ಕಳೆದ ಎರಡು ವರ್ಷಗಳಲ್ಲಿ ಕೊಡಗು ಹಿಂದೆAದೂ ಕೇಳಿ ಕಂಡರಿಯದ ಭೀಕರ ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿತ್ತು. ಸಾವು-ನೋವು, ಆಸ್ತಿ ನಷ್ಟದಿಂದಾಗಿ ಕೊಡಗು ಜಿಲ್ಲೆ ಜರ್ಜರಿತವಾಗಿತ್ತು. ಆಗಸ್ಟ್ ೫, ೨೦೨೦ ನಂತಹ ದುರ್ಘಟನೆಗೆ ಸಾಕ್ಷಿಯಾಯಿತು. ಭಾರಿ ಮಳೆಗೆ ತಲಕಾವೇರಿ ಬ್ರಹ್ಮಗಿರಿ ತಪ್ಪಲಲ್ಲಿ ಸಂಭವಿಸಿದ ಭೂಕುಸಿತಕ್ಕೆ ಸಿಲುಕಿ, ತಲಕಾವೇರಿ ಪ್ರಧಾನ ಅರ್ಚಕರು ಸೇರಿದಂತೆ ಐವರು ಸಾವನಪ್ಪಿದ್ದರು. ಅಂದಿನ ಕುಂಭದ್ರೋಣ ಮಳೆ ಸೃಷ್ಟಿಸಿದ ಅನಾಹುತಕ್ಕೆ ಜನಸಾಮಾನ್ಯ ಜೀವನ ಅಸ್ತವ್ಯಸ್ತವಾಗಿತ್ತು. ಬರೆ ಕುಸಿತವು ಸಾಕಷ್ಟು ಆಸ್ತಿಯನ್ನು ಹಾನಿಗೊಳಿಸಿತು. ಈ ರೀತಿಯ ವರುಣನ ಅವಕೃಪೆಗೆ ಮಡಿಕೇರಿ ತಾಲೂಕು ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾವೂರು ಗ್ರಾಮದ ಬಿ.ನ್. ಅಕ್ಕಮ್ಮ ಕುಟುಂಬ ಕೂಡ ತುತ್ತಾಗಿತ್ತು.

೧೨ ದನಗಳಿದ್ದ ಕೊಟ್ಟಿಗೆಯ ಮೇಲೆ ಬರೆ ಕುಸಿದು, ಕೊಟ್ಟಿಗೆ ಧ್ವಂಸವಾಗಿತ್ತು. ಒಂದು ದನ ಸ್ಥಳದಲ್ಲಿಯೆ ಮೃತಪಟ್ಟು, ಇನ್ನುಳಿದ ದನಗಳಿಗೆ ಗಂಭೀರ ಗಾಯಗಳಾಗಿದ್ದು ಅದೃಷ್ಟವಶಾತ್ ಬದುಕಿ ಉಳಿದವು. ಈ ಅನಾಹುತದಿಂದ ಕುಟುಂಬಕ್ಕೆ ಆಘಾತ ಉಂಟಾಗಿತ್ತು. ಆರ್ಥಿಕ ಸಂಕಷ್ಟದಿAದ ತಕ್ಷಣಕ್ಕೆ ಹೊಸ ಕೊಟ್ಟಿಗೆ ಕಟ್ಟುವುದು ಅಸಾಧ್ಯದ ಮಾತಾಗಿತ್ತು. ತಾತ್ಕಾಲಿಕವಾಗಿ ಟಾರ್ಪಲ್ ಹೊದಿಸಿ ದನಗಳಿಗೆ ಆಶ್ರಯ ಒದಗಿಸಿದ್ದರೂ, ವಿಪರೀತ ಮಳೆಗೆ ಇದ್ಯಾವುದು ಲೆಕ್ಕಕ್ಕಿಲ್ಲದೆ ದನಗಳಿಗೆ ತೊಂದರೆಯಾಗುತ್ತಿತ್ತು.

ಆಗ ಕುಟುಂಬದ ನೆರವಿಗೆ ಬಂದದ್ದು ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ಕಂಗೆಟ್ಟ ಕುಟುಂಬ ಸಹಾಯಯಾಚಿ ಭಾಗಮಂಡಲ ಗ್ರಾಮ ಪಂಚಾಯಿತಿಯ ಮೊರೆ ಹೋದಾಗ, ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವೈಯಕ್ತಿಕ ಕಾಮಗಾರಿ ಅಡಿಯಲ್ಲಿ ದನದ ಕೊಟ್ಟಿಗೆ ನಿರ್ಮಿಸಲು ಅವಕಾಶವಿದೆ ಎಂಬ ಮಾಹಿತಿ ಲಭ್ಯವಾಯಿತು. ಅದರನ್ವಯ ಅಂದಾಜು ವೆಚ್ಚ ರೂ. ೨೧,೦೦೦ ನಲ್ಲಿ, ೨ ತಿಂಗಳ ಒಳಗಾಗಿ ಸುಸಜ್ಜಿತ ದನದ ಕೊಟ್ಟಿಗೆ ನಿರ್ಮಿಸಲಾಯಿತು.

ಈ ಮೊದಲು ಮಣ್ಣಿನ ಕೊಟ್ಟಿಗೆ ಇತ್ತು, ಈ ಯೋಜನೆಯ ಮೂಲಕ ಸುಸಜ್ಜಿತ ಕೊಟ್ಟಿಗೆ ನಿರ್ಮಾಣವಾಯಿತು. ೩ ಹಸುಗಳಿದ್ದು, ತಿಂಗಳಿಗೆ ಹಾಲು ಮಾರಿ ಒಳ್ಳೆಯ ಸಂಪಾದನೆಯಾಗುತ್ತಿದೆ. ಎತ್ತಿನ ಮೂಲಕ ಉಳುಮೆ ಮಾಡುತ್ತೇವೆ ಹಾಗೂ ಗೊಬ್ಬರ ಕೃಷಿ ಚಟುವಟಿಕೆಗೆ ಉಪಯೋಗವಾಗುತ್ತಿದೆ. ಈ ಯೋಜನೆಯಿಂದ ಬಹಳ ಸಹಾಯವಾಯಿತು ಎಂದು ರೈತ ಮಹಿಳೆ ಬಿ.ಎನ್. ಅಕ್ಕಮ್ಮ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

- ಅಕ್ಷಿತ ಕಡ್ಯದ, ಐ.ಇ.ಸಿ. ಸಂಯೋಜಕರು, ಮಡಿಕೇರಿ ತಾ.ಪಂ.