ಮಡಿಕೇರಿ, ಸೆ. ೧೭: ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಹಾಸನ ಜಿಲ್ಲಾ ಪ್ಲಾಂರ‍್ಸ್ ಸಂಘದ ನಿಯೋಗವು ತಾ.೧೫ ರಂದು ರಾಜ್ಯ ಅರಣ್ಯ ಸಚಿವ ಉಮೇಶ್ ಕತ್ತಿ ಅವರನ್ನು ಭೇಟಿ ಮಾಡಿ ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿತ್ತು.

ಕಾಫಿ ಬೆಳೆಯುವ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಳೆದ ಕೆಲ ವರ್ಷಗಳಿಂದ ಕಾಡಾನೆಗಳು ನಿರಂತರವಾಗಿ ದಾಳಿ ನಡೆಸುತ್ತಾ ಬಂದಿದ್ದು, ಬೆಳೆಗಾರರ ಫಸಲು ನಾಶದ ಜೊತೆಗೆ ಪ್ರಾಣಭಯದಿಂದ ಜೀವನ ಸಾಗಿಸುವಂತಾಗಿದೆ. ಈಗಾಗಲೇ ಮೂರು ಜಿಲ್ಲೆಗಳಿಂದ ಸುಮಾರು ೧೫೦ ಮಂದಿ ಕಾಡಾನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ಅಪಾರ ಪ್ರಮಾಣದ ಕಾಫಿ, ಕಾಳುಮೆಣಸು, ಬಾಳೆ, ಭತ್ತ, ಹಾಗೂ ಅಡಿಕೆ ಬೆಳೆಗಳ ನಾಶದಿಂದ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೊಳ ಗಾಗಿದ್ದಾರೆ. ಈ ಜಿಲ್ಲೆಗಳಲ್ಲಿ ಸುಮಾರು ೨೨೦-೨೩೦ ಕಾಡಾನೆಗಳು ನಿರಂತರ ವಾಗಿ ದಾಂಧÀಲೆ ನಡೆಸುತ್ತಿದ್ದು, ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ, ನಿಯೋಗದ ಸದಸ್ಯರು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಶೇ.೯೦ ರ ಸಹಾಯಧನ ದಡಿಯಲ್ಲಿ ಸೋಲಾರ್ ಬೇಲಿ ನಿರ್ಮಾಣಕ್ಕೆ ಆದ್ಯತೆ ನೀಡಿ, ಅದರಲ್ಲೂ ಬಹುಮುಖ್ಯವಾಗಿ ಟೆಂಟಿಕಲ್ ಫೆನ್ಸಿಂಗ್ ವ್ಯವಸ್ಥೆ ಮಾಡಿಕೊಡ ಬೇಕೆಂದು ಮನವಿ ಮಾಡಲಾಯಿತು. ಈ ಹಿಂದೆ ಸಚಿವೆ ಶೋಭಾ ಕರಂದ್ಲಾಜೆಯವರ ನೇತೃತ್ವದಲ್ಲಿ ಕೇಂದ್ರ ಅರಣ್ಯ ಸಚಿವ ಹರ್ಷವರ್ಧನ್ ಅವರನ್ನು ಭೇಟಿ ಮಾಡಿ, ರೈಲ್ವೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲು ಸುಮಾರು ರೂ.೪೯೬ ಕೋಟಿ ಹಣದ ಅವಶ್ಯಕತೆಯಿದ್ದು, ರೈಲ್ವೆ ಬ್ಯಾರೀಕೆಡ್ ವ್ಯವಸ್ಥೆಯನ್ನು ಕಾರ್ಯಗತ ಗೊಳಿಸಿಕೊಡುವಂತೆ ಮನವಿ ಮಾಡಲಾಗಿತ್ತು.

ಈ ವ್ಯವಸ್ಥೆಯನ್ನು ಅನುಷ್ಟಾನ ಮಾಡುವಂತೆ ಉಮೇಶ್ ಕತ್ತಿ ಅವರನ್ನು ಬೆಳೆಗಾರರ ಒಕ್ಕೂಟ ಒತ್ತಾಯಿಸಿತು.

ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ಕುಟುಂಬದವರಿಗೆ ರೂ.೨೫ಲಕ್ಷ ಪರಿಹಾರ ನೀಡಬೇಕು. ಬೆಳೆನಷ್ಟ ಹಾಗೂ ಕೃಷಿ ಪರಿಕರಗಳ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು.

ಕಾಡಾನೆ ಸಮಸ್ಯೆ ಜೊತೆಗೆ ಇತರ ಕಾಡುಪ್ರಾಣಿಗಳಾದ ಕಾಡೆಮ್ಮೆ, ಮಂಗಗಳು, ಕಾಡುಹಂದಿ, ಹುಲಿ ಮುಂತಾದವುಗಳಿAದಲೂ ತೊಂದರೆಯುAಟಾಗುತ್ತಿದ್ದು, ಇವುಗಳನ್ನೂ ನಿಯಂತ್ರಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅರಣ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಒಕ್ಕೂಟದ ಸದಸ್ಯರು ಒತ್ತಾಯಿಸಿದರು.

ಬೆಳೆಗಾರರ ಸಮಸ್ಯೆಗಳನ್ನು ಆಲಿಸಿದ ಅರಣ್ಯ ಸಚಿವರು ವಿಧಾನಸಭಾ ಅಧಿವೇಶನ ಮುಗಿದ ನಂತರ ಕಾಡುಪ್ರಾಣಿಗಳು ಉಪಟಳ ನೀಡುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳಪರಿಶೀಲನೆ ನಡೆಸಿ, ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.

ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಹೆಚ್.ಟಿ.ಮೋಹನ್‌ಕುಮಾರ್, ನಿರ್ದೇಶಕ ವೈ.ಎಸ್. ಗಿರೀಶ್, ಮಾಜಿ ನಿರ್ದೇಶಕ ಎಂ.ಹೆಚ್. ಪ್ರಕಾಶ್, ಹಾಸನ ಜಿಲ್ಲಾ ಪ್ಲಾಂರ‍್ಸ್ ಸಂಘದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಉಪಾಧ್ಯಕ್ಷ ಕೆ.ಎನ್. ಸುಬ್ರಮಣ್ಯ, ಮಾನವ ವನ್ಯಜೀವಿ ಸಂಘರ್ಷ ಹೋರಾಟ ಸಮಿತಿಯ ಸಂಚಾಲಕ ಬಿ.ಎಸ್.ರೋಹಿತ್, ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಬಿ.ಲೋಹಿತ್, ಕಾರ್ಯದರ್ಶಿ ಆರ್.ಎಂ.ಚAದ್ರಶೇಖರ್, ನಿರ್ದೇಶಕ ಹೆಚ್.ಎಂ.ರಮೇಶ್ ಹಾಗೂ ಇತರರು ಇದ್ದರು. ಶಾಸಕರಾದ ಕೆ.ಜಿ ಬೋಪಯ್ಯ ಹಾಗೂ ಸುನಿಲ್ ಸುಬ್ರಮಣಿ ಅವರು ಕೂಡ ಈ ಸಂದರ್ಭ ಹಾಜರಿದ್ದರು.