ಮಡಿಕೇರಿ, ಸೆ. ೧೫: ಇತ್ತೀಚೆಗೆ ಟೋಕಿಯೋ ಒಲಂಪಿಕ್ಸ್ನಲ್ಲಿ ಪಾಲ್ಗೊಂಡು ದೇಶವನ್ನು ಪ್ರತಿನಿಧಿಸಿರುವ ಕೊಡಗಿನ ಇನ್ನಿಬ್ಬರು ಕ್ರೀಡಾಪಟುಗಳನ್ನು ರಾಜ್ಯ ಸರಕಾರದ ಮೂಲಕ ಗೌರವಿಸಿ ಸನ್ಮಾನಿಸುವಂತೆ ಒತ್ತಾಯಿಸಿ ಕೊಡವಾಮೆ ಸಂಘಟನೆ ಮೂಲಕ ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಅವರಿಗೆ ಮನವಿ ಸಲ್ಲಿಸಿದೆ.

ನಿನ್ನೆ ಬೆಂಗಳೂರಿನಲ್ಲಿ ಹಾಕಿ ಕರ್ನಾಟಕ ಮೂಲಕ ನಡೆದ ಸಮಾರಂಭದ ಸಂದರ್ಭ ಸಚಿವರನ್ನು ಭೇಟಿ ಮಾಡಿದ ಕೊಡವಾಮೆ ಸಂಘಟನೆಯ ಉದಿಯಾಂಡ ರೋಷನ್,

(ಮೊದಲ ಪುಟದಿಂದ) ಬಲ್ಲಿಯಾಡ ಮೋಹನ್ ದೇವಯ್ಯ ಸೇರಿದಂತೆ ಹಾಕಿ ಕರ್ನಾಟಕದ ಪ್ರಮುಖರು, ಹಾಕಿ ಆಟಗಾರರಾದ ಕರ್ತಮಾಡ ರಿಕ್ಕಿ ಗಣಪತಿ, ಕೂತಂಡ ಪೂಣಚ್ಚ, ಬೊಳ್ಳೆಪಂಡ ಜೆ. ಕಾರ್ಯಪ್ಪ, ಕಾಂಡAಡ ಅಪ್ಪಣ್ಣ, ಕನ್ನಂಬಿರ ದಿಲೀಪ್, ಕೂಪದಿರ ಗಣಪತಿ, ಡಾ. ಎ.ಬಿ. ಸುಬ್ಬಯ್ಯ, ವಿ.ಆರ್. ರಘುನಾಥ್, ಪಾಂಡAಡ ಅಯ್ಯಪ್ಪ ಮತ್ತಿತರರು ಕ್ರೀಡಾ ಸಚಿವರಿಗೆ ಮನವಿ ಸಲ್ಲಿಸಿದರು.

ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಬಿ.ಎಸ್. ಅಂಕಿತಾ ಅವರನ್ನು ಪರಿಗಣಿಸಿರುವಂತೆ, ದೇಶವನ್ನು ಪ್ರತಿನಿಧಿಸಿರುವ ಕರ್ನಾಟಕದವರೇ ಆದ ಕೊಡಗಿನವರಾದ ಭಾರತ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಚೇನಂಡ ಎ. ಕುಟ್ಟಪ್ಪ, ಸೇಯ್ಲಿಂಗ್ ಪಟು ಕೇಳಪಂಡ ಸಿ. ಗಣಪತಿ ಅವರುಗಳನ್ನೂ ಗುರುತಿಸಿ ಸರಕಾರ ಗೌರವಿಸುವಂತೆ ಸಚಿವರಲ್ಲಿ ಒತ್ತಾಯಿಸಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಇವರಿಬ್ಬರನ್ನೂ ಸರಕಾರದಿಂದ ಗೌರವಿಸಲಾಗುವುದು ಎಂದು ಭರವಸೆಯಿತ್ತರು.

ಈ ಸಂದರ್ಭ ರಾಜ್ಯ ಒಲಂಪಿಕ್ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜು ಹಾಜರಿದ್ದರು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗುವುದು ಎಂದು ರೋಷನ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.