅತ್ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.