ಸುಂಟಿಕೊಪ್ಪ, ಸೆ. ೧೫: ಕಾನ್ ಬೈಲ್ ತೋಟದ ಮಹೇಂದ್ರ ಎಂಬವರ ಗದ್ದೆಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು ಕೃಷಿಫಸಲಗಳನ್ನು ತಿಂದು ನಾಶಗೊಳಿಸಿದೆ.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ರಾಜೇಂದ್ರ ಅವರ ೫ ಎಕ್ರೆ ನಾಟಿ ಮಾಡಿದ ಗದ್ದೆಗಳಿಗೆ ಕಳೆದ ಒಂದು ವಾರದಿಂದ ರಾತ್ರಿ ವೇಳೆ ಕಾಡಾನೆಗಳು ದಾಳಿ ಮಾಡಿ ಬೆಳೆದು ನಿಂತ ಪೈರುಗಳನ್ನು ನಷ್ಟಪಡಿಸಿವೆ ಎಂದು ತೋಟ ವ್ಯವಸ್ಥಾಪಕ ಪ್ರದೀಪ್ ತಿಳಿಸಿದ್ದಾರೆ. ನಿರಂತರ ನೆಟ್ಲಿ ಎ., ಪನ್ಯ, ಹರದೂರು ತೋಟಗಳಿಗೆ ಕಾಡಾನೆಗಳು ಮಧ್ಯರಾತ್ರಿ ವೇಳೆ ತೋಟಕ್ಕೆ ಆಹಾರ ಅರಸಿ ಬರುವ ಕಾಡಾನೆಗಳು ತೋಟದಲ್ಲಿ ತಿÀನ್ನಲು ಎನೂ ಸಿÀಗದಿದ್ದಾಗ ನೇರವಾಗಿ ಗದ್ದೆಗಳಿಗೆ ಆಗಮಿಸುತ್ತಿದ್ದು ಇದರಿಂದ ಬತ್ತದ ಕೃಷಿ ಮಾಡಿದವರಿಗೆ ಉಳಿಗಾಲವಿಲ್ಲದಂತಾಗಿದೆ ಎಂದು ಈ ಭಾಗದ ಕೃಷಿಕರು ಆತಂಕ ವ್ಯಕ್ತ ಪಡಿಸಿದ್ದಾರೆ.

ಅರಣ್ಯ ಇಲಾಖೆ ವಿರುದ್ಧ ಆಕ್ರೋಶ: ಗ್ರಾಮದಲ್ಲಿ ಕಾಡಾನೆಗಳ ಉಪಟಳ ತೋಟ ಗದ್ದೆಗಳಲ್ಲಿ ದಿನದಿಂದ ದಿನಕ್ಕೆ ಎಲ್ಲೆ ಮೀರಿದ್ದು ಕೃಷಿಫಸಲುಗಳನ್ನು ತಿಂದು ಧ್ವಂಸಗೊಳಿಸುತ್ತಿರುವ ಬಗ್ಗೆ ದೂರು ನೀಡಿದ್ದರೂ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆ ಹರಿಸದೆ ನಿರ್ಲಕ್ಷö್ಯತೆ ವಹಿಸುತ್ತಿದ್ದಾರೆ. ಕಳೆದ ೧೫ ದಿನಗಳಿಂದ ಎಮ್ಮೆಗುಂಡಿ, ನೆಟ್ಲಿ ಎ, ನೆಟ್ಲಿ ಬಿ, ವ್ಯಾಪ್ತಿಯ ತೋಟಗಳಲ್ಲಿ ಕಾಡಾನೆಗಳು ಹಗಲಿನಲ್ಲಿ ಬಿಡುಬಿಟ್ಟಿದ್ದು ಕೂಲಿ ಕಾರ್ಮಿಕರು ತೋಟಗಳಲ್ಲಿ ಕೃಷಿಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅತಂಕಪಡುವAತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.