ಸೋಮವಾರಪೇಟೆ, ಸೆ. ೧೫: ವೀರಭದ್ರೇಶ್ವರ ವರ್ದಂತಿ ಮಹೋತ್ಸವಕ್ಕೆ ಸಮೀಪದ ನೇಗಳ್ಳೆ ಗ್ರಾಮದಲ್ಲಿರುವ ವೀರಭದ್ರೇಶ್ವರ ದೇವಾಲಯದಲ್ಲಿ, ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಮನೆಹಳ್ಳಿ ಮಠಾಧೀಶರಾದ ಶ್ರೀ ಮಹಾಂತ ಶಿವಲಿಂಗಸ್ವಾಮೀಜಿ ಅವರುಗಳು ವಿದ್ಯುಕ್ತ ಚಾಲನೆ ನೀಡಿದರು.
ವೀರಭದ್ರೇಶ್ವರ ದೇವಾಲಯ ಸಮಿತಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಅಖಿಲ ಭಾರತ ವೀರಶೈವ ಮಹಾಸಭಾ, ತಪೋವನ ಕ್ಷೇತ್ರ ಮನೆಹಳ್ಳಿ ಮಠ, ವೀರಶೈವ ಲಿಂಗಾಯತ ಜಂಗಮ ಅರ್ಚಕರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ವರ್ದಂತಿ ಮಹೋತ್ಸವ ನಡೆಯಿತು.
ವೀರಭದ್ರೇಶ್ವರ ಸ್ವಾಮಿ ಜನ್ಮವರ್ದಂತಿ ಮಹೋತ್ಸವದ ಅಂಗವಾಗಿ ನೇಗಳ್ಳೆ ಗ್ರಾಮದ ದೇವಾಲ ಯದ ಆವರಣದಲ್ಲಿ ಮಠಾಧೀಶರ ಸಾನ್ನಿಧ್ಯದಲ್ಲಿ ಅರ್ಚಕ ವೇದಮೂರ್ತಿ ಯವರ ಪುರೋಹಿತ್ವದಲ್ಲಿ ಜಿಲ್ಲೆಯ ವಿವಿಧ ಅರ್ಚಕರುಗಳು ರುದ್ರಾಭಿಷೇಕ, ಅಷ್ಟೋತ್ತರ ಸೇರಿದಂತೆÀ ವಿಶೇಷ ಪೂಜೆ ನೆರವೇರಿಸಿದರು.
ಈ ಸಂದರ್ಭ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕತೆಯಿಂದ ನೆಮ್ಮದಿ ಕಾಣಲು ಸಾಧ್ಯ. ಇಂದಿನ ಜಂಜಾಟದ ಜೀವನದಲ್ಲಿ ಮನಃಶಾಂತಿಗಾಗಿ ದೇವರ ಮೊರೆಹೋಗುವುದು ಅನಿವಾರ್ಯವಾಗಿದೆ ಎಂದರು.
ದುಷ್ಟ ಶಕ್ತಿಗಳ ನಾಶಕ್ಕಾಗಿಯೇ ಶಿವನ ಶಕ್ತಿಯಿಂದ ಅವತರಿಸಿದವನು ವೀರಭದ್ರಸ್ವಾಮಿ. ಲೋಕಕಲ್ಯಾಣದ ಸಂಕಲ್ಪತೊಟ್ಟು ಆಂಜನೇಯ ಸ್ವಾಮಿಗೆ ಗುರುವಾಗಿ ಲಿಂಗದೀಕ್ಷೆ ಕೊಟ್ಟ ಸ್ವಾಮಿಯ ವರ್ದಂತಿ ಮಹೋತ್ಸವ ಎಲ್ಲೆಡೆಯೂ ನಡೆಯಬೇಕು ಎಂದು ಅಭಿಪ್ರಾಯಿಸಿದರು.
ಶ್ರೀ ತಪೋವನಕ್ಷೇತ್ರ ಮನೆಹಳ್ಳಿ ಮಠಾಧೀಶರಾದ ಶ್ರೀ ಮಹಾಂತ ಶಿವಲಿಂಗಸ್ವಾಮೀಜಿ ಮಾತನಾಡಿ, ವಿವಿಧ ಆಚಾರ, ವಿಚಾರಗಳೊಂದಿಗೆ ಆಧ್ಯಾತ್ಮಿಕ ಹಿನ್ನೆಲೆಯುಳ್ಳ ರಾಷ್ಟç ನಮ್ಮದು. ಇಲ್ಲಿ ದೈವೀ ಶಕ್ತಿಗಳ ನಂಬಿಕೆಯಿAದ ಭಕ್ತರು ಹಲವು ಹಬ್ಬಗಳನ್ನು ಆಚರಿಸುತ್ತಾರೆ. ಆ ಮೂಲಕ ನೆಮ್ಮದಿ ಕಾಣುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಎಂ.ಟಿ. ಸುರೇಂದ್ರ ವಹಿಸಿದ್ದರು. ಈ ಸಂದರ್ಭ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ವೀರಶೈವ ಲಿಂಗಾಯತ ಜಂಗಮ ಅರ್ಚಕ ಹಾಗೂ ಪುರೋಹಿತ ಸಂಘದ ಜಿಲ್ಲಾಧ್ಯಕ್ಷ ಮೋಹನಮೂರ್ತಿ, ಕಾರ್ಯದರ್ಶಿ ಸೋಮಶೇಖರ ಶಾಸ್ತಿç, ದೇವಾಲಯ ಸಮಿತಿ ಕಾರ್ಯದರ್ಶಿ ನೇಗಳ್ಳೆ ಜೀವನ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಪ್ರೇಮನಾಥ್, ಕಾರ್ಯದರ್ಶಿ ಜಯರಾಜ್, ದೇವಾಲಯ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು. ದೇವಾಲಯದಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು.