ಮಡಿಕೇರಿ, ಸೆ. ೧೬: ಸುಳ್ಯದ ಕೆ.ವಿ.ಜಿ. ಇಂಜಿನಿಯರಿAಗ್ ಕಾಲೇಜಿನಲ್ಲಿ ಪ್ರೊಫೆಸರ್ ಹಾಗೂ ವಿದ್ಯಾರ್ಥಿ-ಕ್ಷೇಮಾಧಿಕಾರಿಯಾಗಿ ಕಳೆದ ೩೨ ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ರಾಮು ಎಸ್. ಹಾಗೂ ಕೆ.ವಿ.ಜಿ. ಅಮರಜ್ಯೋತಿ ಪಿ.ಯು. ಕಾಲೇಜಿನಲ್ಲಿ ಅಧ್ಯಾಪಕಿ ಯಾಗಿ ಸೇವೆ ಸಲ್ಲಿಸಿದ ಮಮತ ಅವರಿಗೆ ಸನ್ಮಾನ ಹಾಗೂ ವಿದಾಯ ಸಮಾರಂಭ ಇತ್ತೀಚೆಗೆ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಎ. ಜ್ಞಾನೇಶ್ ಹಾಗೂ ಕೆ.ವಿ.ಜಿ. ಅಮರಜ್ಯೋತಿ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋದಾ ರಾಮಚಂದ್ರ ಅವರನ್ನು ಸನ್ಮಾನಿಸಿದರು. ವಿ.ಟಿ.ಯು. ವಿಶ್ವ ವಿದ್ಯಾಲಯದ ಮಂಗಳೂರು ವಿಭಾಗದ ವಿಶೇಷಾಧಿ ಕಾರಿಯಾಗಿರುವ ಡಾ. ಶಿವಕುಮಾರ್ ಹೆಚ್. ಆರ್. ಅವರು ಅಭಿನಂದನಾ ಭಾಷಣ ಮಾಡಿದರು. ಕೆ.ವಿ.ಜಿ. ಅಮರಜ್ಯೋತಿ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋದಾ ರಾಮಚಂದ್ರ ಅವರು ಮಮತಾ ಅವರ ಬೀಳ್ಕೊಡುಗೆ ಮಾತುಗಳನ್ನಾಡಿದರು. ಡಾ. ರಾಮು ಎಸ್. ಹಾಗೂ ಮಮತಾ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಎ. ಜ್ಞಾನೇಶ್ ಮಾತನಾಡಿದರು. ಕೃಷ್ಣರಾಜ್ ಎಂ.ವಿ. ಅಸಿಸ್ಟೆಂಟ್ ಪ್ರೊಫೆಸರ್, ಸಿವಿಲ್ ಇಂಜಿನಿಯರಿAಗ್ ವಿಭಾಗ ಪ್ರಾರ್ಥಿಸಿ, ಡಾ. ಶ್ರೀಧರ್ ಕೆ. ಉಪ ಪ್ರಾಂಶುಪಾಲರು ಸ್ವಾಗತಿಸಿದರು. ಡಾ. ಚಂದ್ರಶೇಖರ್ ಎ. ಪ್ರೊಫೆಸರ್ ಮತ್ತು ಮುಖ್ಯಸ್ಥರು, ಸಿವಿಲ್ ಇಂಜಿನಿ ಯರಿಂಗ್ ವಿಭಾಗ ವಂದನಾ ರ್ಪಣೆಗೈದರು.

ಸಿವಿಲ್ ಇಂಜಿನಿಯ ರಿಂಗ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್‌ಗಳಾದ ಶೃತಿ ಪಿ.ಜೆ ಮತ್ತು ಡಾ. ಲೇಖಾ ಬಿ.ಎಂ. ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ರಾದ ಡಾ. ಶ್ರೀಧರ್ ಕೆ., ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ., ಸಿವಿಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ. ಚಂದ್ರಶೇಖರ್ ಎ, ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಸೇರಿದಂತೆ ಇತರ ವಿಭಾಗದ ಮುಖ್ಯಸ್ಥರು ಹಾಜರಿದ್ದರು.