ಗೋಣಿಕೊಪ್ಪಲು, ಸೆ. ೧೫: ಕಳೆದ ಹಲವು ವರ್ಷಗಳಿಂದ ಕೆಟ್ಟು ಹೋಗಿದ್ದ ಟ್ರಾನ್ಸ್ಫಾರ್ಮರ್ ಅನ್ನು ಸರಿಪಡಿಸುವಲ್ಲಿ ರೈತ ಸಂಘ ಯಶಸ್ವಿಯಾಗಿದೆ. ಪೊನ್ನಂಪೇಟೆ ನೂತನ ತಾಲೂಕಿನ ಈಚೂರು, ಕುಂದಗ್ರಾಮದ ಜನತೆಗೆ ವಿದ್ಯುತ್ ನೀಡುವ ಸಲುವಾಗಿ ೨೦೧೩ ರಂದು ೨೫ ಕೆವಿಯ ಟ್ರಾನ್ಸ್ಫಾರ್ಮರ್ ಅನ್ನು ಅಳವಡಿಸಲಾಗಿತ್ತು. ನಂತರ ಈ ಟ್ರಾನ್ಸ್ಫಾರ್ಮರ್ ಹಾಳಾಗಿದ್ದು, ಗ್ರಾಮದ ಜನರಿಗೆ ವೋಲ್ಟೇಜ್ ಇಲ್ಲದೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ಗ್ರಾಮದ ಜನತೆ ಅನೇಕ ಬಾರಿ ಚೆಸ್ಕಾಂ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದರೂ ವಿದ್ಯುತ್ ಸಮಸ್ಯೆ ಪರಿಹಾರವಾಗಿರಲಿಲ್ಲ. ಎಫ್-೯ ಹಾತೂರು ಫೀಡರ್ ಲೈನ್‌ನಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಎದುರಾಗಿತ್ತು.
ಚೆಸ್ಕಾಂ ಸಿಬ್ಬಂದಿಗಳು ಅನೇಕ ಬಾರಿ ದುರಸ್ತಿ ಕಾರ್ಯ ನಡೆಸಿದರೂ ಪ್ರಯೋಜನವಾಗಿರಲಿಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡಿದ್ದರು. ಮನು ಸೋಮಯ್ಯನವರು ಚೆಸ್ಕಾಂನ ಮಡಿಕೇರಿಯ ಹಿರಿಯ ಅಧಿಕಾರಿಯವರನ್ನು ಭೇಟಿ ಮಾಡಿ ಗ್ರಾಮದ ವಿದ್ಯುತ್ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಆದಷ್ಟು ಬೇಗನೇ ಗ್ರಾಮಕ್ಕೆ ನೂತನ ಟ್ರಾನ್ಸ್ಫಾರ್ಮರ್ ಅನ್ನು ಅಳವಡಿಸಿ ಸಮಸ್ಯೆ ಲ್ಲ. ಇದರಿಂದ ಬೇಸತ್ತ ಗ್ರಾಮದ ಜನತೆ ರೈತ ಬಗೆಹರಿಸುವಂತೆ ಒತ್ತಾಯ ಮಾಡಿದ್ದರು.
ರೈತ ಸಂಘದ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ೨೫ ಕೆವಿ ಟ್ರಾನ್ಸ್ಫಾರ್ಮರ್ ಅನ್ನು ನೀಡುವ ಮೂಲಕ ಗ್ರಾಮದ ಜನತೆಗೆ ಹಲವು ವರ್ಷಗಳಿಂದ ನೆನೆಗುದಿಯಲ್ಲಿದ್ದ ಸಮಸ್ಯೆಗೆ ಪರಿಹಾರ ನೀಡಿದರು. ನೂತನವಾಗಿ ಅಳವಡಿಸಲಾಗಿದ್ದ ಟ್ರಾನ್ಸ್ಫಾರ್ಮರ್ ಅನ್ನು ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಉದ್ಘಾಟಿಸಿದರು. ಈ ವೇಳೆ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೇಮಾಡ ಮಂಜುನಾಥ್, ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ಕುಂದ ಗ್ರಾಮ ಸಂಚಾಲಕರಾದ ತೀತರಮಾಡ ಶರಣು, ಚಿಮ್ಮಣಮಾಡ ತ್ರಿಶೂಲ, ರೈತ ಮುಖಂಡರುಗಳಾದ ಪಡಿಜ್ಞರಂಡ ಗಿರೀಶ್, ಚೆಸ್ಕಾಂನ ಸಹಾಯಕ ಇಂಜಿನಿಯರ್ ಕೃಷ್ಣ ಕುಮಾರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.