ಮಡಿಕೇರಿ, ಸೆ. ೧೭: ನೂತನವಾಗಿ ರಚನೆಯಾಗಿರುವ ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕು ಕಚೇರಿಗಳಿಗೆ ಅಗತ್ಯ ಸಿಬ್ಬಂದಿಗಳ ನೇಮಕಕ್ಕೆ ಸಂಬAಧಿಸಿದAತೆ ಮೇಲ್ಮನೆಯಲ್ಲಿ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಪ್ರಶ್ನಿಸಿದರು.
೨ ತಾಲೂಕುಗಳಿಗೆೆ ಮಂಜೂರಾಗಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಂಖ್ಯೆ ಎಷ್ಟು.?, ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಲು ಸರಕಾರ ಕೈಗೊಂಡ ಕ್ರಮಗಳೇನು.? ಪೂರ್ಣ ಪ್ರಮಾಣದಲ್ಲಿ ಕಚೇರಿಗಳಿಗೆ ಸಿಬ್ಬಂದಿಗಳ ನೇಮಕದ ಬಗ್ಗೆ ಸುನಿಲ್ ಅಧೀವೇಶನದಲ್ಲಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವರು, ಪೊನ್ನಂಪೇಟೆ ತಾಲೂಕು ಕಚೇರಿಗೆ ತಹಶೀಲ್ದಾರ್, ೨ ಪ್ರಥಮ ದರ್ಜೆ ಸಹಾಯಕ ಹುದ್ದೆ, ೧ ಆಹಾರ ನಿರೀಕ್ಷಕರು, ೩ ದ್ವಿತೀಯ ದರ್ಜೆ ಸಹಾಯಕರು, ೧ ಬೆರಳಚ್ಚುಗಾರರು, ೧ ವಾಹನ ಚಾಲಕರು, ೨ ಡಿ ಗ್ರೂಪ್ ನೌಕರರ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ವೀರಾಜಪೇಟೆ ತಹಶೀಲ್ದಾರ್ ಅನ್ನು ಪೊನ್ನಂಪೇಟೆಗೆ ಹೆಚ್ಚುವರಿ ಪ್ರಬಾರದಲ್ಲಿಡಲಾಗಿದೆ. ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ವೀರಾಜಪೇಟೆ ತಾಲೂಕು ಕಚೇರಿಯಿಂದ ನಿಯೋಜನೆ ಮಾಡಲಾಗಿದೆ. ಹೊರಗುತ್ತಿಗೆ ಆಧಾರದ ಹುದ್ದೆಗಳನ್ನು ಅನುದಾನದ ಲಭ್ಯತೆಯನ್ನು ಆದರಿಸಿ ಭರ್ತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕುಶಾಲನಗರ ತಾಲೂಕು ಕಚೇರಿಗೆ ತಹಶೀಲ್ದಾರ್, ಶಿರಸ್ತೇದಾರ್, ೨ ಪ್ರಥಮ ದರ್ಜೆ ಸಹಾಯಕರು, ೧ ಆಹಾರ ನಿರೀಕ್ಷಕರು, ೩ ದ್ವಿತೀಯ ದರ್ಜೆ ಸಹಾಯಕರು, ಹೊರಗುತ್ತಿಗೆ ಆಧಾರದ ಮೇಲೆ ೧ ಬೆರಳಚ್ಚುಗಾರರು, ೧ ವಾಹನ ಚಾಲಕರು, ೨ ಗ್ರೂಪ್ ಡಿ ನೌಕರರ ಹುದ್ದೆಗಳು ಮಂಜೂರಾಗಿದೆ. ಈ ಪೈಕಿ ತಹಶೀಲ್ದಾರ್, ಶಿರಸ್ತೇದಾರ್ ಹುದ್ದೆ ಭರ್ತಿಯಾಗಿದೆ. ೨ ಪ್ರಥಮ ದರ್ಜೆ ಸಹಾಯಕರ ಪೈಕಿ ಸೋಮವಾರಪೇಟೆ ತಾಲೂಕು ಕಚೇರಿಯಿಂದ ಒಬ್ಬರನ್ನು ಮತ್ತು ೩ ದ್ವಿತೀಯ ದರ್ಜೆ ಸಹಾಯಕರನ್ನು ನಿಯೋಜಿಸಲಾಗಿದೆ. ಹೊರಗುತ್ತಿಗೆ ಆಧಾರದ ಹುದ್ದೆಗಳನ್ನು ಅನುದಾನದ ಲಭ್ಯತೆಯನ್ನು ಆಧರಿಸಿ ಭರ್ತಿ ಮಾಡಲಾಗುವುದು ಎಂದು ವಿವರಿಸಿದರು.
ಖಾಲಿ ಹುದ್ದೆಗಳಿಗೆ ಕಾಲಕಾಲಕ್ಕೆ ನಡೆಯುವ ನೇಮಕಾತಿ, ಮುಂಬಡ್ತಿ ಹಾಗೂ ವರ್ಗಾವಣೆ ಸಂದರ್ಭದಲ್ಲಿ ಭರ್ತಿ ಮಾಡಲು ಕ್ರಮವಹಿಸಲಾಗುವುದು. ಪೂರ್ಣ ಪ್ರಮಾಣದಲ್ಲಿ ಹುದ್ದೆಗಳನ್ನು ಭರ್ತಿ ಮಾಡುವ ವಿಷಯವೂ ಸರಕಾರದ ಆರ್ಥಿಕ ಪರಿಸ್ಥಿತಿಯನ್ನು ಸಹ ಅವಲಂಬಿಸಿರುವುದರಿAದ ಕಾಲಮಿತಿಯನ್ನು ನಿಗದಿಪಡಿಸುವುದು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.