ಮಡಿಕೇರಿ, ಸೆ. ೧೬: ಸಾಮಾಜಿಕ ಕಳಕಳಿಯೊಂದಿಗೆ ಸ್ಥಾಪನೆಗೊಂಡಿರುವ ಗೆಳೆಯರ ಬಳಗದ ನಿಸ್ವಾರ್ಥ ಸೇವೆ, ಸಮಾಜಕ್ಕೆ ಅರ್ಥಪೂರ್ಣವಾಗಿ ಬಳಕೆಯಾಗುವಂತಿರಲಿಯೆAದು ಕೊಡವ ಭಾಷಿಕ ಸಮುದಾಯಗಳ ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಶುಭ ಕೋರಿದರು.
ನೆಹರೂ ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗ್ರಾಮ ಪಂಚಾಯಿತಿ ನಾಪೋಕ್ಲು, ಕೊಡಗು, ತಾಲೂಕು ಯುವ ಒಕ್ಕೂಟ ಹಾಗೂ ಪಿಎಜಿ ಗೆಳೆಯರ ಬಳಗದ ಆಶ್ರಯದಲ್ಲಿ ಬೇತು ಗ್ರಾಮದಲ್ಲಿ ಜರುಗಿದ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ವೈಜ್ಞಾನಿಕ ಯುಗದಲ್ಲಿ, ಸಮಾಜದ ಅಭಿವೃದ್ಧಿ, ಸಾಮರಸ್ಯಗಳ ನಿವಾರಣೆ, ಹೊಂದಾಣಿಕೆಯ ಸಹಬಾಳ್ವೆಯ ಬದುಕು, ಶಾಂತಿ - ನೆಮ್ಮದಿಯ ಸಮಾಜ ನಿರ್ಮಿಸಲು ಸಂಘ - ಸಂಸ್ಥೆ, ಬಳಗದ ಜವಾಬ್ದಾರಿ ಪ್ರಮುಖವಾದದ್ದು. ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಬಳಗ ಸಮಾಜಕ್ಕೆ ಮಾದರಿಯಾಗಿ, ರಾಷ್ಟçಮಟ್ಟದಲ್ಲಿ ಹೆಸರು ಗಳಿಸುವಂತಾಗಲಿಯೆAದು ಆಶಿಸಿದರು.
ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಇಲಾಖಾ ವತಿಯಿಂದ ನೀಡಲಾಗುವ ಕಾರ್ಯಗಳನ್ನು ಗ್ರಾಮೀಣ ಪ್ರದೇಶದ ಸಂಘ-ಸAಸ್ಥೆಯ ಮೂಲಕ ಆಯೋಜಿಸಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ರಕ್ತದಾನ ಮಾಡುವುದರ ಮೂಲಕ ಜೀವವನ್ನು ಉಳಿಸುವಲ್ಲಿ ಯುವ ಪದಾಧಿಕಾರಿಗಳು ಪ್ರೇರಣೆಯಾಗಬೇಕೆಂದು ನುಡಿದರು. ವೇದಿಕೆಯಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯೆ ಪಾತಂಡ ಯಶೋಧ ಜೋಯಪ್ಪ, ಬಳಗದ ಅಧ್ಯಕ್ಷ್ಷ ಎ.ಎಂ. ಪೂಣಚ್ಚ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹೋಬಳಿ ಮಟ್ಟದ ಕ್ರೀಡಾ ಕೂಟದ ಸಾರ್ವಜನಿಕ ವಿಭಾಗದ ಮುಕ್ತ ಓಟವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎಸ್. ಪಾರ್ವತಿ ಹಾಗೂ ಸದಸ್ಯ ಕಾಳೆಯಂಡ ಸಾಬ ತಿಮ್ಮಯ್ಯ ಉದ್ಘಾಟಿಸಿದರು. ಬಳಿಕ ಗ್ರಾಮದ ಜನತೆಗೆ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸ ಲಾಯಿತು. ವಿಜೇತ ಕ್ರೀಡಾಪಟುಗಳಿಗೆ ಆಕರ್ಷಕ ಟ್ರೋಫಿ, ನಗದು ಹಾಗೂ ದೃಢೀಕರಣ ಪತ್ರವನ್ನು ವಿತರಿಸಲಾಯಿತು. ಆಲಚಂಡ ಮೀರ ತಮ್ಮಯ್ಯ ಪ್ರಾರ್ಥಿಸಿದರು. ಬಳಗದ ಸದಸ್ಯ ಉಮೇಶ್ ಸ್ವಾಗತಿಸಿ, ಕಾರ್ಯದರ್ಶಿ ಮಿಟ್ಟು ಸೋಮಯ್ಯ ನಿರೂಪಿಸಿದರು. ಸದಸ್ಯ ಪಾತಂಡ ರಂಜನ್ ಸಂತೋಷ್ ವಂದಿಸಿದರು.