ಸಿದ್ದಾಪುರ, ಸೆ. ೧೫: ಪ್ರವಾಹದಿಂದ ಮನೆ ಕಳೆದುಕೊಂಡವರು ಹಾಗೂ ಮನೆಯಿಲ್ಲದೆ ನಿರ್ಗತಿಕರಾಗಿರುವ ಕುಟುಂಬಗಳಿಗೆ ಸಿದ್ದಾಪುರ ಮುಸ್ಲಿಂ ಅಸೋಸಿಯೇಷನ್ ಕಮಿಟಿ ಹಾಗೂ ಇತರ ಸೇವ ಸಂಘಟನೆಗಳ ಸಹಕಾರ ದೊಂದಿಗೆ ಸಿದ್ದಾಪುರ ಹಾಜಿ ಉಸ್ಮಾನ್ ನಗರದ ಜಮಾಯತ್ ಕಾಲೋನಿಯಲ್ಲಿ ನಿರ್ಮಿಸಲಾಗಿರುವ ಮೊದಲನೇ ಹಂತದ ೧೪ಮನೆಗಳ ಹಸ್ತಾಂತರ ಕಾರ್ಯ ತಾ. ೧೭ರಂದು ನಡೆಯಲಿದೆ ಎಂದು ಸಿದ್ದಾಪುರ ಮುಸ್ಲಿಂ ಜಮಾಅತ್ ಕಮಿಟಿ ಅಧ್ಯಕ್ಷ ಯು.ಎಂ ಮುಸ್ತಫಾ ಹಾಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
೨ ವರ್ಷಗಳ ಹಿಂದೆ ಪ್ರವಾಹ ಹಾಗೂ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡಬೇಕೆಂದು ಅಂದಿನ ಅಧ್ಯಕ್ಷ ದಿ. ಕೆ. ಉಸ್ಮಾನ್ ಹಾಜಿ ನೇತೃತ್ವದಲ್ಲಿ ಮುಸ್ಲಿಂ ಜಮಾಅತ್ ಕಮಿಟಿ ೩೦ ಮನೆಗಳ ನಿರ್ಮಾಣ ಕಾರ್ಯಕ್ಕೆ ಮುಂದಾಗಿತ್ತು. ಇದೀಗ ಮೊದಲನೇ ಹಂತದ ೧೪ಮನೆಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣ ಗೊಂಡಿದ್ದು ತಾ. ೧೭ ರಂದು ಕರಡಿ ಗೋಡು ಭಾಗದ ಸಂತ್ರಸ್ತ ಕುಟುಂಬ ಗಳಿಗೆ ಹಸ್ತಾಂತರಿಸ ಲಾಗುವುದು.
ಜಾಗ ಹಾಗೂ ಮನೆ ನಿರ್ಮಾಣ ಕಾರ್ಯಕ್ಕೆ ಜಮೀಯತ್ ಉಲಮಾ ಕರ್ನಾಟಕ, ಇಮ್ದಾದ್ ಚಾರಿಟೇಬಲ್ ಟ್ರಸ್ಟ್, ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಸೇರಿ ದಂತೆ ಇತರ ಸೇವಾ ಸಂಘಟನೆಗಳು ಕೈಜೋಡಿಸಿದ್ದು ದಾನಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳ ಸಮ್ಮುಖದಲ್ಲಿ ಮನೆ ಕೀ ಹಸ್ತಾಂತರ ಕಾರ್ಯ ನಡೆಯಲಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮಸ್ತ ಉಪ ಖಾಝಿ ಎಂ. ಎಂ ಅಬ್ದುಲ್ಲಾ ಫೈಝಿ
(ಮೊದಲ ಪುಟದಿಂದ) ಪ್ರಾರ್ಥನೆ ನೆರವೇರಿಸಲಿದ್ದು, ಸಿದ್ದಾಪುರ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಯು. ಎಂ ಮುಸ್ತಫಾ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಎಂ.ಎ ಮೊಹಮ್ಮದ್ ಕಾರ್ಯಕ್ರಮ ಉದ್ಘಾಟಿಸಲಿದ್ದು ಜಮೀಯತ್ ಉಲಮಾ ಹಿಂದ್ ರಾಷ್ಟಿçÃಯ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಸಂತ್ರಸ್ತರಿಗೆ ಮನೆ ಕೀ ಹಸ್ತಾಂತರ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಮೀಯತ್ ಉಲಮಾ ಹಿಂದ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಫ್ತಿ ಸೈಯ್ಯದ್ ಮಾಸೂಮ್ ಸಾಖಿಬ್ ಸಾಹಿಬ್, ಕರ್ನಾಟಕ ಜಮೀಯತ್ ಉಲಮಾ ಅಧ್ಯಕ್ಷ ಮೌಲಾನಾ ಅಬ್ದುಲ್ ರಹೀಮ್ ರಾಸೀದಿ ಸಾಹೇಬ್, ಕನೆಕ್ಟಿಂಗ್ ಪಾಟ್ಲ ಚೇರ್ಮೆನ್ ಅಬ್ದುಲ್ ರೆಹಮಾನ್, ಇಮ್ದಾದ್ ಚಾರಿಟ್ರಬಲ್ ಟ್ರಸ್ಟ್ ಚೇರ್ಮನ್ ಬಶೀರ್ ಸಾಹೇಬ್, ಶಾಸಕ ಕೆ.ಜಿ. ಬೋಪಯ್ಯ, ಎಂಎಲ್ಸಿ ಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಮಾಜಿ ಶಾಸಕ ಕೆ.ಎಂ ಇಬ್ರಾಹಿಂ ಮಾಸ್ಟರ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್,ಜಿಲ್ಲಾ ಪಂಚಾಯಿತಿ ಸಿಇಓ ಭಂವರ್ ಸಿಂಗ್ ಮೀನಾ, ಚೆಸ್ಕಾಂ ಮುಖ್ಯ ಅಧಿಕಾರಿ ಅಶೋಕ್,ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ತುಳಸಿ, ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಇಖಾ ಚಾರಿಟ್ರಬಲ್ ಟ್ರಸ್ಟ್ ಅಧ್ಯಕ್ಷ ಸಿ. ಕೆ ಬಸೀರ್ ಹಾಜಿ, ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಟಿ.ಸಿ. ಸಿರಾಜುದ್ದೀನ್, ಕಾರ್ಯದರ್ಶಿ ಲತೀಫ್ ಹಾಜಿ, ಸಿದ್ದಾಪುರ ಮುಸ್ಲಿಂ ಅಸೋಸಿ ಯೇಷನ್ ಮಾಜಿ ಅಧ್ಯಕ್ಷ ಪಿ.ಸಿ. ಹಸೈನಾರ್ ಹಾಜಿ, ಕೆಪಿಸಿಸಿ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ, ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ ಯಾಕೂಬ್, ಸಿದ್ದಾಪುರ ಜುಮ್ಮಾ ಮಸೀದಿ ಖತೀಬ್ ನೌಫಲ್ ಹುದವಿ, ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭ ಮುಸ್ಲಿಂ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ರವೂಫ್ ಹಾಜಿ, ಕಾರ್ಯದರ್ಶಿ ಮೊಹಮ್ಮದ್ ಅಲಿ, ಸಹ ಕಾರ್ಯದರ್ಶಿ ಕರೀಂ, ಸದಸ್ಯರುಗಳಾದ ನವಾಜ್ ಸೇರಿದಂತೆ ಮತ್ತಿತರರು ಇದ್ದರು.