ಬೆಂಗಳೂರು, ಸೆ. ೧೭: ಹೇಮಾವತಿ ಹಿನ್ನೀರಿನಿಂದ ಪುನರ್ವಸತಿ ಪಡೆದಿರುವ ಕೊಡಗು ಜಿಲ್ಲೆಯ ರೈತರ ಮೂಲಭೂತ ಸೌಲಭ್ಯಕ್ಕಾಗಿ ಸರಕಾರ ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಗೆ ಎಷ್ಟು ಅನುದಾನ ಬಿಡುಗಡೆಗೊಳಿಸಿದೆ. ಬಿಡುಗಡೆಗೊಳಿಸಿದ ಅನುದಾನದಲ್ಲಿ ಯಾವ ಯಾವ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಸದನದಲ್ಲಿ ಪ್ರಶ್ನಿಸಿದರು.

ಈ ಹಿನ್ನೀರಿನಿಂದ ಭೂಮಿ ಕಳೆದುಕೊಂಡು ಪುನರ್ವಸತಿ ಹೊಂದಿರುವ ಕೊಡ್ಲಿಪೇಟೆ ಹೋಬಳಿಯಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅನುದಾನ ಕೋರಿ ಬಂದಿರುವ ಅರ್ಜಿಗಳ ಸಂಖ್ಯೆ ಎಷ್ಟು. ಈ ಪೈಕಿ ಎಷ್ಟು ದೇವಸ್ಥಾನಗಳಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ.

ಉಳಿದ ದೇವಸ್ಥಾನಗಳಿಗೆ ಯಾವಾಗ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಅವರು ಪ್ರಶ್ನಿಸಿದ್ದರು. ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಗೊಂಡು ಪುನರ್ವಸತಿ ಕಲ್ಪಿಸಿರುವ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯ ಇಲ್ಲದೆ ತೊಂದರೆಯಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆಯೇ.

ಮೂಲಭೂತ ಸೌಲಭ್ಯಕ್ಕಾಗಿ ಸರಕಾರ ನಿಗದಿಪಡಿಸಿರುವ ಅನುದಾನ ಎಷ್ಟು ಎಂದು ಪ್ರಶ್ನಿಸಿದ್ದರು. ಅವರ ಪ್ರಶ್ನೆಗೆ ಸದನದಲ್ಲಿ ದೊರೆತ ಉತ್ತರ ಈ ಕೆಳಗಿನಂತಿದೆ. ಕೊಡ್ಲಿಪೇಟೆ ಹೋಬಳಿಯ ಗ್ರಾಮದ ರೈತರ ಜಮೀನುಗಳು ಹೇಮಾವತಿ ಹಿನ್ನೀರಿನಿಂದ ಮುಳುಗಡೆಯಾಗಿದ್ದು, ಸದರಿ ಗ್ರಾಮಗಳ ರೈತರ ಮೂಲಭೂತ ಸೌಕರ್ಯಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ ಬಿಡುಗಡೆ ಮಾಡಲಾದ ಅನುದಾನದ ವಿವರ ಕೆಳಕಂಡAತಿದೆ.

೨೦೧೮-೧೯ ರಲ್ಲಿ ರೂ. ೪.೦೫ ಕೋಟಿ, ೨೦೧೯-೨೦ ರಲ್ಲಿ ರೂ. ೩.೩೨ ಕೋಟಿ ಹಾಗೂ ೨೦೨೦-೨೧ ರಲ್ಲಿ ರೂ. ೨.೭೨ ಕೋಟಿ ಹೀಗೆ ಒಟ್ಟು ರೂ. ೧೦.೦೯ ಕೋಟಿ.

ಹಿನ್ನೀರಿನಿಂದ ಭೂಮಿ ಕಳೆದುಕೊಂಡು ಪುನರ್ವಸತಿ ಹೊಂದಿರುವ ಕೊಡ್ಲಿಪೇಟೆ ಹೋಬಳಿಯಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅನುದಾನ ಕೋರಿ ಒಟ್ಟು ೧೧ ಅರ್ಜಿಗಳು ಬಂದಿರುತ್ತವೆ.

ಈ ಪೈಕಿ ೮ ಸಂಖ್ಯೆ ದೇವಸ್ಥಾನಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅನುಷ್ಟಾನಗೊಳಿಸಲಾಗಿದೆ. ಉಳಿಕೆ ೩ ದೇವಸ್ಥಾನದ ನಿರ್ಮಾಣ ಕಾಮಗಾರಿಗಳಿಗೆ ೨೦೧೮-೧೯ನೇ ಸಾಲಿನಲ್ಲಿಯೇ ಟೆಂಡರ್ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ನಂತರ ಸದರಿ ಕಾಮಗಾರಿಗಳನ್ನು ಓoಟಿ-ಉಡಿouಟಿಜ Woಡಿಞ ಗುಂಪಿಗೆ ಸೇರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅನುದಾನದ ಲಭ್ಯತೆಯನುಸಾರ ಸದರಿ ಕಾಮಗಾರಿಗಳನ್ನು ನಿಯಮಾನುಸಾರ ಕೈಗೆತ್ತಿಕೊಂಡು ಅನುಷ್ಟಾನಗೊಳಿಸಲಾಗುವುದು.

ಹಾರಂಗಿ ಜಲಾಶಯದ ವ್ಯಾಪ್ತಿಯಲ್ಲಿ ಜಲಾಶಯ ಹಿನ್ನೀರಿನಲ್ಲಿ ಮುಳುಗಡೆಗೊಂಡ ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸಿ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ಕಾವೇರಿ ನೀರಾವರಿ ನಿಗಮದ ವತಿಯಿಂದ ಜಲಾಶಯದ ಹಿನ್ನೀರಿನಿಂದ ೧೨ ಗ್ರಾಮಗಳಾದ ಹರಹೊಳೆ, ಅತ್ತೂರು, ಯಡವನಾಡು, ಹಂದ್ರೆ, ಹೆರೂರು, ಜಂಬೂರು, ಮಾಲೂರು, ಗರಗಂದೂರು, ನಾಕೂರು-ಶಿರಂಗಾಲ.

ಅಬಕಾರಿ ಪ್ರಕರಣ

ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಕಳ್ಳಭಟ್ಟಿ ಪ್ರಕರಣಗಳು ದಾಖಲಾಗಿವೆ. ಅಕ್ರಮ ಕಳ್ಳಭಟ್ಟಿ ಪ್ರಕರಣ ತಡೆಯಲು ಸರಕಾರ ತೆಗೆದುಕೊಂಡ ಕ್ರಮವೇನು ಎಂದು ರಂಜನ್ ಅವರು ಪ್ರಶ್ನಿಸಿದರು. ಅಲ್ಲದೆ ಅಕ್ರಮ ಮದ್ಯ ಮಾರಾಟ ಸಂಬAಧ ಈ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಎಷ್ಟು ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಕೇಳಿದರು. ಕೊಡಗು ಜಿಲ್ಲೆಯಲ್ಲಿ ಕಳೆದ ೩ ವರ್ಷಗಳಲ್ಲಿ ೫೧ ಅಕ್ರಮ ಕಳ್ಳಭಟ್ಟಿ ಪ್ರಕರಣಗಳು ದಾಖಲಾಗಿವೆ ಎಂದು ಅಬಕಾರಿ ಸಚಿವರು ತಿಳಿಸಿದರು.

ಇಲಾಖೆಯು ಅಕ್ರಮ ಕಳ್ಳಭಟ್ಟಿ ತಯಾರಿಕೆ ಮತ್ತು ಮಾರಾಟ ಮಾಡುವುದನ್ನು ತಡೆಗಟ್ಟಲು ಅಬಕಾರಿ ಕಾಯ್ದೆ ಮತ್ತು ತತ್ಸಂಬAಧ ನಿಯಮಗಳ ಜಾರಿಗೊಳಿಸುವಿಕೆ, ಕ್ರಮಗಳನ್ನು ಚುರುಕುಗೊಳಿಸಿ ಅಂತಹವರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ ಎಂದರು.

ಕೊಡಗು ಜಿಲ್ಲೆಯಲ್ಲಿ ಕಳೆದ ೩ ವರ್ಷಗಳಲ್ಲಿ ಅಕ್ರಮ ಮದ್ಯ ಮಾರಾಟ ಸಂಬAಧ ದಾಖಲಿಸಿದ ಪ್ರಕರಣಗಳೂ ಸೇರಿದಂತೆ ೨೦೧೮-೧೯ ರಲ್ಲಿ ೩೪, ೨೦೧೯-೨೦ ರಲ್ಲಿ ೪, ೨೦೨೦-೨೧ ರಲ್ಲಿ ೧೯ ಹೀಗೆ ಒಟ್ಟು ೫೭. ಒಟ್ಟು ೧೦೨೯ ಪ್ರಕರಣಗಳಿಂದ ೯ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮಾಹಿತಿಯಿತ್ತರು.

