ಮಡಿಕೇರಿ, ಸೆ. ೧೫:ಮಡಿಕೇರಿ ನಗರಸಭೆ ವತಿಯಿಂದ ನಿನ್ನೆ ದಿನ ಬೀಡಾಡಿ ದನಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗಿದ್ದು, ಸುಮಾರು ೧೫ ಜಾನುವಾರುಗಳನ್ನು ಮೈಸೂರಿನ ಗೋ ಶಾಲೆಗೆ ಇಂದು ಬೆಳಿಗ್ಗೆ ಸಾಗಿಸಲಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿರುವ ಜಾನುವಾರುಗಳನ್ನು ಸೆರೆ ಹಿಡಿಯಲಾಗುವುದು ಎಂದು ಇತ್ತೀಚೆಗೆ ನಗರಸಭೆ ಪತ್ರಿಕಾ ಪ್ರಕಟಣೆ ನೀಡಿತ್ತು. ಅದರಂತೆ ನಿನ್ನೆ ದಿನ ಜಾನು ವಾರುಗಳನ್ನು ಸೆರೆ ಹಿಡಿಯಲಾಯಿತು. ಅದರಲ್ಲಿ ೪ ಜಾನುವಾರುಗಳ ಮಾಲೀಕರು ತಮ್ಮ ಜಾನುವಾರುಗಳನ್ನು ಬಿಡಿಸಿಕೊಂಡು ಹೋಗಿದ್ದಾರೆ. ೧೫ ಜಾನುವಾರುಗಳನ್ನು ಮೈಸೂರು ಪಿಂಜರ್ ಪೋಲ್ ಸೊಸೈಟಿ ಗೋ ಶಾಲೆಗೆ ಲಾರಿಯಲ್ಲಿ ಸಾಗಿಸಲಾಗಿದೆ.
ಇನ್ನೆರಡು ಮೂರು ದಿನಗಳಲ್ಲಿ ಮತ್ತೊಮ್ಮೆ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಇನ್ನುಳಿದ ಬೀಡಾಡಿ ಜಾನುವಾರುಗಳನ್ನು ಹಿಡಿದು ಗೋಶಾಲೆಗೆ ರವಾನಿಸಲಾಗುವುದು. ಇಂದು ಕಳುಹಿಸಲಾದ ಜಾನುವಾರು ಗಳಲ್ಲಿ ೯ ಎತ್ತು, ೬ ಹಸುಗಳಿದ್ದವು ಎಂದು ನಗರಸಭಾ ಆಯುಕ್ತ ರಾಮದಾಸ್ ತಿಳಿಸಿದ್ದಾರೆ.