ಗೋಣಿಕೊಪ್ಪಲು, ಸೆ. ೧೪: ಭಾರೀ ಮಳೆ ಗಾಳಿಗೆ ಮನೆಯ ಸಮೀಪವಿದ್ದ ಮರವೊಂದು ಮನೆಯ ಮೇಲೆ ಮುರಿದು ಬಿದ್ದ ಪರಿಣಾಮ ಮನೆಯ ಒಂದು ಭಾಗವು ಜಖಂಗೊAಡಿದೆ. ದ.ಕೊಡಗಿನ ಹುದಿಕೇರಿ ಹೋಬಳಿಯ ಬೇಗೂರು ಗ್ರಾಮದ ನಿವಾಸಿ ಮಲ್ಲಂಡ ಬಿ.ಪೂಣಚ್ಚ ಎಂಬವರ ಮನೆಯ ಮೇಲೆ ರಾತ್ರಿ ವೇಳೆಯಲ್ಲಿ ಮರ ಮುರಿದು ಬಿದ್ದಿದೆ.

ಕಳೆದ ಕೆಲವು ದಿನಗಳಿಂದ ವಿಪರೀತ ಮಳೆ ಹಾಗೂ ಗಾಳಿ ಈ ಭಾಗದಲ್ಲಿ ಹೆಚ್ಚಾಗಿದೆ. ಸೋಮವಾರ ಸಂಜೆಯ ವೇಳೆ ಸುರಿದ ಮಳೆಯಿಂದಾಗಿ ಮನೆಯ ಸಮೀಪವೇ ಇದ್ದ ಭಾರೀ ಗಾತ್ರದ ಮರವು ಮುರಿದು ಮನೆಯ ಒಂದು ಭಾಗದ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಮನೆಯ ಹೆಂಚು, ಗೋಡೆ, ಕಿಟಕಿ ಬಾಗಿಲುಗಳಿಗೆ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಸುದ್ದಿ ತಿಳಿದ ಹುದಿಕೇರಿ ಹೋಬಳಿಯ ಕಂದಾಯ ಅಧಿಕಾರಿ ನಿತಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.