ಚೆಂಬು, ಸೆ. ೧೬: ಸಂಬAಧಿಕ ಮಹಿಳೆಯನ್ನು ನದಿಗೆ ತಳ್ಳಿ, ಅರೆಜೀವಾವಸ್ಥೆಯಲ್ಲಿದ್ದ ಆಕೆಯನ್ನು ಬೆಟ್ಟದ ಮೇಲೆ ಹೊತೊಯ್ದು ಕಾಡಿನಲ್ಲಿನ ಮರಕ್ಕೆ ನೇತುಹಾಕಿದ್ದಲ್ಲದೆ ತಾನೂ ನೇಣಿಗೆ ಶರಣಾಗಿರುವ ಘಟನೆ ಸಂಭವಿಸಿದೆ. ಚೆಂಬು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯೆಯನ್ನು ಸಂಬAಧದಲ್ಲಿ ಆಕೆಯ ಚಿಕ್ಕಪ್ಪನೇ ಹತ್ಯೆಗೈದು ನೇಣಿಗೆ ಶರಣಾಗಿದ್ದು, ಊಹಾಪೋಹಗಳೊಂದಿಗೆ ಕೂಡಿರುವ ವಿಚಿತ್ರ ಪ್ರಕರಣ ಇದಾಗಿದೆ.

ಕೊಡಗಿನ ಗಡಿಭಾಗವಾದ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಬ್ಬಡ್ಕ ಗ್ರಾಮದ ರಾಮಳ್ಳಿ ನಿವಾಸಿ, ಚೆಂಬು ಗ್ರಾ.ಪಂ. ಸದಸ್ಯೆ ಕಮಲಕೇಶವ್ (೩೭) ಎಂಬಾಕೆ ಹತ್ಯೆಗೀಡಾದ ದುರ್ದೈವಿಯಾಗಿದ್ದು, ಸಂಬAಧದಲ್ಲಿ ಆಕೆಯ ಚಿಕ್ಕಪ್ಪನಾಗಿರುವ ಮುತ್ತಪ್ಪ (ಮುತ್ತು -೫೨) ಎಂಬಾತನೇ ಹತ್ಯೆಗೈದು ನೇಣಿಗೆ ಶರಣಾದ ವ್ಯಕ್ತಿ.

ನಿನ್ನೆಯಿಂದ ನಾಪತ್ತೆ..!

ದಬ್ಬಡ್ಕ ಗ್ರಾಮದ ರಾಮಳ್ಳಿಯಲ್ಲಿ ಅಕ್ಕ - ಪಕ್ಕದಲ್ಲೇ ನೆಲೆಸಿರುವ ಮುತ್ತಪ್ಪ ಹಾಗೂ ಕಮಲ ನಿನ್ನೆ ಸಂಜೆಯಿAದ ನಾಪತ್ತೆಯಾಗಿದ್ದರು. ಇಬ್ಬರನ್ನು ಗ್ರಾಮದಲ್ಲಿ ಹರಿಯುವ ನದಿಯ ಸೇತುವೆ ಬಳಿ ಮುತ್ತಪ್ಪ ಆಕೆಯನ್ನು ನದಿಗೆ ತಳ್ಳಿ ಎತ್ತಿಕೊಂಡು ಹೋಗಿರುವ ಬಗ್ಗೆ ಆಕೆಯ ಸಂಬAಧಿಕರು ಹೇಳಿದ ಮೇರೆಗೆ ನಿನ್ನೆ ಸಂಜೆಯಿAದ ರಾತ್ರಿವರೆಗೂ ಗ್ರಾಮಸ್ಥರು ಸೇತುವೆ, ನದಿದಂಡೆ ಹಾಗೂ ಸನಿಹದ ಬೆಟ್ಟವನ್ನೇರಿ ಕಾಡಲ್ಲೆಲ್ಲ ಹುಡುಕಾಡಿದರೂ ಯಾವದೇ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಿಗ್ಗೆ ಮತ್ತೆ ಹುಡುಕಾಟ ಆರಂಭಿಸಿದಾಗ ನದಿ ಬಳಿಯಿಂದ ಬೆಟ್ಟದಲ್ಲಿರುವ ಸುಮಾರು ಒಂದು ಕಿ.ಮೀ. ದೂರದಲ್ಲಿನ ಮರದಲ್ಲಿ ಈರ್ವರ ಮೃತದೇಹ ನೇತಾಡುತ್ತಿದ್ದುದು ಕಂಡು ಬಂದಿದೆ.

ಮೊದಲು ನದಿಗೆ ತಳ್ಳಿದ್ದ...!

