ಮಡಿಕೇರಿ, ಸೆ. ೧೬: ಓಝೋನ್ ಪದರ ಸಂರಕ್ಷಿಸಲು ಮಾಲಿನ್ಯರಹಿತ ಹಾಗೂ ಹಚ್ಚ ಹಸಿರು ಪರಿಸರ ನಿರ್ಮಿಸಲು ಪಣತೊಡಬೇಕಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿಯ ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್ ಕರೆ ನೀಡಿದರು.
ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ವತಿಯಿಂದ ಮಡಿಕೇರಿ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ರಾಷ್ಟಿçÃಯ ಹಸಿರು ಪಡೆಯ ಇಕೋ ಕ್ಲಬ್,ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಹಾಗೂ ಕಾಲೇಜಿನ ಎನ್.ಎಸ್.ಎಸ್. ಘಟಕ ಹಾಗೂ ರೇಂಜರ್ಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಉತ್ತಮ ಜೀವನಕ್ಕಾಗಿ ಓಝೋನ್ ಎಂಬ ಘೋಷವಾಕ್ಯದಡಿ ಏರ್ಪಡಿಸಿದ್ದ ವಿಶ್ವ ಓಝೋನ್ ಪದರ ಸಂರಕ್ಷಣಾ ದಿನದ ಕುರಿತ ಜಿಲ್ಲಾಮಟ್ಟದ ಜನಜಾಗೃತಿ ಆಂದೋಲನದಲ್ಲಿ ಓಝೋನ್ ಪದರ ರಕ್ಷಣೆಯ ಮಹತ್ವ ಕುರಿತು ಗಣೇಶನ್ ಅವರು ಮಾತನಾಡಿದರು.
ಓಝೋನ್ ಪದರದ ಕ್ಷಿಪ್ರ ನಾಶಕ್ಕೆ ಕಾರಣವಾದ ಮಾಲಿನ್ಯಕಾರಕ ಪದಾರ್ಥಗಳು ವಾಯುಮಂಡಲಕ್ಕೆ ಸೇರದಂತೆ ನಾವು ಜಾಗ್ರತೆ ವಹಿಸಬೇಕು. ಇಲ್ಲದಿದ್ದಲ್ಲಿ ಓಝೋನ್ ಪದರ ಸಂಪೂರ್ಣ ನಾಶವಾದರೆ ಇಡೀ ಜೀವ ಸಂಕುಲಕ್ಕೆ ತೊಂದರೆಯಾಗುವ ಅಪಾಯವಿದೆ ಎಂದರು.
ಈ ದಿಸೆಯಲ್ಲಿ ನಾವು ವಾತಾವರಣದಲ್ಲಿ ಯಾವುದೇ ಮಾಲಿನ್ಯವನ್ನುಂಟು ಮಾಡದೆ ಪರಿಸರವನ್ನು ಸಂರಕ್ಷಿಸಬೇಕು. ಈ ಮೂಲಕ ನಾವು ಜಾಗತಿಕ ತಾಪಮಾನ ತಡೆಯುವ ಮೂಲಕ ಓಝೋನ್ ಪದರ ರಕ್ಷಿಸಿ ಭೂಮಂಡಲ ಹಾಗೂ ಜೀವಸಂಕುಲಗಳನ್ನು ಸಂರಕ್ಷಿಸಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷರೂ ಆದ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕರ್ತ ಕೆ.ಟಿ. ಬೇಬಿ ಮ್ಯಾಥ್ಯೂ ಮಾತನಾಡಿ, ಭೂಮಂಡಲದ ಸಕಲ ಜೀವರಾಶಿಗಳ ರಕ್ಷಾ ಕವಚವಾದ ಓಝೋನ್ ಪದರಕ್ಕೆ ಯಾವುದೇ ರೀತಿಯಲ್ಲೂ ಹಾನಿಯುಂಟುಮಾಡದೇ ಭವಿಷ್ಯಕ್ಕಾಗಿ ಹಸಿರು ಪರಿಸರ ನಿರ್ಮಿಸುವ ಮೂಲಕ ಭೂಗ್ರಹದ ರಕ್ಷಣೆಗೆ ಪಣ ತೊಡಗಬೇಕಿದೆ ಎಂದರು.
ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದ ಮಾತನಾಡಿದ ರಾಷ್ಟಿçÃಯ ಹಸಿರು ಪಡೆಯ ಕೊಡಗು ಜಿಲ್ಲಾ ನೋಡಲ್ ಅಧಿಕಾರಿ, ಟಿ.ಜಿ. ಪ್ರೇಮಕುಮಾರ್, ಓಝೋನ್ ಪದರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ನಾವು ಜಾಗ್ರತೆ ವಹಿಸುವ ಮೂಲಕ ಹಸಿರು ಭೂಮಿ ಹಾಗೂ ಜೀವ ಸಂಕುಲಗಳನ್ನು ಸಂರಕ್ಷಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ. ಡಿ.ಜೆ. ಜವರಪ್ಪ ಮಾತನಾಡಿ, ಪ್ರತಿಯೊಬ್ಬರೂ ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗುವ ಮೂಲಕ ಓಝೋನ್ ಪದರ ರಕ್ಷಿಸಬೇಕಿದೆ ಎಂದರು.
ಓಝೋನ್ ಪದರದ ನಾಶವನ್ನು ತಡೆಯಲು ವಾತಾವರಣದಲ್ಲಿ ಮಾಲಿನ್ಯ ನಿಯಂತ್ರಣದೊAದಿಗೆ ಜಾಗತಿಕ ತಾಪಮಾನ ತಡೆಗಟ್ಟ ಬೇಕಾಗಿದೆ ಎಂದರು.
ಎನ್ನೆಸ್ಸೆಸ್ ಅಧಿಕಾರಿ ಸಹಾಯಕ ಪ್ರಾಧ್ಯಾಪಕಿ ಹೆಚ್.ಪಿ. ನಿರ್ಮಲ, ರೇಂಜರ್ಸ್ ಘಟಕದ ಅಧಿಕಾರಿ ಬಿ. ನಮಿತ, ಉಪನ್ಯಾಸಕರು ಇದ್ದರು.
ವಿದ್ಯಾರ್ಥಿನಿ ದಿವ್ಯ ಕಾರ್ಯಕ್ರಮ ನಿರೂಪಿಸಿದರು. ಜಸ್ನಾ ಸ್ವಾಗತಿಸಿದರು, ಸಪ್ನ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ವಿತರಿಸಲಾಯಿತು. ಓಝೋನ್ ಪದರ ರಕ್ಷಣೆಗೆ ಸಂಬAಧಿಸಿದAತೆ ಪರಿಸರ ಘೋಷಣೆಗಳ ಪೋಸ್ಟರ್ಗಳನ್ನು ಪ್ರದರ್ಶಿಸಲಾಯಿತು.