ಭಗಂಡೇಶ್ವರ - ತಲಕಾವೇರಿ

ಭಗಂಡೇಶ್ವರ ಮತ್ತು ತಲಕಾವೇರಿ ದೇಗುಲಗಳ ಕುರಿತು ಶಾಸಕ ಅಪ್ಪಚ್ಚು ರಂಜನ್ ಪ್ರಶ್ನಿಸಿದರು. ದೇವಾಲಯದ ಸಿಬ್ಬಂದಿ ವೇತನ ವೆಚ್ಚ, ದೇವಾಲಯದ ವಾರ್ಷಿಕ ಆದಾಯದ ಶೇ. ೩೫ ರಷ್ಟನ್ನು ಮೀರುವುದಿಲ್ಲವೇ. ಈ ಕುರಿತು ೨೦೨೦-೨೧ ಹಾಗೂ ೨೦೨೧-೨೨ ರ ಆದಾಯ ವಿವರ ನೀಡಬೇಕು ಎಂದರು. ಅಲ್ಲದೆ ಸಿಬ್ಬಂದಿ ಮಾದರಿಯ ವಿವಿಧ ಹುದ್ದೆಗಳ ಕಾರ್ಯಭಾರ - ಕಾರ್ಯವ್ಯಾಪ್ತಿ ವಿವರ ಮಾಹಿತಿ ಬಯಸಿದರು. ಹೊರ ಗುತ್ತಿಗೆಯಲ್ಲಿ ನಿರ್ವಹಿಸಬಹುದಾದ ಹಾಗೂ ತಾತ್ಕಾಲಿಕ ನೆಲೆಯಲ್ಲಿ ನಿರ್ವಹಿಸಬಹುದಾದ ಹುದ್ದೆಗಳನ್ನು ಹೊರತುಪಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಈ ಕುರಿತಾಗಿ ಮುಜರಾಯಿ ಸಚಿವರು ನೀಡಿದ ಉತ್ತರ ಹೀಗಿದೆ. ತಲಕಾವೇರಿ-ಭಾಗಮಂಡಲಗಳಲ್ಲಿ ೨೦೨೦-೨೧ ರಲ್ಲಿ ರೂ. ೧,೧೫,೧೮,೪೪೮ ಆದಾಯ ದೊರೆತಿದ್ದು, ಈ ಪೈಕಿ ಸಿಬ್ಬಂದಿ ವೆಚ್ಚ ರೂ. ೨೬,೫೬,೨೯೭ ಹಾಗೂ ಇತರ ವೆಚ್ಚ ರೂ. ೮೧,೧೭,೪೧೬ ಆಗಿದೆ. ಸಿಬ್ಬಂದಿ ವೆಚ್ಚ ಒಟ್ಟು ವೆಚ್ಚದ ಪೈಕಿ ಶೇ. ೨೩ ಮಾತ್ರ ಆಗಿದೆ.

ಅದೇರೀತಿ ೨೦೨೧-೨೨ ರಲ್ಲಿ ಒಟ್ಟು ಆದಾಯ ರೂ. ೨,೩೮,೯೪,೫೨೨. ಈ ಪೈಕಿ ರೂ. ೨೯,೩೭,೪೫೨ ಸಿಬ್ಬಂದಿ ವೆಚ್ಚಕ್ಕೆ ವಿನಿಯೋಗಿಸಲಾಗಿದ್ದು, ಇತರ ಖರ್ಚು ರೂ. ೨,೧೧,೫೭,೧೧೮ ಆಗಿದ್ದು, ಸಿಬ್ಬಂದಿ ವೇತನ ಶೇ. ೧೨ ಮಾತ್ರ ಆಗಿರುವುದಾಗಿ ಮಾಹಿತಿಯಿತ್ತರು.

ಮಡಿಕೇರಿ ಶ್ರೀ ಓಂಕಾರೇಶ್ವರ ದೇಗುಲದಲ್ಲಿ ೨೦೨೦-೨೧ ರಲ್ಲಿ ರೂ. ೭೦,೦೮,೩೭೨ ಆದಾಯ ದೊರೆತಿದ್ದು, ರೂ. ೮,೩೮,೭೦೪ ವನ್ನು ಸಿಬ್ಬಂದಿ ವೆಚ್ಚಕ್ಕಾಗಿ ವಿನಿಯೋಗಿಸಲಾಗಿದೆ. ಇತರ ಖರ್ಚಿಗಾಗಿ ರೂ. ೬೧,೬೯,೬೬೮ ಬಳಕೆಯಾಗಿದೆ.

ಸಿಬ್ಬಂದಿ ವೇತನಕ್ಕೆ ಬಳಕೆಯಾದ ಪ್ರಮಾಣ ಶೇ. ೧೨ ಮಾತ್ರ. ಅದೇರೀತಿ ೨೦೨೧-೨೨ ರಲ್ಲಿ ಒಟ್ಟು ಆದಾಯ ರೂ. ೪೫,೪೯,೧೦೭ ದೊರೆತಿದ್ದು, ಸಿಬ್ಬಂದಿ ವೇತನಕ್ಕೆ ರೂ. ೧೦,೧೨,೭೦೪ ಹಾಗೂ ಇತರ ಖರ್ಚಿಗಾಗಿ ರೂ. ೩೫,೩೬,೪೦೩ ವಿನಿಯೋಗವಾಗಿದೆ. ವೇತನದ ವೆಚ್ಚ ಶೇ. ೨೨ ಮಾತ್ರ ಆಗಿದೆ.

ತಲಕಾವೇರಿ-ಭಾಗಮಂಡಲ ಗಳಲ್ಲಿ ಒಟ್ಟು ೩೧ ಮಂದಿ ಉದ್ಯೋಗಿಗಳಿದ್ದರೆ, ಮಡಿಕೇರಿ ಓಂಕಾರೇಶ್ವರದಲ್ಲಿ ಒಟ್ಟು ೧೩ ಮಂದಿ ಉದ್ಯೋಗಿಗಳಿರುವುದಾಗಿ ಸಚಿವರು ಸದನದಲ್ಲಿ ಮಾಹಿತಿಯಿತ್ತರು.