ನಿನ್ನೆ ಕಮಲಳಾ ಸಂಬAಧಿ ಯೋರ್ವರ ಮಗುವಿನ ನಾಮಕರಣ ಸಮಾರಂಭಕ್ಕೆAದು ಕಮಲ, ಆಕೆಯ ಅತ್ತೆ ದೇವಕಿ, ಮಗಳು ಅರ್ಚನಾ, ಸಂಬAಧಿ ಗಿರೀಶ್ ಸಂಜೆ ೭ ಗಂಟೆ ವೇಳೆಗೆ ತೆರಳುತ್ತಿದ್ದಾಗ ಸೇತುವೆ ಬಳಿ ಮುತ್ತಪ್ಪ ಹೊಂಚು ಹಾಕಿ ಕುಳಿತಿದ್ದನೆನ್ನಲಾಗಿದೆ. ಕಮಲಾಳನ್ನು ಅಡ್ಡಗಟ್ಟಿ ಇದು ನನ್ನ ಜಾಗವಾಗಿದ್ದು, ದಾಟಿ ಹೋಗಬಾರದೆಂದು ತಾಕೀತು ಮಾಡಿದ್ದಾನೆ. ಇದು ಪಂಚಾಯಿತಿ ರಸ್ತೆಯೆಂದು ಕಮಲ ಸೇತುವೆ ದಾಟುತ್ತಿದ್ದಾಗ

(ಮೊದಲ ಪುಟದಿಂದ) ಮುತ್ತಪ್ಪ ಕಮಲಾಳನ್ನು ನದಿಗೆ ತಳ್ಳಿದ್ದಾನೆ. ಕೈಯ್ಯಲ್ಲಿದ್ದ ಕತ್ತಿ ತೋರಿಸಿ ಜೊತೆಯಲ್ಲಿದ್ದವರಿಗೆ ಬೆದರಿಸಿದ್ದಾನೆ. ನದಿಗೆ ಬಿದ್ದ ಕಮಲ ನೀರಿನ ಸೆಳೆತಕ್ಕೆ ಬದಿಗೆ ಬಂದಿದ್ದು, ಇದನ್ನು ಕಂಡ ಮುತ್ತಪ್ಪ ನದಿಗೆ ಇಳಿದು ಅರೆಪ್ರಜ್ಞಾವಸ್ಥೆಯಲ್ಲಿದ್ದ ಆಕೆಯನ್ನು ಮೇಲೆತ್ತಿ ತನ್ನ ಮನೆಯ ಕಡೆ ಹೊತ್ತೊಯ್ದಿದ್ದಾನೆ. ಇದನ್ನು ಕಂಡ ಮನೆಯವರು ಅಕ್ಕ ಪಕ್ಕದವರಿಗೆ ವಿಷಯ ತಿಳಿಸಿದ್ದು, ಎಲ್ಲರೂ ಬಂದು ಹುಡುಕಾಡಿದರೂ ಪತ್ತೆಯಾಗಿಲ್ಲ.

ಸನಿಹದ ಬೆಟ್ಟಕ್ಕೆ ಕರೆದೊಯ್ದ ಮುತ್ತಪ್ಪ ಕಾಡಿನ ಮರಕ್ಕೆ ಆಕೆಯ ಸೀರೆಯಿಂದಲೇ ತೂಗಿ ಹಾಕಿ ನಂತರ ತಾನೂ ಕೂಡ ಮರವನ್ನೇರಿ ತನ್ನ ಪಂಚೆಯಿAದಲೇ ನೇಣು ಹಾಕಿಕೊಂಡಿದ್ದಾನೆ. ಇದಕ್ಕೆ ಕುರುಹು ಎಂಬAತೆ ನದಿ ದಂಡೆಯಲ್ಲಿ ಕಮಲಾಳನ್ನು ಮೆಲಕ್ಕೆತ್ತಲು ಪರದಾಡಿರುವದು ಹಾಗೂ ಬೆಟ್ಟದ ಕಡೆಗೆ ಹೊತ್ತೊಯ್ದ ಗುರುತುಗಳು ಪತ್ತೆಯಾಗಿವೆ.

ವೈಯಕ್ತಿಕ ದ್ವೇಷ ಕಾರಣ...!

ದಬ್ಬಡ್ಕ ಗ್ರಾಮದಲ್ಲಿ ಅಕ್ಕ - ಪಕ್ಕದಲ್ಲೇ ವಾಸವಿರುವ ದೂರದ ಸಂಬAಧದ ಪೈಕಿ ಚಿಕ್ಕಪ್ಪನಾಗಿರುವ ಮುತ್ತಪ್ಪ ಹಾಗೂ ಕಮಲಾ ಕುಟುಂಬದವರು ಅನ್ನೋನ್ಯವಾಗಿಯೇ ಇದ್ದರೆಂದು ಗ್ರಾಮಸ್ಥರು ಹೇಳುತ್ತಾರೆ. ಆದರೆ ಆಕೆ ಗ್ರಾಮ ಪಂಚಾಯಿತಿ ಸದಸ್ಯೆ ಆದ ಬಳಿಕ ಆಕೆ ಜನರೊಂದಿಗೆ ಬೆರೆಯುವಂತಾದ ಬಳಿಕ ಸದಸ್ಯೆ ಮನೆಗೆ ಜನರು ಬಂದು ಹೋಗುತ್ತಿದ್ದುದು ಮುತ್ತಪ್ಪನಿಗೆ ಸಹಿಸಲಾಗದೆ, ಜಗಳ ಮಾಡುತ್ತಿದ್ದನಂತೆ. ಅಲ್ಲದೆ ಮುತ್ತಪ್ಪನ ಮನೆಯನ್ನು ದಾಟಿ ಕಮಲಳ ಮನೆಗೆ ಹೋಗಬೇಕಾಗಿರುವದರಿಂದ ‘‘ತನ್ನ ಮನೆಯ ದಾರಿಯಲ್ಲಿ ದಾಟಿದರೆ ಕಾಲು ಕಡಿಯುತ್ತೇನೆ’ ಎಂದು ಬೆದರಿಕೆ ಹಾಕಿದ್ದನಂತೆ. ಈ ಬಗ್ಗೆ ಪೊಲೀಸ್ ದೂರು ಕೂಡ ನೀಡಲಾಗಿದ್ದರಿಂದ ಮುತ್ತಪ್ಪನಿಗೆ ಆಕೆಯ ಮೇಲೆ ದ್ವೇಷ ಉಂಟಾಗಿ ವೈಯಕ್ತಿಕ ದ್ವೇಷದಿಂದಾಗಿ ಈ ರೀತಿ ಮಾಡಿರುವದಾಗಿ ಗ್ರಾಮಸ್ಥರು ಹೇಳುತ್ತಾರೆ.

ನಿರುಪದ್ರವಿ ಮನುಷ್ಯ

ಮುತ್ತಪ್ಪ ಕಟ್ಟುಮಸ್ತಾದ ಆಳಾಗಿದ್ದು, ಯಾರಿಗೂ ತೊಂದರೆ ಮಾಡದ ನಿರುಪದ್ರವಿ ಮನುಷ್ಯನಾಗಿದ್ದ. ಯಾವದೇ ಕೆಟ್ಟ ಹವ್ಯಾಸಗಳಿರಲಿಲ್ಲ. ಆದರೆ ಕುಟುಂಬದ ವಿಚಾರಕ್ಕೆ ಬಂದಾಗ ಸಿಟ್ಟಿಗೇಳುತ್ತಿದ್ದ. ಈ ಹತ್ಯೆಗೆ ವೈಯಕ್ತಿಕ ದ್ವೇಷವೇ ಕಾರಣವಾಗಿದೆ ಎಂದು ಚೆಂಬು ಗ್ರಾ.ಪಂ. ಅಧ್ಯಕ್ಷ ಹೊಸೂರು ಸೂರಜ್ ಹೇಳುತ್ತಾರೆ. ಇತ್ತ ಕಮಲ ಕೂಡ ಜನಾನುರಾಗಿಯಾಗಿದ್ದು, ಒಳ್ಳೆಯ ಕೆಲಸ ಮಾಡುತ್ತಿದ್ದಳು. ಗ್ರಾಮದಲ್ಲಿ ಜನಸೇವೆಯಲ್ಲಿ ಉತ್ತಮ ಹೆಸರು ಗಳಿಸಿದ್ದಳು ಎಂದು ಅವರು ಹೇಳುತ್ತಾರೆ.

ಏಕಾಂಗಿ ವಾಸ...!

ವಿವಾಹಿತನಾಗಿರುವ ಮುತ್ತಪ್ಪನಿಗೆ ಈರ್ವರು ಪುತ್ರರು, ಈರ್ವರು ಪುತ್ರಿಯರಿದ್ದಾರೆ. ಓರ್ವ ಪುತ್ರಿಗೆ ಕಳೆದ ವರ್ಷ ವಿವಾಹ ಕೂಡ ಆಗಿದೆ. ಆದರೆ, ಕಳೆದ ೧೫ ವರ್ಷಗಳಿಂದ ಪತ್ನಿ ಬೇಬಿ ತಮ್ಮ ಮಕ್ಕಳೊಂದಿಗೆ ಮೈಸೂರು ಬಳಿಯ ಇಲವಾಲದಲ್ಲಿ ನೆಲೆಸಿದ್ದಾರೆ. ಮುತ್ತಪ್ಪ ದಬ್ಬಡ್ಕದಲ್ಲಿ ಏಕಾಂಗಿಯಾಗಿ ವಾಸ ಮಾಡುತ್ತಿದ್ದ. ಹಾಗಾಗಿ ಕಮಲ ಕುಟುಂಬದೊAದಿಗೆ ಹೆಚ್ಚಿನ ಸಂಪರ್ಕವಿದ್ದು, ಇತ್ತೀಚೆಗೆ ದ್ವೇಷ ಭಾವನೆ ಉಂಟಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಮೃತೆ ಕಮಲ ಪತಿ ಹಾಗೂ ಪುತ್ರಿಯನ್ನು ಅಗಲಿದ್ದು, ಸ್ಥಳಕ್ಕೆ ಡಿವೈಎಸ್‌ಪಿ ಶೈಲೇಂದ್ರ, ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ರವಿಕಿರಣ್, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಕಮಲಳನ್ನು ನದಿಗೆ ತಳ್ಳಿ ನಂತರ ನೇಣು ಬಿಗಿದು ಹತ್ಯೆ ಮಾಡಿರುವ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

- ಕಿರಣ್ ಕುಂಬಳಚೇರಿ